ಟಾಪ್ ನ್ಯೂಸ್ 2020ರ ಭಾರತದ ಮೊದಲ ಅಂತಾರಾಷ್ಟ್ರೀಯ ಹಲಾಲ್ ಎಕ್ಸ್ಪೋಗೆ ಸಾಕ್ಷಿಯಾಗಲಿರುವ ಹೈದರಾಬಾದ್.

2020ರ ಭಾರತದ ಮೊದಲ ಅಂತಾರಾಷ್ಟ್ರೀಯ ಹಲಾಲ್ ಎಕ್ಸ್ಪೋಗೆ ಸಾಕ್ಷಿಯಾಗಲಿರುವ ಹೈದರಾಬಾದ್.

-

ಜಾಹೀರಾತು

ಜಾಹೀರಾತು

ಹೈದರಾಬಾದ್;ಕೋಸ್ಟಲ್ ಮಿರರ್ ನೆಟ್ವರ್ಕ್:

ಯಾಕೆ ಈ ಹಲಾಲ್ ಎಕ್ಸ್ಪೋ:

ದಿನಾರ್ ಸ್ಟ್ಯಾಂಡರ್ಡ್ ವರದಿಯ ಪ್ರಕಾರ, 2020 ರ ವೇಳೆಗೆ ಜಾಗತಿಕ ಮುಸ್ಲಿಮರ ಖರ್ಚಿನ ಪ್ರಮಾಣವು 3.7 ಬಿಲಿಯನ್ ಡಾಲರ್ಗಳನ್ನು ತಲುಪಲಿದ್ದು, ಭಾರತದ ಮೊದಲ ಮತ್ತು ಪ್ರಮುಖ ಹಲಾಲ್ ವ್ಯಾಪಾರ ಪ್ರದರ್ಶನದಲ್ಲಿ ಭಾಗವಹಿಸಲು ನಿಮಗೆ ಇದಕ್ಕಿಂತಲೂ ಉತ್ತಮವಾದ ಸಮಯ ಬೇರೊಂದಿಲ್ಲ.ಅದರ ಒಂದನೇಯ ಉದ್ಘಾಟನಾ ವರ್ಷದಲ್ಲಿ, ಇಂಡಿಯನ್ ಇಂಟರ್ ನ್ಯಾಷನಲ್ ಹಲಾಲ್ ಎಕ್ಸ್ಪೋ-2020 ಅನ್ನು ಪ್ರಪಂಚದಾದ್ಯಂತ ಹಲಾಲ್ ಆರ್ಥಿಕತೆಯ ಏಕೈಕ ಉದ್ದೇಶದಿಂದ ಸ್ಥಾಪಿಸಲಾಗಿದೆ ಮತ್ತು ವಿಶ್ವದ ಹಲಾಲ್ ಕೈಗಾರಿಕೆಗಳಿಗೆ ಸಂಪರ್ಕ ಕಲ್ಪಿಸುವ ಸ್ಥಳವಾಗಿ ಇದನ್ನು ಸಂಸ್ಥಾಪಿಸಲಾಗಿದೆ.

2020 ರ ವೇಳೆಗೆ 3.7 ಬಿಲಿಯನ್ ಡಾಲರ್
ಇಂಡಿಯನ್ ಇಂಟರ್ ನ್ಯಾಷನಲ್ ಹಲಾಲ್ ಎಕ್ಸ್ಪೋ- 2020 ಭಾರತ ಮತ್ತು ವಿದೇಶಗಳಿಂದ 200 ಕ್ಕೂ ಹೆಚ್ಚು ಪ್ರದರ್ಶಕರು ಮತ್ತು 15,000 ಪಾಲುದಾರರನ್ನು ಆಕರ್ಷಿಸುವ ನಿರೀಕ್ಷೆಯನ್ನು ಇರಿಸಿದೆ. ಇತ್ತೀಚಿನ ಮತ್ತು ಅತ್ಯಾಧುನಿಕ ಹಲಾಲ್ ಉತ್ಪನ್ನಗಳು ಹಾಗೂ ಸೇವೆಗಳ ನಡುವೆ ನಿಮ್ಮ ಬ್ರ್ಯಾಂಡ್ ಅನ್ನು ಜಾಗತಿಕ ಮಟ್ಟದಲ್ಲಿ ಇರಿಸಲು ಇದೊಂದು ಅತ್ಯುತ್ತಮ ವೇದಿಕೆಯಾಗಿದೆ.

