ಉಡುಪಿ: ಕೊಸ್ಟಲ್ ಮಿರರ್ ಸುದ್ದಿ: ಹಾಜಿ ಅಬ್ದುಲ್ಲಾ ಸ್ಮಾರಕ ಮಕ್ಕಳ ಮತ್ತು ಮಹಿಳಾ ಹೆರಿಗೆ ಆಸ್ಪತ್ರೆಯ ಖಾಸಗೀಕರಣಕ್ಕೆ ಸರಕಾರಿ ಆಸ್ಪತ್ರೆ ಉಳಿಸಿ ಹೋರಾಟ ಸಮಿತಿ, ಯಾವುದೇ ಕಾರಣಕ್ಕೂ ಆಸ್ಪತ್ರೆ ಖಾಸಗೀಕರಣಗೊಳ್ಳಬಾರದು ಮತ್ತು ತಮ್ಮ ರಾಜಕೀಯ ಲಾಭಕ್ಕಾಗಿ ತರಾತುರಿಯಲ್ಲಿ ಆಸ್ಪತ್ರೆಯ ಅಪೂರ್ಣ ಕಾಮಗಾರಿಯ ಕಟ್ಟಡವನ್ನು ಪೂರ್ತಿಗೊಳಿಸಿ ನಾಗರಿಕರನ್ನು ಮೋಸಗೊಳಿಸಬಾರದೆಂದು ಇಂದು ಉಡುಪಿ ಪತ್ರಕರ್ತರ ಭವನದಲ್ಲಿ ನಡೆದ ಸುದ್ದಿಗೋಷ್ಠಿಯನ್ನುದ್ದೇಶಿಸಿ ಹೇಳಿದೆ.

ಈ ಮುಂಚೆಯೇ ಉಡುಪಿ ನಾಗರಿಕರು ಉದ್ಯಮಿ ಬಿ.ಆರ್ ಶೆಟ್ಟಿಯವರ ಬಿ.ಆರ್ ವೆಂಚರ್ಸ್ ಗೆ ಸರಕಾರಿ ಆಸ್ಪತ್ರೆ ಮತ್ತು ಜಾಗವನ್ನು ಬಿಟ್ಟುಕೊಟ್ಟು ಖಾಸಗೀಕರಣ ನಡೆಸುತ್ತಿರುದರ ವಿರುದ್ದ ವ್ಯಾಪಕ ಆಕ್ರೋಶ ವ್ಯಕ್ತಪಡಿಸಿದ್ದರು. ಇದೀಗ ಚುನಾವಣಾ ನೀತಿ ಸಂಹಿತೆಯ ಕಾರಣ ನಂತರ ಉದ್ಘಾಟನೆ ಮಾಡಲು ಸಾಧ್ಯವಾಗುದಿಲ್ಲವೆಂಬ ಕಾರಣಕ್ಕೆ ಈ ತರಾತುರಿಯ ಉದ್ಘಾಟನೆ ಹಮ್ಮಿಕೊಳ್ಳಲಾಗಿದೆ ಎಂಬ ದೂರು ಕೇಳಲಾರಂಭಿಸಿದೆ.

200 ಹಾಸಿಗೆಯ ಆಸ್ಪತ್ರೆಯನ್ನು ನಿರ್ವಹಿಸಲು ಎಷ್ಟು ವೈದ್ಯರನ್ನು ನೇಮಿಸಲಾಗಿದೆ. ಶಸ್ತ್ರ ಚಿಕಿತ್ಸೆ ಕೊಠಡಿ, ದಾದಿಯರ ನೇಮಕದ ಬಗ್ಗೆ ಮಾಹಿತಿಯನ್ನು ಬಹಿರಂಗಗೊಳಿಸದೆ ಜನರ ಹಕ್ಕನ್ನು ಕಸಿದುಕೊಳ್ಳುವ ಹುನ್ನಾರ ನಡೆಯುತ್ತಿದೆಯೆಂದು ಹೋರಾಟ ಸಮಿತಿ ಆರೋಪಿಸಿದೆ. ಸರಕಾರ ಜನಪರದ ಘೋಷಣೆಯಡಿಯಲ್ಲಿ ಬಂಡವಾಳಶಾಹಿಗಳ ಗುಲಾಮಗಿರಿ ಮಾಡುತ್ತಿದೆಯೆಂದು ಸಮಿತಿ ಆಕ್ರೋಶ ವ್ಯಕ್ತಪಡಿಸಿದೆ. ಈ ಮಧ್ಯೆ ನವೆಂಬರ್ 19 ರಂದು ಮುಖ್ಯಮಂತ್ರಿ ಅಸ್ಪತ್ರೆಯ ಉದ್ಘಾಟನೆಗೆ ಆಗಮಿಸುತ್ತಿದ್ದು, ಪ್ರತಿಭಟನೆಯ ಸ್ವಾಗತ ದೊರಕುವ ಸಾಧ್ಯತೆಯಿದೆ.

ಸಿ.ಪಿ.ಎಮ್ ನಿಂದ ಪ್ರತಿಭಟನೆ: ಅಜ್ಜರಕಾಡಿನ ಹುತಾತ್ಮ ಸ್ಮರಾಕ ಬಳಿ ಸಿ.ಪಿ.ಎಮ್ ಜಿಲ್ಲಾ ಘಟಕ ನಾಳೆ 10 ಗಂಟೆಗೆ ಪ್ರತಿಭಟನೆ ಹಮ್ಮಿಕೊಂಡಿದೆ ಎಂದು ತಿಳಿದು ಬಂದಿದ್ದು, ಈ ಮೂಲಕ ಮುಖ್ಯಮಂತ್ರಿಗೆ ಪ್ರತಿಭಟನೆಯ ಸ್ವಾಗತಕ್ಕೆ ಉಡುಪಿ ಸಜ್ಜುಗೊಂಡಿದೆ.

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.