ದುಬೈ: ಅಂತಾರಾಷ್ಟ್ರೀಯ ಕ್ರಿಕೆಟ್​ ಸಂಸ್ಥೆ (ಐಸಿಸಿ) 2019ರ ಕ್ರಿಕೆಟ್​ ವಿಶ್ವಕಪ್​ನ ಅಧಿಕೃತ ಧ್ಯೇಯ ಗೀತೆ ‘ಸ್ಟ್ಯಾಂಡ್​ ಬೈ…’ ಅನ್ನು ಬಿಡುಗಡೆ ಮಾಡಿದೆ.

ಇಂಗ್ಲೆಂಡ್​ ಮತ್ತು ವೇಲ್ಸ್​ನಲ್ಲಿ ಆಯೋಜನೆಗೊಳ್ಳುತ್ತಿರುವ ಕ್ರಿಕೆಟ್​ ವಿಶ್ವಕಪ್​ ಟೂರ್ನಿ ಮೇ 30ರಿಂದ ಆರಂಭವಾಗಲಿದೆ.ಉದಯೋನ್ಮುಖ ಕಲಾವಿದ ಲೋರಿನ್​ ಮತ್ತು ರುಡಿಮೆಂಟಲ್​ ಒಟ್ಟಾಗಿ ಈ ಗೀತೆ ರಚಿಸಿ, ಸಂಗೀತ ಸಂಯೋಜನೆ ಮಾಡಿರುತ್ತಾರೆ.

ಪಂದ್ಯಗಳು ನಡೆಯುವ ಪ್ರತಿಯೊಂದು ಕ್ರೀಡಾಂಗಣದಲ್ಲಿ ಈ ಗೀತೆಯನ್ನು ಪ್ರಸಾರ ಮಾಡಲು ಟೂರ್ನಿಯ ಆಯೋಜಕರು ನಿರ್ಧರಿಸಿದ್ದಾರೆ.

ಕ್ರಿಕೆಟ್​ ವಿಶ್ವಕಪ್​ ಟೂರ್ನಿಯಲ್ಲಿ ಒಟ್ಟು 48 ಪಂದ್ಯಗಳನ್ನು ಆಡಲಾಗುತ್ತದೆ. ಈ ಪಂದ್ಯಗಳನ್ನು 1 ಕೋಟಿಗೂ ಹೆಚ್ಚು ಕ್ರಿಕೆಟ್​ ಅಭಿಮಾನಿಗಳು ಪ್ರತ್ಯಕ್ಷವಾಗಿ ವೀಕ್ಷಿಸಲಿದ್ದಾರೆ, ಇನ್ನೊಂದು ಕೋಟಿ ಜನರು ಟಿವಿಗಳ ಮೂಲಕ ಪಂದ್ಯಗಳನ್ನು ನೋಡಲಿದ್ದಾರೆ. ಓವಲ್​ನಲ್ಲಿ 30ರಂದು ನಡೆಯಲಿರುವ ಟೂರ್ನಿಯ ಉದ್ಘಾಟನಾ ಪಂದ್ಯದಲ್ಲಿ ಆತಿಥೇಯ ಇಂಗ್ಲೆಂಡ್​ ಮತ್ತು ದಕ್ಷಿಣ ಆಫ್ರಿಕಾ ಮುಖಾಮುಖಿಯಾಗಲಿವೆ.

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.