ಲಂಡನ್: ಒವಲ್ ನಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ನಡೆಸಿದ ಭಾರತ ಐವತ್ತು ಒವರ್ ಗಳಲ್ಲಿ 352 ರನ್ ಗಳಿಸಿ ಆಸ್ಟ್ರೇಲಿಯಾಕ್ಕೆ 353 ರ ಬೃಹತ್ ಗುರಿ ನಿಗದಿ ಪಡಿಸಿದೆ. ಭಾರತದ ಪರ ಶಿಖರ್ ಧವನ್ (117) ರನ್ ಬಾರಿಸಿ ಭದ್ರ ಬುನಾದಿ ಹಾಕಿಕೊಟ್ಟರು. ಇವರ ಶತಕದಲ್ಲಿ ಆಕರ್ಷಕ 16 ಬೌಂಡರಿಗಳು ಸೇರಿದ್ದವು.

ಇನ್ನು ರೋಹಿತ್ ಶರ್ಮಾ ನಿಧನಗತಿಗೆ ಮೋರೆ ಹೋಗಿ 70 ಎಸೆತದಲ್ಲಿ 57 ರನ್ ಬಾರಿಸಿ ಧವನ್ ಗೆ ಉತ್ತಮ ಸಾಥ್ ನೀಡಿದರು. ವಿರಾಟ್ ಕೊಹ್ಲಿ 77 ಎಸೆತದಲ್ಲಿ ಎರಡು ಸಿಕ್ಸರ್, ನಾಲ್ಕು ಬೌಂಡರಿಗಳನ್ನೊಳಗೊಂಡ 82 ರನ್ ಗಳ ಕೊಡುಗೆ ಸಲ್ಲಿಸಿದರು.

ಹೊಡಿಬಡಿ ಆಟವಾಡಿದ ಹಾರ್ದಿಕ್ ಪಾಂಡ್ಯ ಕೇವಲ 27 ಎಸೆತದಲ್ಲಿ 48 ರನ್ ಕೊಳ್ಳೆಹೊಡೆದರು. ಇದರಲ್ಲಿ ಮೂರು ಸಿಕ್ಸರ್, ನಾಲ್ಕು ಬೌಂಡರಿ ಮೂಲಕ ಪ್ರೇಕ್ಷಕರನ್ನು ರಂಜಿಸಿದರು. ಕೊನೆಯಲ್ಲಿ ಕೆ.ಎಲ್ ಅಶೋಕ್ ಮೂರು ಎಸೆತದಲ್ಲಿ 11 ರನ್ ಬಾರಿಸಿ ತಂಡದ ಮೊತ್ತ 352 ಕ್ಕೆ ತಲುಪುವಂತೆ ನೋಡಿಕೊಂಡರು.

ಆಸ್ಟ್ರೇಲಿಯಾ ಪರ ಸ್ಟೊಯಿನೀಸ್ 7 ಒವರಿನಲ್ಲಿ 62 ರನ್ನು ಬಿಟ್ಟುಕೊಟ್ಟು ಎರಡು ವಿಕೆಟ್ ಕಿತ್ತರೆ. ಪ್ಯಾಟ್ ಕಮ್ಮಿಸ್ ಹತ್ತು ಒವರ್ ನಲ್ಲಿ 55 ರನ್ ನೀಡಿ ಒಂದು ವಿಕೆಟ್ ಪಡೆದರು. ಉಳಿದ ಬೌಲರ್ ಗಳು ಇಂದು ಭಾರತದ ದಾಂಡಿಗರೆದುರು ದುಬಾರಿಯೆನಿಸಿಕೊಂಡರು.

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.