ಹೆಲ್ಮೆಟ್ ಐ.ಎಸ್.ಐ ನಕಲಿ ಮಾರ್ಕ್ – ಖರೀದಿಸುವ ಮುನ್ನ ಎಚ್ಚರಿಕೆ

ನವದೆಹಲಿ: ಸುಪ್ರೀಂ ಕೋರ್ಟ್ ಆದೇಶದಂತೆ ದ್ವಿಚಕ್ರವಾಹನ ಸವಾರರಿಗೆ ಹೆಲ್ಮೆಟ್ ಕಡ್ಡಾಯ ಮಾಡಲಾಗಿದೆ. ಐ.ಎಸ್.ಐ. ಗುಣಮಟ್ಟದ ಹೆಲ್ಮೆಟ್ ಬಳಸುವಂತೆ ಸವಾರರಿಗೆ ಸೂಚನೆ ನೀಡಲಾಗಿದೆ.

ಇದನ್ನೇ ಬಂಡವಾಳ ಮಾಡಿಕೊಂಡ ಹೆಲ್ಮೆಟ್ ಮಾರಾಟಗಾರರು, ತಯಾರಕರು ನಕಲಿ ಹೆಲ್ಮೆಟ್ ಗಳಿಗೆ ಐ.ಎಸ್.ಐ. ಸ್ಟಿಕ್ಕರ್ ಹಚ್ಚಿ ಹೆಚ್ಚಿನ ಬೆಲೆಗೆ ಮಾರಾಟ ಮಾಡುತ್ತಿರುವ ಅನೇಕ ಪ್ರಕರಣ ಬೆಳಕಿಗೆ ಬಂದಿವೆ.

ಐ.ಎಸ್.ಐ. ಮಾರ್ಕ್ ಇರುವ ಗುಣಮಟ್ಟದ ಹೆಲ್ಮೆಟ್ ಬಳಸಬೇಕಿರುವುದರಿಂದ ನಕಲಿ ಹೆಲ್ಮೆಟ್ ಗಳಿಗೂ ಐ.ಎಸ್.ಐ. ಸ್ಟಿಕ್ಕರ್ ಹಚ್ಚಿ ಮಾರಲಾಗುತ್ತಿದೆ. ದೆಹಲಿ, ಉತ್ತರ ಪ್ರದೇಶ ಸೇರಿದಂತೆ ಅನೇಕ ಕಡೆಗಳಲ್ಲಿ ನಕಲಿ ಹೆಲ್ಮೆಟ್ ಗಳನ್ನು ಮಾರಾಟ ಮಾಡಲಾಗುತ್ತಿದೆ.

ದ್ವಿಚಕ್ರವಾಹನ ಸವಾರರು ಇದನ್ನು ತಿಳಿಯದೇ, ಐ.ಎಸ್.ಐ. ಸ್ಟಿಕ್ಕರ್ ಇರುವ ನಕಲಿ ಹೆಲ್ಮೆಟ್ ಗಳನ್ನೇ ಖರೀದಿಸುತ್ತಾರೆ.

ಇದನ್ನು ಗಮನಿಸಿರುವ ಭಾರತೀಯ ಗುಣಮಟ್ಟ ಸಂಸ್ಥೆ(BIS) ಪ್ರಮಾಣ ಪತ್ರ ಪಡೆಯದೇ ಉತ್ಪನ್ನಗಳ ಮೇಲೆ ಐ.ಎಸ್.ಐ. ಮಾರ್ಕ್ ಮುದ್ರಿಸುವಂತಿಲ್ಲ ಎಂದು ಎಚ್ಚರಿಕೆ ನೀಡಿದೆ.

ನಕಲಿ ಹೆಲ್ಮೆಟ್ ಗಳಿಗೆ ಐ.ಎಸ್.ಐ. ಸ್ಟಿಕ್ಕರ್ ಅಂಟಿಸಿ ಮಾರಾಟ ಮಾಡುತ್ತಿರುವ ದೂರುಗಳು ಬಂದ ಹಿನ್ನಲೆಯಲ್ಲಿ ಕಠಿಣ ಕ್ರಮ ಕೈಗೊಳ್ಳಲು ಮುಂದಾಗಿದೆ.