200 ಕ್ಕೂ ಹೆಚ್ಚು ಪ್ರದರ್ಶಕರು ಮತ್ತು 15,000 ಪಾಲುದಾರರು ಹಲಾಲ್ ಮತ್ತು ಅದರ ಉದ್ಯಮಗಳು:

‘ಹಲಾಲ್’ ಎಂಬ ಪದವು ಮೂಲತಃ ಅರೇಬಿಕ್ ಭಾಷೆಯಿಂದ ಬಂದಿದೆ ಮತ್ತು ಇಸ್ಲಾಮಿಕ್ ಕಾನೂನುಗಳ ದೃಷ್ಟಿಯಿಂದ ಪ್ರತಿಯೊಂದು ಕಾನೂನು ಬದ್ಧ ವಸ್ತು ಮತ್ತು ಕ್ರಿಯೆಯನ್ನು ಅಭಿಸಂಬೋಧಿಸಲು ಈ ಪದವನ್ನು ಬಳಸಲಾಗುತ್ತದೆ. ಅದರ ಅಕ್ಷರಶಃ ವಿಶಾಲ ಅರ್ಥದಲ್ಲಿ, ಇದು ಆಹಾರ, ಬಟ್ಟೆ, ಹಣಕಾಸು, ವೈಯಕ್ತಿಕ ಆರೈಕೆ ಇತ್ಯಾದಿ ಸೇರಿದಂತೆ ಎಲ್ಲಾ ಜೀವನ ಚಟುವಟಿಕೆಗಳಿಗೂ ಅನ್ವಯಿಸುತ್ತದೆ.

ಸಾಮಾನ್ಯವಾಗಿ ‘ಹಲಾಲ್’ ಎಂಬ ಪದವನ್ನು ನಾವು ಕೇಳಿದಾಗ ನಮ್ಮ ಮನಸ್ಸಿನಲ್ಲಿ ಅದು ಆಹಾರ ಕ್ಷೇತ್ರಕ್ಕೆ ಸಂಬಂಧಿಸಿದ್ದೆಂದೆನಿಸುತ್ತದೆ ಆದಾಗ್ಯೂ, ಇತ್ತೀಚಿನ ವರ್ಷಗಳಲ್ಲಿ ಹಲಾಲ್ ಉದ್ಯಮದಲ್ಲಿ ವಿವಿಧ ಕ್ಷೇತ್ರಗಳ ಸೇರ್ಪಡೆಯಾಗಿದೆ. ‘ಹಲಾಲ್’ ಪದವು ಶರೀಯಾ ಅಡಿಯಲ್ಲಿ ಅನುಮತಿಸುವ ವಿಷಯಕ್ಕೆ ಸಂಬಂಧಿಸಿದೆ.

ಇಂದು ವಿಶ್ವದಾದ್ಯಂತ ಮುಸ್ಲಿಮರಿಗೆ “ಹಲಾಲ್” ಪರಿಕಲ್ಪನೆಯ ಬಗೆಗಿನ ಜಾಗೃತಿಯು ಹೆಚ್ಚಾಗಿರುವುದರಿಂದಾಗಿ ಹಲಾಲ್ ಉತ್ಪನ್ನಗಳ ಬೇಡಿಕೆಯು ಹೆಚ್ಚಳವಾಗುತ್ತಿದೆ.
‘ಹಲಾಲ್ ಉದ್ಯಮವು’ ಇದೀಗ ಆಹಾರ ಸಂಸ್ಕರಣೆ, ಆಹಾರ ಸೇವೆ, ಸೌಂದರ್ಯ ವರ್ಧಕಗಳು, ವೈಯಕ್ತಿಕ ಆರೈಕೆ, ಔಷಧಗಳು ಮತ್ತು ಲಾಜಿಸ್ಟಿಕ್ಸ್ ಉದ್ಯಮಗಳಲ್ಲಿ ವ್ಯಾಪಿಸಿದ್ದಲ್ಲದೇ ಹಲಾಲ್ ಪ್ರಯಾಣ ಮತ್ತು ಆತಿಥ್ಯ ಸೇವೆಗಳು ಸೇರಿದಂತೆ ಜೀವನಶೈಲಿಯ ಇತರೆ ರಂಗಗಳಲ್ಲಿಯೂ ವಿಸ್ತರಿಸಿಸುತ್ತಿದೆ.

