ಜಾಮೂನ್ ಎಂದಾಗ ಬಾಯಲ್ಲಿ ನೀರಿಳಿಯುವುದು ಸಹಜ, ಜಾಮೂನ್ ಗಳಲ್ಲಿ ಹಲವು ಪ್ರಕಾರಗಳಿವೆ ಈಗಾಗಲೇ ನೀವು ಗುಲಾಬ್ ಜಾಮೂನ್ ಸವಿದಿರಬಹುದು.

ಸ್ನೇಹಿತರಿಗೂ ತಯಾರಿಸಿ ನೀಡಿರಬಹುದು, ಅದರ ಜೊತೆಗೆ ಇನ್ನು ಮುಂದೆ ನೀವು ಬ್ರೆಡ್ ಜಾಮೂನ್ನನ್ನು ಮನೆಯಲ್ಲೆ ತಯಾರಿಸಿ ಸವಿಯಬಹುದು ಬನ್ನಿ ನಾವು ನಿಮಗೆ ಬ್ರೆಡ್ ಜಾಮೂನ್ ಮಾಡುವ ವಿಧಾನ ತೋರಿಸುತ್ತೇವೆ.

ಬೇಕಾಗುವ ಪದಾರ್ಥಗಳು…

• ಬ್ರೆಡ್ ಪೀಸ್ ಗಳು – 6-8
• ಮೈದಾ ಹಿಟ್ಟು – 4 ಚಮಚ
• ತುಪ್ಪ- 1 ಚಮಚ
• ಎಣ್ಣೆ – ಕರಿಯಲು ಅಗತ್ಯವಿದ್ದಷ್ಟು
• ಸಕ್ಕರೆ – 2 ಲೋಟ
• ಏಲಕ್ಕಿ ಪುಡಿ – ಚಿಟಿಕೆಯಷ್ಟು

ಮಾಡುವ ವಿಧಾನ…

• ಮೊದಲು ಬ್ರೆಡ್ ನ ಬಿಳಿಭಾಗವನ್ನು ಮಾತ್ರ
ಕತ್ತರಿಸಿಕೊಂಡು ಅದನ್ನು ನೀರಿನಲ್ಲಿ ಮುಳುಗಿಸಿ ನೀರು
ತೆಗೆದು ಮಿಕ್ಸಿಂಗ್ ಬೌಲ್ ಗೆ ಹಾಕಬೇಕು.

• ನಂತರ ಇದಕ್ಕೆ ಉಂಡೆಯ ಹದಕ್ಕೆ ಬರುವಷ್ಟು ಮೈದಾ
ಹಿಟ್ಟು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಬೇಕು.

• ನಂತರ ತುಪ್ಪ ಹಾಕಿ ಪುನಃ ಚೆನ್ನಾಗಿ ನಾದಿಕೊಂಡು
ಬೇಕಾದ ಆಕಾರಕ್ಕೆ ಜಾಮೂನ್ ಮಾಡಿ ಕಾದ ಎಣ್ಣೆಯಲ್ಲಿ
ಹೊಂಬಣ್ಣಕ್ಕೆ ಕರಿದುಕೊಳ್ಳಬೇಕು.

• ನಂತರ ಒಲೆಯ ಮೇಲೆ ಪಾತ್ರೆಯೊಂದನ್ನು ಇಟ್ಟು
ನೀರು, ಸಕ್ಕರೆ ಹಾಗೂ ಏಲಕ್ಕಿ ಪುಡಿ ಹಾಕಿ ಪಾಕ
ತಯಾರು ಮಾಡಿಕೊಳ್ಳಬೇಕು. ಪಾಕ ತಣ್ಣಗಾದ ಬಳಿಕ
ಕರಿದುಕೊಂಡ ಜಾಮೂನ್ ಗಳನ್ನು ಇದಕ್ಕೆ ಹಾಕಿ
ನೆನೆಯಲು ಬಿಟ್ಟರೆ ರುಚಿಕರವಾದ ಬ್ರೆಡ್ ಜಾಮೂನ್
ಸವಿಯಲು ಸಿದ್ಧ.

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.