ಲಾಹೋರ್: ಮುಂಬೈ ಬಾಂಬ್ ಬ್ಲಾಸ್ಟ್ ಪ್ರಕರಣದ ಪ್ರಮುಖ ಆರೋಪು ಹಾಫೀಜ್ ಸಯೀದ್ ನನ್ನು ಲಾಹೋರಿನಲ್ಲಿ ಪಾಕಿಸ್ತಾನ ಪಂಜಾಬ್ ಪ್ರಾಂತ್ಯದ ಸಿಟಿಡಿ ಪೊಲೀಸರು ಬಂಧಿಸಿದ್ದಾರೆ.

ಜಮಾತ್‌ –ಉದ್‌–ದುವಾ ಮುಖ್ಯಸ್ಥ ಹಫೀಜ್​ ಇಂದು ಗುರ್ಜನ್​ವಾಲಾಕ್ಕೆ ತೆರಳುತ್ತಿದ್ದ ವೇಳೆ ಲಾಹೋರ್​ನಲ್ಲಿ ಬಂಧನವಾಗಿದ್ದಾಗಿ ಪಾಕ್​ ಮಾಧ್ಯಮಗಳು ವರದಿ ಮಾಡಿವೆ.

ಈತ ಲಷ್ಕರ್​ ಇ ತಯ್ಬಾ ಉಗ್ರ ಸಂಘಟನೆಯ ಸಹ ಸಂಸ್ಥಾಪಕನೂ ಹೌದು. 2008ರಲ್ಲಿ ಮುಂಬೈನ್ ತಾಜ್​ ಹೊಟೆಲ್​, ಛತ್ರಪತಿ ಶಿವಾಜಿ ಟರ್ಮಿನಲ್​ ಸೇರಿ ಒಟ್ಟು ಆರು ಕಡೆ ಲಷ್ಕರ್​ ಇ ತಯ್ಬಾ ದಾಳಿ ನಡೆಸಿತ್ತು. ಸುಮಾರು 12 ಉಗ್ರರು ಈ ಭೀಕರ ಕೃತ್ಯ ಎಸಗಿದ್ದರು. ಸ್ಥಳೀಯರು, ವಿದೇಶಿಯರು, ಪರರಾಜ್ಯದವರೆಲ್ಲ ಸೇರಿ 150ಕ್ಕೂ ಹೆಚ್ಚು ಮಂದಿ ಮೃತಪಟ್ಟಿದ್ದರು. 300ಕ್ಕೂ ಹೆಚ್ಚು ಜನ ಗಾಯಗೊಂಡಿದ್ದರು. ಈ ದಾಳಿಯ ರೂವಾರಿ ಅಜ್ಮಲ್​ ಕಸಬ್​ನನ್ನು ಪೋಲಿಸರು ಅಂದು ಜೀವಂತವಾಗಿ ಸೆರೆ ಹಿಡಿದಿದ್ದರು. ನಂತರ 2012ರ ನವೆಂಬರ್​ನಲ್ಲಿ ಈತನನ್ನು ಪುಣೆಯ ಯರವಾಡ ಜೈಲಿನಲ್ಲಿ ಗಲ್ಲಿಗೇರಿಸಲಾಗಿದೆ.

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.