ಹಲಾಲ್ ಆಹಾರದಿಂದ ಆರಂಭಗೊಂಡ ಹಲಾಲ್ ಮಾರುಕಟ್ಟೆಯು ಇಂದು ಹಲಾಲ್ ಸೌಂದರ್ಯ ವರ್ಧಕಗಳು, ಹಲಾಲ್ ಲಾಜಿಸ್ಟಿಕ್ಸ್, ಹಲಾಲ್ ಫ್ಯಾಷನ್ ಮತ್ತು ಮುಸ್ಲಿಂ ಸ್ನೇಹಿ ಪ್ರವಾಸ ಮತ್ತು ಪ್ರಯಾಣ ಸೇವೆಗಳಂತಹ ಹೊಸ ಕ್ಷೇತ್ರಗಳಿಗೆ ಬೆಳೆದು ನಿಂತಿದೆ. ಇಸ್ಲಾಮಿಕ್ ಫೈನಾನ್ಸ್ ವ್ಯವಸ್ಥೆಯು ತುಲನಾತ್ಮಕವಾಗಿ ಪ್ರಬುದ್ಧ ಬಡ್ಡಿ ರಹಿತ ಮಾರುಕಟ್ಟೆಯಾಗಿದ್ದು, ಇದು ಮುಸ್ಲಿಂ ಗ್ರಾಹಕರ ಬೇಡಿಕೆಯನ್ನು ಪೂರೈಸುತ್ತಿದ್ದು, ಪ್ರಪಂಚದಾದ್ಯಂತ ಶರಿಯಾ- ದೂರುಗಳ ಉತ್ಪನ್ನಗಳ ಒಟ್ಟು ಆಸ್ತಿಗಳನ್ನು ಅಂದಾಜು ಮಾಡಿದೆ. ಹಲಾಲ್ ಉತ್ಪನ್ನಗಳನ್ನು ಬಳಸುವುದು ಪರಿಸರ ಸ್ನೇಹಿ ಮಾತ್ರವಲ್ಲದೇ ಇದು ಮಾನವ ದೇಹದ ಮೇಲೆ ಯಾವುದೇ ಋಣಾತ್ಮಕ ಪರಿಣಾಮ ಬೀರುವುದಿಲ್ಲವೆಂದು ಇತ್ತೀಚಿನ ಅಧ್ಯಯನಗಳು ಸಾಬೀತುಪಡಿಸಿದೆ.
ಪರಿಸರ-ಸ್ನೇಹಿ, ಮಾನವ ದೇಹದ ಮೇಲೆ ಅಡ್ಡ ಪರಿಣಾಮಗಳಿಲ್ಲ.

ಭಾರತೀಯ ಹಲಾಲ್ ಮಾರುಕಟ್ಟೆ:

ಬೆಳೆಯುತ್ತಿರುವ ಭಾರತೀಯ ಹಲಾಲ್ ಮಾರುಕಟ್ಟೆಗೆ ಭಾರತೀಯ ಮುಸ್ಲಿಮ್ ಜನಸಂಖ್ಯೆಯು ಹೆಬ್ಬಾಗಿಲಿನಂತಿದ್ದು, 180 ದಶಲಕ್ಷಕ್ಕೂ ಹೆಚ್ಚು ಮುಸ್ಲಿಂ ಜನಸಂಖ್ಯೆಯನ್ನು ಹೊಂದಿದೆ. ಇದು ಆದರ್ಶ ಮಾರುಕಟ್ಟೆ ಮತ್ತು ಟ್ರಿಲಿಯನ್ ಗಟ್ಟಲೆ ಡಾಲರ್ ಮೌಲ್ಯದ ವ್ಯಾಪಾರವನ್ನು ಸ್ಥಾಪಿಸಬಹುದಾದ ಸ್ಥಳವಾಗಿದೆ.

ಹಲಾಲ್ ಚಳುವಳಿಗಳು ಪ್ರಚಾರವನ್ನು ಗಳಿಸುತ್ತಿದ್ದಂತೆ, ಜಾಗತಿಕ ಉದ್ಯಮವು ಶರಿಯಾ-ದೂರು ಸರಕುಗಳಿಗೆ, ಅದರಲ್ಲಿಯೂ ವಿಶೇಷವಾಗಿ ಸೌಂದರ್ಯ ವರ್ಧಕಗಳಿಗೆ ಭಾರತದಲ್ಲಿ ಹೆಚ್ಚುತ್ತಿರುವ ಬೇಡಿಕೆಯ ಮೇಲೆ ತನ್ನ ದೃಷ್ಟಿಯನ್ನು ನೆಟ್ಟಿದೆ. ಇಂಡೋನೇಷ್ಯಾದ ಪಕ್ಕದಲ್ಲಿಯೇ ವಿಶ್ವದ ಎರಡನೇ ಅತಿದೊಡ್ಡ ಮುಸ್ಲಿಂ ಜನಸಂಖ್ಯೆಗೆ ಭಾರತ ನೆಲೆಯಾಗಿದೆ. ಭಾರತವು ವಿಶ್ವದ ಅತ್ಯಂತ ಕಾರ್ಯ ಸಾಧ್ಯವಾದ ಹಲಾಲ್ ಮಾರುಕಟ್ಟೆಗಳಲ್ಲಿ ಒಂದಾಗಿದೆ.
ಆರಂಭದಲ್ಲಿ ಹಲಾಲ್-ಪ್ರಮಾಣೀಕೃತ ಸೌಂದರ್ಯ ವರ್ಧಕಗಳನ್ನು ನಿರ್ದಿಷ್ಟವಾಗಿ ಮುಸ್ಲಿಂ ಸಮುದಾಯವನ್ನು ಪೂರೈಸಲು ತಯಾರಿಸಲಾಯಿತು. ಆದರೆ, ಮುಸ್ಲಿಮೇತರ ಗ್ರಾಹಕರಲ್ಲಿಯೂ ಈ ಉತ್ಪನ್ನಗಳ ಕುರಿತಾದ ಬೇಡಿಕೆಯೂ ಹೆಚ್ಚುತ್ತಿದ್ದು, ಇದು ಭಾರತದಂತಹ ಬೃಹತ್ ಜನಸಂಖ್ಯೆಯ ದೇಶದಲ್ಲಿ ಮತ್ತೊಂದು ಸಕಾರಾತ್ಮಕ ವಿಷಯವಾಗಿದೆ.
ಗ್ರಾಹಕರು ಇಂದು, ಸಾವಯವ ಗುಣಲಕ್ಷಣಗಳಿಂದ ಕೂಡಿದ ಉತ್ಪನ್ನಗಳನ್ನು ಬಯಸಲಾರಂಭಿಸಿದ್ದಾರೆ. ಹಲಾಲ್ ಲಿಪ್ ಸ್ಟಿಕ್ಗಳು, ಫೇಸ್ ಕ್ರೀಮ್ಗಳು ಮತ್ತು ಶ್ಯಾಂಪೂಗಳ ಬೇಡಿಕೆಯು ಸ್ಥಾಪಿತ ಮಾರುಕಟ್ಟೆಗಳು ಪೂರೈಸುವ ಸರಕುಗಳಿಗಿಂತಲೂ ಹೆಚ್ಚಾಗುತ್ತಿದೆ.

