ಹರ್ಯಾಣ; ನವೆಂಬರ್ 2 ರಂದು ಹರ್ಯಾಣ ರಾಜ್ಯದ ಪ್ರಸಕ್ತ ಆಡಳಿತಾವಧಿ ಮುಕ್ತಾಯವಾಗಲಿದ್ದು ವಿಧಾನ ಸಭಾ ಚುನಾವಣೆಗೆ ಪಕ್ಷಗಳು ಭರ್ಜರಿ ತಯಾರಿ ನಡೆಸುತ್ತಿದೆ. ಈತನ್ಮಧ್ಯೆ ರಾಷ್ಟ್ರೀಯ ಪಕ್ಷ ಕಾಂಗ್ರೇಸ್ ಮದ್ಯಪಾನ ಮಾಡದವರಿಗೆ ಟಿಕೇಟ್ ನೀಡುವುದಾಗಿ ಘೋಷಿಸಿದೆ.

ಈ ಬಾರಿಯ ಚುನಾವಣೆಯಲ್ಲಿ ಸಾಕಷ್ಟು ಎಚ್ಚರಿಯನ್ನು ವಹಿಸಿರುವ ಕಾಂಗ್ರೇಸ್ ಚುನಾವಣೆಯಲ್ಲಿ ಸ್ಪರ್ಧಿಸಲು ಇಚ್ಚಿಸುವ ಅಭ್ಯರ್ಥಿಗಳಿಗೆ ಕಟ್ಟು ನಿಟ್ಟಿನ ನಿಯಮ ವಿಧಿಸಿದೆ. ಈ ಬಗ್ಗೆ ಹರ್ಯಾಣ ಕಾಂಗ್ರೇಸ್ ಅಧ್ಯಕ್ಷೆ ಶೈಲಜಾ ಕುಮಾರಿ ಪತ್ರಿಕಾಗೋಷ್ಟಿಯಲ್ಲಿ ತಿಳಿಸಿದ್ದು, ಸರಳ ಜೀವನ ನಡೆಸುವವರಿಗೆ ಮೊದಲ ಆದ್ಯತೆ ಎಂದು ತಿಳಿಸಿದ್ದಾರೆ.
ಮದ್ಯಪಾನ ಮಾಡದ, ಸ್ವಚ್ಛ ಚಾರಿತ್ರ್ಯದ, ಗಾಂಧಿವಾದಿಗಳಾಗಿ ಖಾದಿ ಧರಿಸಿ ಸರಳ ಜೀವನದಲ್ಲಿ ನಂಬಿಕೆಯುಳ್ಳವರಿಗೆ ಮಾತ್ರವೇ ಟಿಕೆಟ್ ಕೊಡಲು ಕಾಂಗ್ರೆಸ್ ನಿರ್ಧರಿಸಿದೆ. ಹೀಗೆಂದು ಹೇಳಿ ಟಿಕೆಟ್ ಆಕಾಂಕ್ಷಿಗಳಿಗಾಗಿ 10 ಅಂಶಗಳ ಘೋಷಣಾ ಪತ್ರವನ್ನು ಬಿಡುಗಡೆ ಮಾಡಿದೆ.

ಪಕ್ಷದ ಸಿದ್ಧಾಂತದಲ್ಲಿ ನಂಬಿಕೆ ಹೊಂದಿದ್ದು, ಅದರೊಂದಿಗೆ ಹೊಂದಿಕೊಂಡು ಹೋಗುವ ಗುಣವುಳ್ಳ ಹಾಗೂ ಗಾಂಧಿವಾದದಲ್ಲಿ ನಂಬಿಕೆ ಇಟ್ಟು ಅದರಂತೆ ಜೀವನ ರೂಪಿಸಿಕೊಂಡಿರಬೇಕು. ಜಾತ್ಯತೀತ ವಾದದಲ್ಲಿ ನಂಬಿಕೆ ಹೊಂದಿದ್ದು, ಎಲ್ಲಿಯೂ, ಎಂದಿಗೂ ಜಾತಿ ಆಧಾರಿತವಾಗಿ ಯಾರ ಮೇಲೂ ದೌರ್ಜನ್ಯ ಎಸಗಿರಬಾರದು. ಟಿಕೆಟ್ ಆಕಾಂಕ್ಷಿಗಳು ಸಾಮಾನ್ಯ ವರ್ಗದವರಾಗಿದ್ದರೆ 5 ಸಾವಿರ ರೂ. ಶುಲ್ಕದ ಜತೆಗೆ 25 ರೂ. ಅರ್ಜಿ ಶುಲ್ಕ, ಪರಿಶಿಷ್ಟ ಜಾತಿ, ವರ್ಗದವರು ಹಾಗೂ ಮಹಿಳೆಯರಾದರೆ 2 ಸಾವಿರ ರೂ. ಶುಲ್ಕ ಮತ್ತು 25 ರೂ. ಅರ್ಜಿ ಶುಲ್ಕವನ್ನು ಪಾವತಿಸಬೇಕು ಎಂದು ಘೋಷಣಾ ಪತ್ರದಲ್ಲಿ ಷರತ್ತುಗಳನ್ನು ವಿಧಿಸಲಾಗಿದೆ.

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.