ನವದೆಹಲಿ: ದಿ ಹಿಂದು ಪತ್ರಿಕೆ ನಡೆಸಿದ ಸಂದರ್ಶನದಲ್ಲಿ ಮಾತನಾಡಿದ ಮೆಹಬೂಬ ಮುಫ್ತಿಯ ಪುತ್ರಿ ಇಲ್ತೀಜಾ ಮುಫ್ತಿ, ತನ್ನ ತಾಯಿಯನ್ನು ಬೇಟಿ ಮಾಡಲು ಅವಕಾಶ ನೀಡಿದ ಸರ್ವೊಚ್ಚ ನ್ಯಾಯಾಲಯಕ್ಕೆ ಕೃತಜ್ಞತೆ ಸಲ್ಲಿಸಿದ್ದಾರೆ. “ನನ್ನ ಅಮ್ಮ ಬಹಳಷ್ಟು ಬಲಿಷ್ಟರಾಗಿದ್ದಾರೆ. ಆದರೂ ಬಾಲಕರ ಬಂಧನದ ಬಗ್ಗೆ ಅವರು ಕಳವಳ ವ್ಯಕ್ತಪಡಿಸಿದ್ದಾರೆ. ಯಾವ ಪ್ರಜಾಪ್ರಭುತ್ವ ಮಕ್ಕಳನ್ನು ಬಂಧಿಸುತ್ತದೆ ಎಂದು ಕೇಂದ್ರ ಸರಕಾರವನ್ನು ಪ್ರಶ್ನಿಸಿದ್ದಾರೆ.

ಸರ್ವೊಚ್ಛ ನ್ಯಾಯಾಲಯವು ನಿರ್ದೇಶನ ನೀಡಿದ ಬಳಿಕ ನನಗೆ ಯಾವುದೇ ಆಡಳಿತಾಧಿಕಾರಿ ತಾಯಿಯ ಭೇಟಿಗೆ ತೊಂದರೆ ನೀಡಿಲ್ಲವೆಂದು ಸ್ಪಷ್ಟಪಡಿಸಿದ್ದಾರೆ. ಆದರೆ ಬೇರೆಯವರೊಂದಿಗೆ ತೊಂದರೆ ಮುಂದುವರಿದಿದೆ. ಮಾಧ್ಯಮಗಳ ಉಪಸ್ಥಿತಿಯಲ್ಲಿ ಮಾತ್ರ ಒಳ್ಳೆಯ ವರ್ತನೆ ತೋರುವ ಅಧಿಕಾರಿಗಳು, ಸ್ವತಃ ತನ್ನ ಅಜ್ಜಿಗೆ ಮಗನ ಭೇಟಿಗೆ ಬಿಡುತ್ತಿಲ್ಲವೆಂದು ಹೇಳಿದ್ದಾರೆ.

ತನ್ನ ತಾಯಿ ಕುರಾನ್ ಮತ್ತು ನೆಲ್ಸನ್ ಮಂಡೇಲಾ ಅವರನ್ನು ಓದುದರಲ್ಲಿ ಕಾಲ ಕಳೆಯುತ್ತಿದ್ದಾರೆ ಎಂದು ಸಂದರ್ಶನದಲ್ಲಿ ತಿಳಿಸಿದ್ದಾರೆ. ಅದರೊಂದಿಗೆ ತನ್ನ ದೌರ್ಜನ್ಯಕ್ಕೊಳಗಾದ ಜನ ನ್ಯಾಯಾಲಯದ ಮೆಟ್ಟಿಲು ಏರಬೇಕು. ಹೋರಾಟವನ್ನು ಯಾವುದೇ ಕಾರಣಕ್ಕೂ ಕೈ ಬಿಡಬಾರದೆಂದು ಇಲ್ತಿಜಾ ಹೇಳಿದ್ದಾರೆ.

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.