180 ಮಿಲಿಯನ್ ಮುಸ್ಲಿಂ ಜನಸಂಖ್ಯೆ:
ಭಾರತದಲ್ಲಿ ಹಲಾಲ್ ಮಾರುಕಟ್ಟೆಯ ಅವಕಾಶಗಳು
ಅಂತಾರಾಷ್ಟ್ರೀಯ ಹಲಾಲ್ ಮಾನ್ಯತೆ ವೇದಿಕೆಯ ಪ್ರಧಾನ ಕಾರ್ಯದರ್ಶಿ ಎಚ್.ಇ. ಮೊಹಮ್ಮದ್ ಸಲೇಹ್ ಬದ್ರಿ ಹೀಗೆ ಹೇಳುತ್ತಾರೆ: “ಭಾರತವು ಲಕ್ಷಾಂತರ ಮುಸ್ಲಿಮರಿಗೆ ನೆಲೆಯಾಗಿದೆ. ಖಂಡಿತವಾಗಿಯೂ ನಾವು ಐಎಚ್ಎಎಫ್ ಅನ್ನು ಬಲಪಡಿಸಲು ಶ್ರಮಿಸುತ್ತಿರುವಾಗ ಇಲ್ಲಿ ಕೆಲಸ ಮಾಡಲು ಎದುರು ನೋಡುತ್ತಿದ್ದೇವೆ. ಜಾಗತಿಕ ಹಲಾಲ್ ಉದ್ಯಮವನ್ನು ಏಕೀಕರಿಸುವ ಮತ್ತು ವ್ಯಾಪಾರ ಅಡೆತಡೆಗಳನ್ನು ನಿರ್ಮೂಲನಗೊಳಿಸುವುದು ನಮ್ಮ ಧ್ಯೇಯವಾಗಿದ್ದು, ಐಎಚ್ಎಎಫ್ ತನ್ನ ಹಲಾಲ್ ಮೂಲಸೌಕರ್ಯವನ್ನು ಹೆಚ್ಚಿಸುವಲ್ಲಿ ಭಾರತವನ್ನು ಬೆಂಬಲಿಸಲು ಸಿದ್ಧವಾಗಿದೆ.

ಸೌಂದರ್ಯ ವರ್ಧಕಗಳು ಮತ್ತು ವೈಯಕ್ತಿಕ ಆರೈಕೆ ಉದ್ಯಮವು ಭಾರತದಲ್ಲಿ ವೇಗವಾಗಿ ಬೆಳೆಯುತ್ತಿರುವ ಗ್ರಾಹಕ ಉತ್ಪನ್ನಗಳ ವಿಭಾಗವಾಗಿದೆ. ಇದು ಅಂತರರಾಷ್ಟ್ರೀಯ ಕಂಪನಿಗಳಿಗೆ ದೊಡ್ಡ ಅವಕಾಶಗಳನ್ನು ನೀಡುತ್ತದೆ. ಅಸೋಸಿಯೇಟೆಡ್ ಚೇಂಬರ್ಸ್ ಆಫ್ ಕಾಮರ್ಸ್ ಮತ್ತು ಇಂಡಸ್ಟ್ರಿ ಆಫ್ ಇಂಡಿಯಾದ((ASSOCHAM)) ಮಾರುಕಟ್ಟೆ ದೃಷ್ಟಿಕೋನ ವರದಿಯ ಪ್ರಕಾರ, 2017 ರಲ್ಲಿ 6.5 ಬಿಲಿಯನ್ ಡಾಲರ್ ಆರ್ಥಿಕತೆ ಹೊಂದಿದ್ದ ಭಾರತದ ಸೌಂದರ್ಯ ವರ್ಧಕ ಉದ್ಯಮವು 2035 ರ ವೇಳೆಗೆ 35 ಬಿಲಿಯನ್ ಡಾಲರ್ಗಳಿಗೆ ಬೆಳೆಯುತ್ತದೆ ಎಂದು ಅಂದಾಜಿಸಿದೆ.

