ಗಾಯಾಳು ರಾಜೇಶ್ ಶೆಟ್ಟಿಯ ಅಸಹಾಯಕತೆಗೆ ನೆರವಾಗುವಿರಾ…!

139

ಉಡುಪಿ,ಜು.24: ಕಾರ್ಕಳ ಸಾರ್ವಜನಿಕ ಸ್ಥಳದಲ್ಲಿ ಅಸಹಾಯಕ ಪರಿಸ್ಥಿತಿಯಲ್ಲಿ ಕಂಡು ಬಂದ, ಸುಮಾರು 31 ವರ್ಷದ ಯುವಕನನ್ನು, ಮಾಹಿತಿ ತಿಳಿದ, ಸಮಾಜಸೇವಕ ವಿಶು ಶೆಟ್ಟಿ ಅಂಬಲಪಾಡಿ ಅವರು ಅಜ್ಜರಕಾಡು ಜಿಲ್ಲಾಸ್ಪತ್ರೆಗೆ ದಾಖಲುಪಡಿಸಿದ ಘಟನೆ ಕಳೆದ ಜುಲೈ 16 ರಂದು ನಡೆದಿತ್ತು.

ಯುವಕ ಕಟ್ಟಡದಿಂದ ಆಯಾತಪ್ಪಿ ಬಿದ್ದು ಬೆನ್ನು ಮತ್ತು ಕಾಲಿನ ಮೂಳೆ ಭಾಗಕ್ಕೆ ಗಾಯಗೊಂಡು ನಡೆಯಲಾರದ ಸ್ಥಿತಿಯಲ್ಲಿದ್ದ. ಕಾರ್ಕಳ ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ. ಗಾಯದ ಗಂಭೀರತೆಯ ಕಾರಣದಿಂದಾಗಿ, ಹೆಚ್ಚಿನ ಚಿಕಿತ್ಸೆಗೆ ಬೇರೆ ಆಸ್ಪತ್ರೆಗೆ ಹೋಗಲು ವೈದ್ಯರು ಸಲಹೆ ನೀಡಿದ್ದಾರೆ. ಆತನ ನೆರವಿಗೆ ಯಾರು ಬಾರದ ಕಾರಣದಿಂದ ಆತ ಅಸಹಾಯಕನಾಗಿ ಸಾರ್ವಜನಿಕ ಸ್ಥಳದಲ್ಲಿ ನೆಲೆ ಕಂಡಿದ್ದ.

ಜಿಲ್ಲಾಸ್ಪತ್ರೆಯಲ್ಲಿ ತಜ್ಞ ವೈದ್ಯರು, ಗಾಯಾಳುವಿನ ಎರಡು ಕಾಲಿನ ಗಂಟಿನ ಮೂಳೆ ಮುರಿತಗೊಂಡಿದೆ. ಮೂರು ತಿಂಗಳುಗಳ ಕಾಲ ಧೀರ್ಘ ಚಿಕಿತ್ಷೆ ನಡೆಯ ಬೇಕಾಗಿದೆ. ಅಲ್ಲಿಯ ವರೆಗೆ ಗಾಯಾಳುವಿಗೆ ಎತ್ತಲೂ ನಡೆದಾಡಲು ಅವಕಾಶ ಇರುದಿಲ್ಲ. ಹಾಗಾಗಿ ಗಾಯಾಳುವಿನ ದಿನಚರಿಯ ಸೇವೆಗೆ ಸೇವಕರ ಅತಿ ಅವಶ್ಯ ಇದೆ. ಎಂದು ಹೇಳಿದ್ದಾರೆ. ಗಾಯಾಳು ಚಿಕಿತ್ಸಾ ವಿಧಾನಕ್ಕೆ ಸರಿಯಾಗಿ ಸ್ಪಂದಿಸಿದಲ್ಲಿ. ಗಾಯಾಳು ಸಮಾಜದ ಮುಖ್ಯವಾಹಿನಿಗೆ ಬರಲು ಸಾದ್ಯವಿದೆ. ಈ ಮೊದಲು ಸಂಬಂಧಿಕರನ್ನು ಹುಡುಕುವ ಪ್ರಯತ್ನವನ್ನು ವಿಶು ಶೆಟ್ಟಿ ಅವರು ಮಾಡಿದ್ದರು. ಆದರೆ ಸಂಬಂಧಿಕರ ಪತ್ತೆಯಾಗಿಲ್ಲ. ಅಸಹಾಯಕ ಗಾಯಾಳುವಿಗೆ ನೆರವು ದೊರೆಯದಿದ್ದರೆ, ಗಾಯಾಳು ಶಾಶ್ವತವಾಗಿ ಶಯನ ಮಂಚದಲ್ಲಿಯೇ ಬದುಕು ಸವೆಯ ಬೇಕಾದ ದುರಂತ ಪರಿಸ್ಥಿತಿ ಬರಬಹುದು.

ಗಾಯಾಳು ತನ್ನ ಹೆಸರು ರಾಜೇಶ್ ಶೆಟ್ಟಿ, ಬಂಗ್ಲೆಗುಡ್ಡೆ, ಕುಕ್ಕೂಂದೂರು, ಕಾರ್ಕಳ ಎನ್ನುವ ವಿಳಾಸ ನೀಡಿದ್ದಾನೆ. ಸಂಬಂಧಿಕರು ಆಪ್ತರು ತುರ್ತುಗಾಗಿ ಜಿಲ್ಲಾಸ್ಪತ್ರೆಯ ನಾಗರಿಕ ಸಹಾಯ ಕೇಂದ್ರವನ್ನು ಸಂಪರ್ಕಿಸುವಂತೆ ಹಾಗೂ ಮಾನವಿಯತೆಯ ನೆಲೆಯಲ್ಲಿ ಸಂಘ ಸಂಸ್ಥೆಗಳು ರಾಜೇಶ್ ಶೆಟ್ಟಿ ಅವರ ನೆರವಿಗೆ ಬರುವಂತೆ ಸಮಾಜಸೇವಕ ವಿಶು ಶೆಟ್ಟಿ ಅವರು ವಿನಂತಿಸಿದ್ದಾರೆ.

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.