ಬೆಂಗಳೂರು: ಕೋಟ್ಯಾಂತರ ರೂಪಾಯಿಗಳನ್ನು ವಂಚಿಸಿ ಇದೀಗ ಹಲವಾರು ಹೂಡಿಕೆದಾರರು ಬೀದಿಗೆ ಬಂದ ಬೆನ್ನಲ್ಲೇ ಐ.ಎಮ್.ಎ ಸಂಸ್ಥೆಯ ವಂಚನೆಯ ವಿರುದ್ಧ ಸರಕಾರವನ್ನು ತರಾಟೆಗೆ ತೆಗೆದುಕೊಂಡಿರುವ ಬಿಜೆಪಿ ಮುಖಂಡ ಈಶ್ವರಪ್ಪ ಸರಕಾರಕ್ಕೆ ಕಿವಿ,ಕಣ್ಣು ಮತ್ತು ಹೃದಯ ಇಲ್ಲವೇ ಎಂದು ಪ್ರಶ್ನಿಸಿದ್ದಾರೆ.

ಐ.ಎಮ್.ಎ ಸಂಸ್ಥೆಯಿಂದ ಹತ್ತು ಸಾವಿರ ಕೋಟಿಗೂ ಅಧಿಕ ವಂಚನೆಯಾಗಿದೆ. ಇದರಲ್ಲಿ ರಾಜಕಾರಣಿಗಳು, ಪ್ರಭಾವಿ ಮಂತ್ರಿಗಳ ಶಾಮೀಲಾತಿ ಕಂಡು ಬರುತ್ತಿದೆ ಇಂತವರ ವಿರುದ್ಧ ಸರಕಾರ ಯಾಕೆ ಕ್ರಮ ಕೈಗೊಳ್ಳುತ್ತಿಲ್ಲವೆಂದು ಈಶ್ವರಪ್ಪ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಸರಕಾರ ಅಸಹಾಯಕತೆ ರೀತಿಯಲ್ಲಿ ವರ್ತನೆ ಮಾಡುತ್ತಿದೆ,
ಕೂಡಲೇ ವಂಚನೆ ಮಾಡಿದವರ ವಿರುದ್ಧ ಕಠಿಣ ಕ್ರಮಕ್ಕೆ ಮುಂದಾಗಲಿ ಎಂದು ಆಗ್ರಹಿಸಿದರು.

ಬಡ ಮದ್ಯಮ ವರ್ಗದವರೂ ಬೀದಿಗೆ ಬಂದಿದ್ದಾರೆ, ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಎಚ್ಚರಿಕೆ ನೀಡುತ್ತಿದ್ದಾರೆ. ಸರಕಾರಕ್ಕೆ ಕಿವಿ ಕಣ್ಣು ಹೃದಯ ಇಲ್ವಾ ಎಂದು ಪ್ರಶ್ನಿಸಿದರು.

ಸರಕಾರದ ಕೈಯಲ್ಲಿ ಆದ್ರೆ ಕ್ರಮಕ್ಕೆ ಮುಂದಾಗಲಿ. ಇಲ್ಲದಿದ್ದರೇ ಪ್ರಕರಣವನ್ನು ಸಿಬಿಐಗೆ ಒಪ್ಪಿಸಲಿ ಎಂದರು.

ಕರ್ನಾಟಕದಲ್ಲಿ ಇದೊಂದು ಅತೀ ದೊಡ್ಡ ಹಗರಣವಾಗಿದ್ದು,
ಇದರಿಂದ ಯಾವುದೇ ಸಂಸ್ಥೆಯಲ್ಲಿ ಜನರು ಹೂಡಿಕೆ ಮಾಡುವುದಕ್ಕೆ ಭಯ ಪಡುವಂತಹ ವಾತಾವರಣ ನಿರ್ಮಾಣವಾಗಿದೆ ಎಂದು ಅವರು ಹೇಳಿದರು.

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.