2017ರ 6.35 ಬಿಲಿಯನ್ ಡಾಲರ್ನಿಂದ 2035 ರಿಂದ 35 ಬಿಲಿಯನ್ ಡಾಲರ್ನತ್ತ
ಎಕ್ಸ್ಪೋದ ವೈಶಿಷ್ಟ್ಯಗಳು: ಜನವರಿ 18 ರಿಂದ 20 ರವರೆಗೆ ನಡೆಯಲಿರುವ ಇಂಡಿಯನ್ ಇಂಟರ್ ನ್ಯಾಷನಲ್ ಹಲಾಲ್ ಎಕ್ಸ್ಪೊ -2020 ಈ ಕೆಳಗಿನ ರಂಗಗಳನ್ನು ಒಳಗೊಂಡಿದ್ದು, ಅದರಲ್ಲಿ ಪಾಲ್ಗೊಳ್ಳುವ ವ್ಯಕ್ತಿಗಳು ಅಥವಾ ವ್ಯಾಪಾರ ಮಾಲಿಕರಿಗೆ ಅನ್ವೇಷಿಸಲು ಸಹಕಾರ ನೀಡುತ್ತದೆ, ಅವುಗಳೆಂದರೆ:

1. ಆಹಾರ ಮತ್ತು ಪಾನೀಯ
2. ಸೌಂದರ್ಯ ವರ್ಧಕಗಳು
3. ಫ್ಯಾಷನ್ ಮತ್ತು ಜೀವನ ಶೈಲಿ
4. ಹಲಾಲ್ ಟ್ರಾವೆಲ್ಸ್ ಮತ್ತು ಪ್ರವಾಸೋದ್ಯಮ
5. ಔಷಧಗಳು
6. ಪರ್ಯಾಯ ಹಣಕಾಸು,
7. ಕೈಗಾರಿಕಾ ಉದ್ಯಾನಗಳು,
8. ಎಂಜಿನಿಯರಿಂಗ್ ಉತ್ಪನ್ನಗಳು,
9. ಇ-ಕಾಮರ್ಸ್
10. ಲಾಜಿಸ್ಟಿಕ್ಸ್
ಎಕ್ಸ್ಪೋದ ಮತ್ತೊಂದು ಕುತೂಹಲಕಾರಿ ಅಂಶವೇನೆಂದರೇ, ಈ ಅಂತರರಾಷ್ಟ್ರೀಯ ಹಲಾಲ್ ಸಮ್ಮೇಳನದಲ್ಲಿ ಉದ್ಯಮದ ಜಾಗತಿಕ ತಜ್ಞರು, ಸಲಹೆಗಾರರು, ಹಲಾಲ್-ಇಕೋ-ಸಿಸ್ಟಮ್ ಅತಿಥಿ ಭಾಷಣಕಾರರಿಂದ 3 ದಿನಗಳ ಸಮಾವೇಶವನ್ನು ನಡೆಸಲಿದೆ.

