ಉಡುಪಿ:ಕೋಸ್ಟಲ್ ಮಿರರ್: ಹಾಜಿ ಅಬ್ದುಲ್ಲಾ ಮಹಿಳಾ ಮತ್ತು ಮಕ್ಕಳ ಆಸ್ಪತ್ರೆಯನ್ನು ಉದ್ಯಮಿ ಬಿ.ಆರ್ ಶೆಟ್ಟಿಯವರ ಕಂಪೆನಿ ಬಿ.ಆರ್ ವೆಂಚರ್ಸ್ ಗೆ ನೀಡಿದ್ದ ಸರಕಾರಕ್ಕೆ ಸಾರ್ವಜನಿಕರಿಂದ ವ್ಯಾಪಕ ಟೀಕೆ ಮತ್ತು ವಿರೋಧ ವ್ಯಕ್ತವಾಗಿತ್ತು. ಈ ಬಗ್ಗೆ ಸರಕಾರಿ ಆಸ್ಪತ್ರೆ ಉಳಿಸಿ ಹೋರಾಟ ಸಮಿತಿ ನ್ಯಾಯಾಲಯದ ಮೆಟ್ಟಿಲೇರಿ ಸರಕಾರಿ ಆಸ್ಪತ್ರೆಯನ್ನು ಖಾಸಗೀಕರಣ ಮಾಡುದರ ವಿರುದ್ದ ಮೊಕದ್ದಮೆ ದಾಖಾಲಿಸಿದೆ. ಈಗಾಗಲೇ ನ್ಯಾಯಲಯದಲ್ಲಿ ವಿಚಾರಣೆ ನಡೆಯುತ್ತಿದೆ. ಆದರೆ ಅಚ್ಚರಿಯ ಬೆಳವಣಿಗೆ ಎಂಬಂತೆ ಸರಕಾರ ಮತ್ತು ಬಿ.ಆರ್ ವೆಂಚರ್ಸ್ ಅಪೂರ್ಣ ಕಟ್ಟಡವನ್ನು ನವೆಂಬರ್ 19 ರಂದು ಉದ್ಘಾಟನೆ ಮಾಡಲು ಮುಂದಾಗಿದೆ. ಸ್ವತಃ ಮುಖ್ಯಮಂತ್ರಿ ಸಿದ್ದರಾಮಯ್ಯ ಉದ್ಘಾಟನೆಗೆ ಆಗಮಿಸುತ್ತಿದ್ದಾರೆ.

ಈ ತರಾತುರಿಯ ಉದ್ಘಾಟನೆಗೆ ಕಾರಣವಾದರೂ ಏನು? ಚುನಾವಣೆ ಹತ್ತಿರ ಬರುತ್ತಿರುದರಿಂದ ನೀತಿ ಸಂಹಿತೆ ಜಾರಿಯಾಗಿ ಉದ್ಘಾಟನೆಗೆ ಭವಿಷ್ಯದಲ್ಲಿ ಅಡಚಣೆ ಉಂಟಾಗಬಹುದೆಂಬ ಭಯ ಸರಕಾರಕ್ಕೆ ಕಾಡುತ್ತಿದೆಯೇ? ಅಥವಾ ನ್ಯಾಯಲಯದಲ್ಲಿ ಹೋರಾಟಗಾರರಿಗೆ ಜಯವಾಗಿ ಆಸ್ಪತ್ರೆಯ ಖಾಸಗೀಕರಣ ಕೈತಪ್ಪಿ ಬಿ.ಆರ್ ಶೆಟ್ಟರೊಂದಿಗೆ ಸರಕಾರ ಮಾಡಿಕೊಂಡಿರುವ ಒಪ್ಪಂದ ಮುರಿದು ಬೀಳಲಿದೆ ಎಂಬ ಒತ್ತಡವೇ? ಈ ಬಗ್ಗೆ ಉಡುಪಿಯ ನಾಗರಿಕರು ಸಾಕಷ್ಟು ಚರ್ಚೆ ನಡೆಸುತ್ತಿದ್ದು ಸರಕಾರ ಒಂದು ಕಡೆ ಖಾಸಗಿ ಆಸ್ಪತ್ರೆಯ ಮೇಲೆ ನಿಯಂತ್ರಣ ಸಾಧಿಸಲು ಕಾಯ್ದೆ ಜಾರಿಗೆ ತರುತ್ತಿದ್ದೂ, ಮತ್ತೊಂದು ಕಡೆ ಸರಕಾರಿ ಆಸ್ಪತ್ರೆಯನ್ನು ಖಾಸಗಿಯವರ ಕೈಗೊಪ್ಪಿಸುತ್ತಿದೆ. ಈ ಬಗ್ಗೆ ವ್ಯಾಪಕ ಆಕ್ರೋಶ ವ್ಯಕ್ತವಾಗುತ್ತಿದ್ದು, ಸ್ವತಃ ಸರಕಾರ ಜನವಿರೋಧಿ ನೀತಿಯನ್ನು ಅಳವಡಿಸುವುದು ಸೂಕ್ತವಲ್ಲ ಎಂಬ ಕೂಗು ಕೇಳಿ ಬರುತ್ತಿದೆ.

ಈಗ ಅಪೂರ್ಣ ಕಟ್ಟಡವನ್ನು ಉದ್ಘಾಟನೆಗೆ ಹೊರಟಿರುವ ಸರಕಾರ, ನೂರಾರು ಕಾರ್ಮಿಕರನ್ನು ಬಳಸಿ ತರಾತುರಿಯಲ್ಲಿ ಕೆಲಸ ಮಾಡಿಸಲು ಪ್ರಯತ್ನಿಸುತ್ತಿದೆ. ರಾತ್ರಿ ಹಗಲು ಕೆಲಸ ನಡೆಯುತ್ತಿದ್ದು, ಸರಕಾರದ ರಾಜಕೀಯಕ್ಕೆ ಅಪೂರ್ಣ ಕಟ್ಟಡ ಉದ್ಘಾಟನೆ ಮಾಡಿ ಉಡುಪಿ ನಾಗರಿಕರನ್ನು ಮೋಸ ಮಾಡುತ್ತಿದೆಯೇ ? ಹೀಗೆ ಹತ್ತು ಹಲವು ಪ್ರಶ್ನೆಗಳು ಸಾರ್ವಜನಿಕ ವಲಯದಲ್ಲಿ ಕೇಳಿ ಬರುತ್ತಿದೆ.

ಹೋರಾಟ ಸಮಿತಿ ವಿರೋಧ: ತರಾತುರಿಯಿಂದ ಜನ ವಿರೋಧಿ ನೀತಿಯನ್ನು ಉಡುಪಿ ಜನರ ಮೇಲೆ ಸರಕಾರ ಹೇರಲು ಪ್ರಯತ್ನಿಸುತ್ತಿದೆ ಇದು ಖಂಡನಾರ್ಹ. ಸರಕಾರದ ಈ ನಡೆಯ ವಿರುದ್ದ ಆಸ್ಪತ್ರೆ ಹೋರಾಟ ಸಮಿತಿ ಪ್ರತಿಭಟನೆ ಹಮ್ಮಿಕೊಳ್ಳುವ ಸಾಧ್ಯತೆಗಳಿವೆ.

ತರಾತುರಿಯ ಕಾಮಗಾರಿ ನಡೆಯುತ್ತಿರುವ ವೀಡಿಯೋ

https://www.youtube.com/edit?o=U&video_id=M8wM9dC7TOc

 

 

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.