ಬೆಂಗಳೂರು: ಮುಸ್ಲಿಮ್ ಸಮುದಾಯದ ಬಡವರ, ಮಧ್ಯಮ ವರ್ಗದ ಹಣವನ್ನು ಬಂಡವಾಳವಾಗಿ ಸ್ವೀಕರಿಸಿ ಇದೀಗ ದಿವಾಳಿಯಾಗಿರುವ ಐ.ಎಮ್.ಎ ಸಂಸ್ಥೆಯ ಮೋಸಕ್ಕೆ ಇದೀಗ ಪ್ರಥಮ ಬಲಿಯಾಗಿದೆ.

ಹಳೆಯ ಗುಡ್ಡಹಲ್ಲಿ ನಿವಾಸಿ ಅಬ್ದುಲ್ ಪಾಷ ತನ್ನ ಪರಿಶ್ರಮದ ಎರಡು ಲಕ್ಷ ರೂಪಾಯಿಗಳನ್ನು ಐ.ಎಮ್.ಎ ಸಂಸ್ಥೆಯಲ್ಲಿ ಹೂಡಿದ್ದರು. ತನ್ನ ಕಷ್ಟ ಕಾಲದಲ್ಲಿ ನೆರವಿಗೆ ಬರಬಹುದೆಂದು ಭಾವಿಸಿದ್ದರು. ಇದೀಗ ಮಗಳ ಮದುವೆ ನಿಶ್ಚಯವಾಗಿದೆ. ಅಬ್ದುಲ್ ಪಾಷ ಸಂಸ್ಥೆಯ ಹಗರಣದಿಂದಾಗಿ ಇದೀಗ ಅದರ ಚಿಂತೆಯಲ್ಲಿ ಕೊರಗಿ ಹೃದಯಾಘಾತದಿಂದ ಮೃತಪಟ್ಟಿದ್ದಾರೆ.

ಎಸ್.ಐ.ಟಿ ತಂಡ ತನಿಖೆ ನಡೆಸುತ್ತಿದ್ದು ಐ.ಎಮ್.ಎ ಸಂಸ್ಥೆಯ ಏಳು ನಿರ್ದೇಶಕರನ್ನು ಬಂಧಿಸಿ ವಿಚಾರಣೆ ನಡೆಸುತ್ತಿದೆ.

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.