ಸಮ್ಮೇಳನದಲ್ಲಿ ಒಳಗೊಂಡಿರುವ ವಿಷಯಗಳು:
ಭಾರತದಲ್ಲಿ ಹಲಾಲ್ ಮಾರುಕಟ್ಟೆ ಒಳನೋಟಗಳು, ಹಲಾಲ್ ಆಹಾರದ ಹೊಸ ಪ್ರವೃತ್ತಿಗಳು ಮತ್ತು ಅವಕಾಶಗಳು, ಹಲಾಲ್ ಮತ್ತು ಪರಿಸರ ಸ್ನೇಹಿ ಸೌಂದರ್ಯ ವರ್ಧಕಗಳು, ಹಲಾಲ್ ಸ್ಟಾರ್ಟ್ ಅಪ್, ಹಲಾಲ್ ಸೇವಾ ಪೂರೈಕೆದಾರರು ಮತ್ತು ಪ್ರಮಾಣೀಕರಣ, ಪರ್ಯಾಯ ಔಷಧ – ಆಯುಷ್, ವಿನ್ಯಾಸ ಚಿಂತನೆ ನಾವೀನ್ಯತೆ ಮತ್ತು ಸ್ಪರ್ಧಾತ್ಮಕತೆ, ಡಿಜಿಟಲ್ ಕೈಗಾರಿಕಾ ಕ್ರಾಂತಿ, ನೆಟ್ ವರ್ಕ್ ಆರ್ಥಿಕತೆ ಮತ್ತು ಹಲಾಲ್ ಉದ್ಯಮ, ಭಾರತದಲ್ಲಿ ಹಲಾಲ್ ಪ್ರವಾಸೋದ್ಯಮ ಮತ್ತು ಇಸ್ಲಾಮಿಕ್ ಪರಂಪರೆ, ಜಾಗತಿಕ ಹಲಾಲ್ ಸೂಪರ್ ಹೈವೇಗೆ ಸೇರಲು ಎಸ್ಎಂಇಗಳಿಗಾಗಿ ರಾಂಪ್ಗಳನ್ನು ನಿರ್ಮಿಸುವುದು, ಬ್ಲಾಕ್ ಚೈನ್,
ಐಒಟಿ, ಎಐ, ದೃಢವಾದ ಹಲಾಲ್ ಆರ್ಥಿಕತೆಯನ್ನು ಬೆಳೆಸುವಿಕೆ, ಜಾಗತಿಕ ಏಕೀಕರಣ ಮತ್ತು ನೈತಿಕ ಅಭ್ಯಾಸ, ಜಾಗತಿಕ ಹಲಾಲ್ ಮಾರುಕಟ್ಟೆಯನ್ನು ಪ್ರವೇಶಿಸುವ ತಂತ್ರಗಳು, ಮುಸ್ಲಿಂ ಗ್ರಾಹಕರ ರಕ್ಷಣೆಗೆ ಟ್ಯಾಪ್ ಮಾಡುವುದು, ಹಲಾಲ್ ಪರಿಸರ ವ್ಯವಸ್ಥೆಯಲ್ಲಿನ ಮೌಲ್ಯಗಳು ಗಡಿಯಾಚೆಗಿನ ವ್ಯವಹಾರ: ASEAN ದೇಶಗಳು, ಇ-ಕಾಮರ್ಸ್ ಮತ್ತು ಚಿಲ್ಲರೆ ವ್ಯಾಪಾರದ ಹೊಸ ಪರಿಕಲ್ಪನೆಗಳ ಪರಿವರ್ತನೆ, ಡಿಜಿಟಲ್ ಆರ್ಥಿಕತೆಯ ವೈಶಿಷ್ಟ್ಯ, ಹಲಾಲ್ ಆರ್ಥಿಕತೆಯ ಜಾಗತಿಕ ಸಮನ್ವಯ ಮತ್ತು ನೈತಿಕ ಅಭ್ಯಾಸಗಳು ಎಂಬಿತ್ಯಾದಿ ವಿಷಯಗಳನ್ನು ಒಳಗೊಂಡಿದೆ.

