ಹೆಜಮಾಡಿ ; ಬಸ್ಸು ಪಲ್ಟಿ ಹಲವರಿಗೆ ಗಾಯ

ಪಡುಬಿದ್ರಿ : ಚಾಲಕನ ಅಜಾಗರೂಕತೆಯಿಂದ ಬಸ್ಸೊಂದು ರಸ್ತೆಯ ಪಕ್ಕದ ಕಮರಿಗೆ ಉರುಳಿ ಬಿದ್ದು ಹಲವರು ಗಾಯಗೊಂಡ ಘಟನೆ ರಾಷ್ಟ್ರೀಯ ಹೆದ್ದಾರಿ 66 ರ ಹೆಜಮಾಡಿ ಟೋಲ್ ಗೇಟ್ ಸಮೀಪ ಸಂಭವಿಸಿದೆ.

ರಾಷ್ಟ್ರೀಯ ಹೆದ್ದಾರಿ 66 ರ ಹೆಜಮಾಡಿ ಟೋಲ್ ಗೇಟ್ ಸಮೀಪ ಚಕ್ರಸ್ಪೋಟಗೊಂಡಿರುವ ಮರದ ದಿಮ್ಮಿ ತುಂಬಿದ ಲಾರಿಯೊಂದನ್ನು ಹೆದ್ದಾರಿ ಮಧ್ಯೆ ನಿಲ್ಲಿಸಲಾಗಿತ್ತು. ಈ ವೇಳೆ ಉಡುಪಿ ಕಡೆಯಿಂದ ಮಂಗಳೂರಿನತ್ತ ಅತೀವೇಗ ಹಾಗೂ ಅಜಾಗರೂಕತೆಯಿಂದ ಎಕ್ಸ್‌ಪ್ರೆಸ್‌ ಬಸ್ಸನ್ನು ಚಲಾಯಿಸಿಕೊಂಡು ಹೋಗುತ್ತಿದ್ದ ಅದರ ಚಾಲಕ ಹೆದ್ದಾರಿಯಲ್ಲಿ ನಿಲ್ಲಿಸಲಾದ ಲಾರಿಯನ್ನು ಕಂಡು ನಿಯಂತ್ರಿಸಲಾಗದೆ ಎಡಕ್ಕೆ ತಿರುಗಿಸಿದ್ದಾನೆ.ಈ ವೇಳೆ ಬಸ್ಸು ಚಾಲಕನ ನಿಯಂತ್ರಣ ಕಳೆದುಕೊಂಡು ರಸ್ತೆಯ ಪಕ್ಕದ ಕಮರಿಗೆ ಉರುಳಿ ಬಿದ್ದಿದೆ.

ಅಪಘಾತದ ತೀವ್ರತೆಗೆ ಬಸ್ಸಿನಲ್ಲಿದ್ದ ಪ್ರಯಾಣಿಕರು ಅತ್ತಿತ್ತ ಎಸೆಯಲ್ಪಟ್ಟು ಮೂವರು ತೀವ್ರ ಸರೂಪದ ಗಾಯಗೊಂಡರೆ ಉಳಿದವರು ಅಲ್ಪಸ್ವಲ್ಪ ಗಾಯಗೊಂಡು ಅಪಾಯದಿಂದ ಪಾರಾಗಿದ್ದಾರೆ.ಬಸ್ಸು ಚಾಲಕನ ಆತುರವೇ ಅಪಘಾತ ಕ್ಕೆ ಕಾರಣ ಎಂದು ಪ್ರಯಾಣಿಕರೊಬ್ಬರು ತಿಳಿಸಿದ್ದಾರೆ. ವಿಷಯ ತಿಳಿದ ಕೂಡಲೇ ಘಟನಾ ಸ್ಥಳಕ್ಕೆ ದಾವಿಸಿದ ಪಡುಬಿದ್ರಿ ಠಾಣಾಧಿಕಾರಿ ಸತೀಶ್ ಹಾಗು ಸಿಬ್ಬಂದಿಗಳ ಚುರುಕು ಕಾರ್ಯಚರಣೆ ನಡೆಸಿ ಹೆದ್ದಾರಿಯಲ್ಲಿದ್ದ ಲಾರಿ ತೆರವುಗೊಳಿಸಿ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡುವ ಮೂಲಕ ಇನ್ನಷ್ಟು ಅವಘಡಗಳು ತಪ್ಪಿದಂತಾಗಿದೆ.