ಟಿ20 ಸರಣಿ: ಭಾರತಕ್ಕೆ 4 ವಿಕೆಟ್ ಜಯ

235

ಅಮೆರಿಕ:ವಿರಾಟ್ ಕೊಹ್ಲಿ ನೇತೃತ್ವದ ಭಾರತೀಯ ತಂಡ ವೆಸ್ಟ್ ಇಂಡೀಸ್ ವಿರುದ್ಧದ ಮೂರು ಪಂದ್ಯಗಳ ಟಿ 20 ಸರಣಿಯ ಮೊದಲ ಟಿ20 ಪಂದ್ಯದಲ್ಲಿ ಭಾರತ 4 ವಿಕೆಟ್‌ಗಳಿಂದ ಜಯಗಳಿಸಿದೆ.

ಗೆಲ್ಲಲು 96 ರನ್‌ ಗಳಿಸುವ ಗುರಿ ಪಡೆದ ಭಾರತ ತಂಡವು ಕೆಲವು ವಿಕೆಟ್‌ ಕಳೆದುಕೊಂಡು ಆತಂಕಕ್ಕೆ ಒಳಗಾಯಿತು. ಆದರೆ ಗುರಿ ಅಲ್ಪಮೊತ್ತ ಇದ್ದ ಕಾರಣ ಭಾರತ 17.2 ಓವರ್‌ಗಳಲ್ಲಿ 6 ವಿಕೆಟ್‌ ಕಳೆದುಕೊಂಡು 98 ರನ್‌ ಗಳಿಸಿ ಜಯಭೇರಿ ಬಾರಿಸಿತು.

ಭಾರತೀಯ ತಂಡವು ಉತ್ತಮ ಮಟ್ಟದ ಬೌಲಿಂಗ್‌ ದಾಳಿ ಮಾಡಿದರು. ಭಾರತದ ಪರ ಸೈನಿ 17 ರನ್ನಿಗೆ 3 ವಿಕೆಟ್‌ ಕಿತ್ತು ಮಿಂಚಿದರು.

ಕೈರನ್‌ ಪೊಲಾರ್ಡ್‌ ಅವರನ್ನು ಹೊರತುಪಡಿಸಿ ತಂಡದ ಇತರ ಯಾವುದೇ ಆಟಗಾರ ಭಾರತೀಯ ದಾಳಿಯನ್ನು ಉತ್ತರಿಸಲು ಅಸಮರ್ಥರಾದರು. ಪೊಲಾರ್ಡ್‌ ಅವರು 2 ಬೌಂಡರಿ ಮತ್ತು 4 ಸಿಕ್ಸರ್‌ ನೆರವಿನಿಂದ 49 ರನ್‌ ಹೊಡೆದಿದ್ದರು.

ರೋಹಿತ್‌, ನಾಯಕ ಕೊಹ್ಲಿ , ಮನೀಷ್‌ ಪಾಂಡೆ ಸ್ವಲ್ಪಮಟ್ಟಿಗೆ ಹೋರಾಟದ ಬ್ಯಾಟಿಂಗ್‌ ಪ್ರದರ್ಶಿಸಿದರು. ಕೊನೆಯಲ್ಲಿ ವಾಷಿಂಗ್ಟನ್‌ ಸುಂದರ್‌ ಸಿಕ್ಸರ್‌ ಬಾರಿಸಿ ತಂಡದ ಗೆಲುವು ಸಾರಿದರು.

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.