ಇಡೀ ಕಾರ್ಯಕ್ರಮವನ್ನು ATOBA ಬ್ಯುಸಿನೆಸ್ ನೆಟ್ವರ್ಕ್ಗಳು ಆಯೋಜಿಸುತ್ತಿದ್ದು, ಇದು ಅತ್ಯುತ್ತಮ ನೈತಿಕ ಅಭ್ಯಾಸಗಳ ಮೇಲೆ ನಂಬಿಕೆಯನ್ನಿರಿಸುತ್ತದೆ, ಡಿಜಿಟಲ್ ತಂತ್ರಗಳನ್ನು ಅನ್ವಯಿಸುವುದರೊಂದಿಗೆ ವ್ಯಾಪಾರ ಪಾಲುದಾರ ಸಮುದಾಯಗಳ ಮೂಲಕ ಮೌಲ್ಯ ವ್ಯವಹಾರ ಸರಪಳಿಯನ್ನು ರಚಿಸುತ್ತದೆ. ಇದರ ವ್ಯವಹಾರ ತತ್ವಶಾಸ್ತ್ರವು ಮುಖ್ಯವಾಗಿ ದೀರ್ಘಕಾಲೀನ ಸುಸ್ಥಿರ ಬೆಳವಣಿಗೆ, ಪರಿಸರ ಸಂರಕ್ಷಣೆ, ಸಾಮಾಜಿಕ ಜವಾಬ್ದಾರಿ ಮತ್ತು ಸರ್ವಶಕ್ತನ ಕಡೆಗಿರುವ ಹೊಣೆಗಾರಿಕೆಗಾಗಿ ಇಂತಹ ಪರಿಸರ ವ್ಯವಸ್ಥೆಯ ಭಾಗವಾಗಲು ಮುಖ್ಯವಾಗಿ ತೊಡಗಿಸಿಕೊಂಡಿದೆ.
ATOBA ಎನ್ನುವುದು ವೈವಿಧ್ಯಮಯ ವ್ಯಾಪಾರ ಅಂಶಗಳಿಂದ ಹೆಚ್ಚು ಪ್ರೇರಿತ ಮತ್ತು ಸೃಜನಶೀಲ ವೃತ್ತಿಪರರು ರಚಿಸಿದ ಮತ್ತು ಅಭಿವೃದ್ಧಿ ಪಡಿಸಿದ ಒಂದು ಕಲ್ಪನೆ. ವೈವಿಧ್ಯಮಯ, ನ್ಯಾಯಸಮ್ಮತ ಮತ್ತು ವಿಶಾಲವಾದ ನೈತಿಕ ವ್ಯವಹಾರ ಪರಿಸರ ವ್ಯವಸ್ಥೆಯನ್ನುಳ್ಳ ಅವಕಾಶಗಳನ್ನು ಒದಗಿಸುವುದು ನಮ್ಮ ದೃಷ್ಟಿಕೋನವಾಗಿದೆ.
ಇಂಡಿಯನ್ ಸೆಂಟರ್ ಫಾರ್ ಇಸ್ಲಾಮಿಕ್ ಫೈನಾನ್ಸ್, ರಿಫಾ ಚೇಂಬರ್ ಆಫ್ ಕಾಮರ್ಸ್ ಆಂಡ್ ಇಂಡಸ್ಟ್ರಿ, IYMER ಟರ್ಕಿ, MUSIAD(ಸ್ವತಂತ್ರ ಕೈಗಾರಿಕೋದ್ಯಮಿಗಳು ಮತ್ತು ಉದ್ಯಮಿಗಳ ಸಂಘ) ಟರ್ಕಿ, ಎಂಸಿಸಿಐ ಮಾರಿಷಸ್, ಇನ್ಕ್ಯೂಹ್ಯಾಬ್ ಇಂಡಿಯಾ ಮತ್ತು ಇನ್ನೂ ಅನೇಕರು ಈ ಕಾರ್ಯಕ್ರಮದ ಪಾಲುದಾರರಾಗಿದ್ದು, ಜಾಗತಿಕ ಮಟ್ಟದಿಂದ. ಇನ್ನೂ ಕೆಲವು ಸಂಸ್ಥೆಗಳು ಈ ಕಾರ್ಯಕ್ರಮವನ್ನು ಸಂಘಟಿಸಲು ಬೆಂಬಲಿಸುತ್ತಿವೆ.

ಮೀಡಿಯಾ ಒನ್, ಮಯೀಷತ್, ಹಲಾಲ್ ಫೋಕಸ್, ದಿ ಕಂಪ್ಯಾನಿಯನ್, ಮತ್ತು ಇನ್ನೂ ಕೆಲವು ಮಾಧ್ಯಮಗಳು ಈ ಅಂತರರಾಷ್ಟ್ರೀಯ ಕಾರ್ಯಕ್ರಮದ ಮಾಧ್ಯಮ ಪಾಲುದಾರರಾಗಿದ್ದಾರೆ.

ಹೆಚ್ಚಿನ ವಿವರಗಳಿಗೆ www.atoba.org ಗೆ ಭೇಟಿ ನೀಡಿ ಅಥವಾ [email protected] ಗೆ ಮೇಲ್ ಮಾಡಿ.

LEAVE A REPLY

Please enter your comment!
Please enter your name here

Latest news

ವಿವಾದಾತ್ಮಕ ಪೌರತ್ವ ತಿದ್ದುಪಡಿ ಮಸೂದೆ ಮಂಡಿಸಿದ ಅಮಿತ್ ಶಾ ; ವ್ಯಾಪಕ ವಿರೋಧ

ನವದೆಹಲಿ: ವಿವಾದಾತ್ಮಕ ಪೌರತ್ವ (ತಿದ್ದುಪಡಿ) ಮಸೂದೆಯನ್ನು ಗೃಹ ಸಚಿವ ಅಮಿತ್ ಶಾ ಅವರು ಇಂದು ಸಂಸತ್ತಿನಲ್ಲಿ ಮಂಡಿಸಿದರು. ಈ ಮಸೂದೆಯು ಸಂವಿಧಾನದ 14 ನೇ ವಿಧಿಯನ್ನು...

ಸಿದ್ಧರಾಮಯ್ಯ ಪಕ್ಷದ ಶಾಸಕಾಂಗ ನಾಯಕನ ಸ್ಥಾನಕ್ಕೆ ರಾಜೀನಾಮೆ!

