ಲಂಡನ್: ಒವಲ್ ನಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ನಡೆಸಿದ ಭಾರತ ಐವತ್ತು ಒವರ್ ಗಳಲ್ಲಿ 352 ರನ್ ಗಳಿಸಿ ಆಸ್ಟ್ರೇಲಿಯಾಕ್ಕೆ 353 ರ ಬೃಹತ್ ಗುರಿ ನಿಗದಿ ಪಡಿಸಿದೆ. ಭಾರತದ ಪರ ಶಿಖರ್ ಧವನ್ (117) ರನ್ ಬಾರಿಸಿ ಭದ್ರ ಬುನಾದಿ ಹಾಕಿಕೊಟ್ಟರು. ಇವರ ಶತಕದಲ್ಲಿ ಆಕರ್ಷಕ 16 ಬೌಂಡರಿಗಳು ಸೇರಿದ್ದವು.

ಇನ್ನು ರೋಹಿತ್ ಶರ್ಮಾ ನಿಧನಗತಿಗೆ ಮೋರೆ ಹೋಗಿ 70 ಎಸೆತದಲ್ಲಿ 57 ರನ್ ಬಾರಿಸಿ ಧವನ್ ಗೆ ಉತ್ತಮ ಸಾಥ್ ನೀಡಿದರು. ವಿರಾಟ್ ಕೊಹ್ಲಿ 77 ಎಸೆತದಲ್ಲಿ ಎರಡು ಸಿಕ್ಸರ್, ನಾಲ್ಕು ಬೌಂಡರಿಗಳನ್ನೊಳಗೊಂಡ 82 ರನ್ ಗಳ ಕೊಡುಗೆ ಸಲ್ಲಿಸಿದರು.

ಹೊಡಿಬಡಿ ಆಟವಾಡಿದ ಹಾರ್ದಿಕ್ ಪಾಂಡ್ಯ ಕೇವಲ 27 ಎಸೆತದಲ್ಲಿ 48 ರನ್ ಕೊಳ್ಳೆಹೊಡೆದರು. ಇದರಲ್ಲಿ ಮೂರು ಸಿಕ್ಸರ್, ನಾಲ್ಕು ಬೌಂಡರಿ ಮೂಲಕ ಪ್ರೇಕ್ಷಕರನ್ನು ರಂಜಿಸಿದರು. ಕೊನೆಯಲ್ಲಿ ಕೆ.ಎಲ್ ಅಶೋಕ್ ಮೂರು ಎಸೆತದಲ್ಲಿ 11 ರನ್ ಬಾರಿಸಿ ತಂಡದ ಮೊತ್ತ 352 ಕ್ಕೆ ತಲುಪುವಂತೆ ನೋಡಿಕೊಂಡರು.

ಆಸ್ಟ್ರೇಲಿಯಾ ಪರ ಸ್ಟೊಯಿನೀಸ್ 7 ಒವರಿನಲ್ಲಿ 62 ರನ್ನು ಬಿಟ್ಟುಕೊಟ್ಟು ಎರಡು ವಿಕೆಟ್ ಕಿತ್ತರೆ. ಪ್ಯಾಟ್ ಕಮ್ಮಿಸ್ ಹತ್ತು ಒವರ್ ನಲ್ಲಿ 55 ರನ್ ನೀಡಿ ಒಂದು ವಿಕೆಟ್ ಪಡೆದರು. ಉಳಿದ ಬೌಲರ್ ಗಳು ಇಂದು ಭಾರತದ ದಾಂಡಿಗರೆದುರು ದುಬಾರಿಯೆನಿಸಿಕೊಂಡರು.

ನಂತರ ಬ್ಯಾಟಿಂಗ್ ಆರಂಭಿಸಿದ ಆಸ್ಟ್ರೇಲಿಯಾ ಒಂದು ಹಂತದಲ್ಲಿ ಗೆಲ್ಲುವ ಸ್ಥಿತಿಯಲ್ಲಿತ್ತು. ಆರಂಭಿಕ ಆಟಗಾರರಾದ ಡೇವಿಡ್ ವಾರ್ನರ್ ಮತ್ತು ಫ್ರಿಂಚ್ ಉತ್ತಮ‌ ಆರಂಭ ಒದಗಿಸಿದ್ದರು.ಆದರೆ ಫ್ರಿಂಚ್ 37 ರನ್ ಗಳಿಸಿದಾಗ ಎರಡು ರನ್ ಕಸಿಯಲು ಹೋಗಿ ರನೌಟಾದರು. ನಂತರ ಸ್ಮಿತ್ ಮತ್ತು ಡೇವಿಡ್ ಗೆಲುವಿನತ್ತ ಮುನ್ನುಗ್ಗುತ್ತಿದ್ದಾಗ ಸಿಕ್ಸರ್ ಗೆ ಯತ್ನಿಸಿದ ವಾರ್ನರ್ 56 ರನ್ ಗಳಿಸಿರುವಾಗ ಕ್ಯಾಚಿತ್ತು ಪೆವೆಲಿಯನತ್ತ ಮುಖ ಮಾಡಿದರು. ನಂತರ ಸ್ಮಿತ್ ಭುವನೇಶ್ವರ್ ಎಸೆತದಲ್ಲಿ ಎಲ್ ಬಿಡಬ್ಲ್ಯೂ ಬಲೆಗೆ ಬಿದ್ದರು. ಮ್ಯಾಕ್ಸ್ ವೆಲ್ ಸಿಕ್ಸರ್ ಹೊಡೆಯುವ ಯತ್ನದಲ್ಲಿ ಚಹಲ್ ಗೆ ಕ್ಯಾಚ್ ಎಂಡ್ ಬೌಲ್ಡಾದರು. ಅಲೆಕ್ಸ್ ಕ್ಯಾರೆ (55) ಸ್ವಲ್ಪ ಮಟ್ಟಿನ ಪ್ರತಿರೋಧ ಒಡ್ಡಿ ಗೆಲುವಿನತ್ತ ತಂಡವನ್ನು ಮುನ್ನಡೆಸುವ ಯತ್ನದಲ್ಲಿದ್ದರು. ಆದರೆ ಕೊನೆಯಲ್ಲಿ ತಂಡ ಎಲ್ಲ ವಿಕೆಟ್ ಕಳೆದುಕೊಂಡು 36 ರನ್ ನಿಂದ ಸೋಲೊಪ್ಪಿಕೊಂಡಿತು. ಶಿಖರ್ ಧವನ್ ಪಂದ್ಯ ಶ್ರೇಷ್ಠ ಪ್ರಶಸ್ತಿ ಪಡೆದರು.

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.