ಮನೋಜತ್ ಕರ್ಲಾ ಶತಕ – ಭಾರತದ ಮಡಿಲಿಗೆ ಅಂಡರ್ 19 ವಿಶ್ವಕಪ್

ನ್ಯೂಝಿಲೆಂಡ್: ಇಂದು ನಡೆದ ಆಸ್ಟ್ರೇಲಿಯಾ ವಿರುದ್ಧದ ಅಂಡರ್ 19 ವಿಶ್ವಕಪ್ ಫೈನಲ್ ಪಂದ್ಯದಲ್ಲಿ ಭಾರತ ಭರ್ಜರಿ ಜಯ ಸಾಧಿಸಿದೆ. ಮೊದಲು ಬ್ಯಾಟಿಂಗ್ ನಡೆಸಿದ ಆಸ್ಟ್ರೇಲಿಯಾ ಭಾರತದ ಮಾರಕ ಬೌಲಿಂಗ್ ದಾಳಿಗೆ ಸಿಲುಕಿ 216 ರನ್ ಗಳಿಗೆ ಅಲೌಟಾಗಿತ್ತು. ಇಶಾನ್ ಪೊರೆಲ್,ಶಿವಸಿಂಗ್,ಕಮಲೇಶ್ ಹಾಗೂ ಅನುಕುಲ್ ರಾಯ್ ಮಾರಕ ದಾಳಿ ಸಂಘಟಿಸಿ ತಲಾ ಎರಡು ವಿಕೆಟ್ ಪಡೆದರು.ಆಸ್ಟ್ರೇಲಿಯಾ ಪರ ಜೊನಥನ್ ಪೆರ್ಲಾ 76 ರನ್ ಗಳಿಸಿದರು.

ನಂತರ ಬ್ಯಾಟಿಂಗ್ ಮಾಡಿದ ಭಾರತಕ್ಕೆ ಪ್ರಥ್ವಿ ಶಾ ಮತ್ತು ಮನೋಜತ್ ಕಾರ್ಲ 71 ರನ್ ಜೊತೆಯಾಟ ನಡೆಸಿ ಉತ್ತಮ ಅಡಿಪಾಯ ಹಾಕಿದ್ದರು. ನಂತರ ಬಂದ ಶುಭಮ್ 31 ರನ್ ಗಳಿಸಿದರು.

ಮನೋಜತ್ ಕಾರ್ಲ ಭರ್ಜರಿ ಬ್ಯಾಟಿಂಗ್ ಮಾಡಿ ಶತಕದ ಮೂಲಕ ಭಾರತವನ್ನು ಗೆಲುವಿನ ದಡಕ್ಕೆ ಸೇರಿಸಿದ್ದಾರೆ.ಹರ್ವಿಕ್ ದೆಸೈ ಇವರಿಗೆ ಉತ್ತಮ ಸಾಥ್ ನೀಡಿ 47 ರನ್ ಗಳಿಸದರು. ಕಾರ್ಲ 8 ಬೌಂಡರಿ ಮತ್ತು 3 ಸಿಕ್ಸರ್ ಸಹಾಯದಿಂದ 101 ರನ್ ದಾಖಲಿಸಿ ಭಾರತದ ಜಯದ ರೂವಾರಿಯಾಗಿ ಮೂಡಿ ಬಂದರು. ಆಸ್ಟ್ರೇಲಿಯಾ ಪರ ಪರಮ್ ಮತ್ತು ಝ್ಯಾಕ್ ತಲಾ ಒಂದು ವಿಕೆಟ್ ಪಡೆದರು