ಬೆಂಗಳೂರು :ಉಪಚುನಾವಣೆಯಲ್ಲಿ ಕಾಂಗ್ರೆಸ್ ಎರಡು ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿದ್ದು, ಪಕ್ಷದ ಹೀನಾಯ ಸೋಲಿನ ಹಿನ್ನೆಲೆಯಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ತಮ್ಮ ಶಾಸಕಾಂಗ ಪಕ್ಷದ ನಾಯಕನ ಸ್ಥಾನಕ್ಕೆ...

ಹೂಡೆಯ ಸಾಲಿಹಾತ್ ಶಾಲೆ: ಉಡುಪಿ ಅಂತರ್ ಶಾಲಾ ಮಟ್ಟದ ವಿಜ್ಞಾನ ಮೇಳ

ತೋನ್ಸೆ - ಹೂಡೆಯ ಸಾಲಿಹಾತ್ ಶಾಲಾ ಕ್ರೀಡಾಂಗಣದಲ್ಲಿ ಇತ್ತೀಚೆಗೆ ಎ.ಜೆ.ಅಕಾಡಮಿ ರಾಯಚೂರು ಹಾಗೂ ಸಾಲಿಹಾತ್ ಶಿಕ್ಷಣ ಸಂಸ್ಥೆ ಇವರುಗಳ ಜಂಟಿ ಆಶ್ರಯದಲ್ಲಿ ಉಡುಪಿ ಅಂತರ್ ಶಾಲಾ...

ಕೊನೆಗೂ ಗೆದ್ದ ರಿಜ್ವಾನ್ ಅರ್ಷದ್; ರೋಶನ್ ಬೇಗ್’ಗೆ ಮುಖಭಂಗ

ಬೆಂಗಳೂರು: ಈ ಬಾರಿ ಶಿವಾಜಿ ನಗರದ ಉಪ ಚುನಾವಣೆ ಬಹಳಷ್ಟು ಕುತೂಹಲ ಹುಟ್ಟಿಸಿತ್ತು. ರೋಶನ್ ಬೇಗ್ ರಿಜ್ವಾನ್ ಅರ್ಷದ್ ಅವರನ್ನು ಸೋಲಿಸುವ ಪಣ ತೊಟ್ಟಿದ್ದರು. ಇದೀಗ...
- Advertisement -

ಕಾಂಗ್ರೆಸ್ ನಾಯಕರೇ ಪಕ್ಷವನ್ನು ಕೆಳಗುರುಳಿಸಿದ್ದಾರೆ – ಜನಾರ್ದನ ಪೂಜಾರಿ

ಮಂಗಳೂರು: ಬಿಜೆಪಿಯ ಗೆಲುವಿನ ಬಗ್ಗೆ ಮೊದಲೇ ಗ್ರಹಿಸಿದ್ದೇನೆ ಎಂದು ಹಿರಿಯ ಕಾಂಗ್ರೆಸ್ ಮುಖಂಡ ಜನಾರ್ಧನ್ ಪೂಜಾರಿ ಸೋಮವಾರ ಪತ್ರಿಕಾಗೋಷ್ಟಿಯಲ್ಲಿ ಹೇಳಿದ್ದಾರೆ. ಕರ್ನಾಟಕ ಉಪಚುನಾವಣೆ ಫಲಿತಾಂಶಗಳ ಕುರಿತು ಪತ್ರಿಕಾಗೋಷ್ಠಿಗಳನ್ನುದ್ದೇಶಿಸಿ...

ಅನರ್ಹರಿಗೆ ಜನ ಮತ; ಬಿಜೆಪಿ ಸರಕಾರ ಭದ್ರ

ಬೆಂಗಳೂರು: ಹದಿನೈದು ಕ್ಷೇತ್ರಗಳಿಗೆ ನಡೆದ ಉಪ ಚುನಾವಣೆಯಲ್ಲಿ ಬಿಜೆಪಿ ಭರ್ಜರಿ ನಿರ್ವಹಣೆ ನೀಡಿದ್ದು ಹನ್ನೆರಡು ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿದೆ. ಕಾಂಗ್ರೆಸ್ ಕೇವಲ ಎರಡು ಕ್ಷೇತ್ರಗಳಲ್ಲಿ ಗೆಲುವು...

Must read

ಆರಾಧನ ಸ್ಥಳ (ವಿಶೇಷ ಕಾಯಿದೆ) – 1991 ಯ ಸುತ್ತ ಮುತ್ತ.

ಲೇಖಕರು: ಯಾಸೀನ್ ಕೋಡಿಬೆಂಗ್ರೆ (ಕಾನೂನು ಪದವೀಧರ ಮತ್ತು ರಾಜಕೀಯ ಶಾಸ್ತ್ರ, ಸ್ನಾತ್ತಕೋತರ...
- Advertisement -

You might also likeRELATED
Recommended to you