ನವದೆಹಲಿ: ದೇಶದಲ್ಲಿ ನೆಲೆಸಿರುವ ಅಕ್ರಮ ವಲಸಿಗರನ್ನು ಹುಡುಕಿ ಭಾರತದಿಂದ ಹೊರ ಹಾಕಲಾಗುತ್ತದೆಂದು ಗೃಹ ಸಚಿವ ಅಮಿತ್ ಶಾ ಹೇಳಿದ್ದಾರೆ.

ಈ ದೇಶದ ಪ್ರತಿ ಅಂಗುಲವನ್ನೂ ಪರಿಶೀಲಿಸಿ ಇಲ್ಲಿ ವಾಸಿಸುತ್ತಿರುವ ಎಲ್ಲಾ ಅಕ್ರಮ ವಲಸಿಗರು ಮತ್ತು ನುಸುಳುಕೋರರನ್ನು ನಾವು ಗುರುತಿಸುತ್ತೇವೆ ಮತ್ತು ಅವರನ್ನು ಅಂತರರಾಷ್ಟ್ರೀಯ ಕಾನೂನಿನ ಪ್ರಕಾರ ಗಡೀಪಾರು ಮಾಡುತ್ತೇವೆ” ಎಂದು ಬಿಜೆಪಿ ನಾಯಕ ಶಾ ರಾಜ್ಯಸಭೆಯಲ್ಲಿ ಹೇಳಿದರು.

ಈಗಾಗಲೇ ಅಕ್ರಮ ವಲಸಿಗಾರರ ನೆಲೆಯಲ್ಲಿ ಎನ್.ಆರ್.ಸಿ ಕಾಯಿದೆಯ ವಿರುದ್ಧ ಆಕ್ರೋಶ ವ್ಯಕ್ತವಾಗುತ್ತಿದ್ದ ಅಕ್ರಮ ವಲಸಿಗಾರ ಹೆಸರಲ್ಲಿ ಗಡಿ ಭಾಗದ ಜನರ ಮೇಲೆ ಅನ್ಯಾಯವೆಸಗಲಾಗುತ್ತಿದೆ ಎಂಬ ಆರೋಪವಿದೆ.

ಅಕ್ರಮ ವಲಸಿಗರ ಒಳನುಸುಳುವಿಕೆಯನ್ನು ಪರೀಕ್ಷಿಸಲು ಅಂತರರಾಷ್ಟ್ರೀಯ ಗಡಿಗಳ ಪರಿಣಾಮಕಾರಿ ಕಣ್ಗಾವಲು ಮತ್ತು ಪ್ರಾಬಲ್ಯವನ್ನು ಖಚಿತಪಡಿಸಿಕೊಳ್ಲಲಾಗುತ್ತದೆ.ಇದಕ್ಕಾಗಿ ಕೇಂದ್ರ ಸರ್ಕಾರವು ಬಹುರೂಪದ ವಿಧಾನವನ್ನು ಅನುಸರಿಸಲಿದೆ.
ಗಡಿ ರಸ್ತೆಗಳ ನಿರ್ಮಾಣ, ಗಡಿ ಠಾಣೆಗಳ ನಿರ್ಮಾಣ ಸೇರಿದಂತೆ ಭೌತಿಕ ಮೂಲಸೌಕರ್ಯಗಳ ಸೃಷ್ಟಿ ಮಾಡಲಾಗಿದೆ ಎಂದು ಗೃಹ ಸಚಿವಾಲಯ ಲೋಕಸಭೆಯಲ್ಲಿ ಪರ್ವೇಶ್ ಸಾಹಿಬ್ ಸಿಂಗ್ ಅವರ ಪ್ರಶ್ನೆಗೆ ಲಿಖಿತ ಉತ್ತರ ನೀಡಿದೆ.
ಗಡಿ ಕಾವಲು ಪಡೆಗಳು ನಿಯಮಿತವಾಗಿ ಗಸ್ತು ತಿರುಗುವುದು ಮತ್ತು ವೀಕ್ಷಣಾ ಠಾಣೆಗಳನ್ನು ಹಾಕುವುದು ಅಕ್ರಮ ಒಳನುಸುಳುವಿಕೆಯನ್ನು ತಡೆಯಲು ಸುರಂಗ ನಿರ್ಮಾಣ ಮಾಡದಂತೆ ತಡೆಯುವುದೂ ಸೇರಿ ಅನೇಕ ವಿಧದ ಕಾರ್ಯ ಮಾಡಲಾಗಿದೆ ಎಂದು ಲಿಖಿತ ಉತ್ತರದಲ್ಲಿ ವಿವರಿಸಿದೆ.ಆದಾಗ್ಯೂ, ಕೆಲವು ಅಕ್ರಮ ವಲಸಿಗರು ಇನ್ನೂ ರಹಸ್ಯವಾಗಿ ಭಾರತಕ್ಕೆ ಪ್ರವೇಶಿಸಲು ಸಮರ್ಥರಾಗುತಿದ್ದಾರೆ.ಮುಖ್ಯವಾಗಿ ದೀರ್ಘ ಅಂತರರಾಷ್ಟ್ರೀಯ ಗಡಿಗಳಿರುವ ಕೆಲವು ಭಾಗಗಳಲ್ಲಿ ಕಷ್ಟಕರವಾದ ಪರ್ವತ ಮತ್ತು ನದಿಗಳಿರುವ ಕಾರಣ ಪರಿಶೀಲನೆ ಕಠಿಣವಾಗಿದೆ.
ಅಂತಹ ಅಕ್ರಮ ವಲಸಿಗರನ್ನು ಪತ್ತೆ ಮಾಡಲು ವಿದೇಶಿಯರ ಕಾಯ್ದೆ 1946 ರ ಸೆಕ್ಷನ್ 3 ರ ಅಡಿಯಲ್ಲಿ ಕೇಂದ್ರ ಸರ್ಕಾರದ ಅಧಿಕಾರವನ್ನುಪಡೆದು ಅಕ್ರಮ ವಿದೇಶಿ ಪ್ರಜೆಗಳನ್ನು ಬಂಧಿಸಲು ಮತ್ತು ಗಡೀಪಾರು ಮಾಡಲುಕ್ರಮ ಜರುಗಿಸಲಿದೆ.

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.