ಕೂಸಮ್ಮ ಶಂಭು ಶೆಟ್ಟಿ ಆಸ್ಪತ್ರೆಗೆ ನಗರಾಭಿವೃದ್ಧಿ ಪ್ರಾಧಿಕಾರ ಅನುಮತಿಸಿದ್ದು ಎರಡು ಅಂತಸ್ತು; ಅಗೆದದ್ದು ಮೂರಿಗೆ!

448

ಉಡುಪಿ: ಕೂಸಮ್ಮ ಶಂಭು ಶೆಟ್ಟಿ ಹಾಜಿ ಅಬ್ದುಲ್ಲಾ ಆಸ್ಪತ್ರೆಗೆ 2 ಅಂತಸ್ತಿಗೆ ನಗರ ಪ್ರಾಧಿಕಾರ ಅನುಮತಿ ನೀಡಿತ್ತು.ಆದರೆ ಆಸ್ಪತ್ರೆ ಆಡಳಿತ ವರ್ಗ ಪ್ರಾಧಿಕಾರದ ಆದೇಶ ಗಾಳಿಗೆ ತೂರಿ ಮೂರು ಅಂತಸ್ತಿಗೆ ಅಗೆದು ಇದೀಗ ವಿವಾದ ಸೃಷ್ಟಿಸಿದ್ದಾರೆ. ಈ ಬಗ್ಗೆ ನೋಟಿಸ್ ನೀಡಿರುವ ಪ್ರಾಧಿಕಾರ ನಿಯಮ ಬಾಹಿರವಾಗಿ ಅಗೆದದ್ದನ್ನು ಮುಚ್ಚಲು ಆದೇಶಿಸಿ ನೋಟಿಸು ನೀಡಿದೆ.

ನಗರಾಭಿವೃದ್ಧಿ ಪ್ರಾಧಿಕಾರದ ನೋಟೀಸ್

ಈ ಬಗ್ಗೆ ಸರಕಾರಿ ಆಸ್ಪತ್ರೆ ಉಳಿಸಿ ಹೋರಾಟ ಸಮಿತಿಯ ಸಂಚಾಲಕರಾದ ಡಾ.ಪಿ.ವಿ ಭಂಡಾರಿ ಆಕ್ರೋಶ ವ್ಯಕ್ತಪಡಿಸಿದ್ದು, ಆಸ್ಪತ್ರೆಯ ನಿಯಮ ಉಲ್ಲಂಘನೆಯ ಬಗ್ಗೆ ನಗರಸಭೆ ಏನು ಕ್ರಮ ಕೈಗೊಂಡಿದೆ ? ಎಂದು ಪ್ರಶ್ನಿಸಿದ್ದಾರೆ.

ಬಂಡವಾಳಶಾಹಿಗಳು ಮನಸ್ಸಿಗೆ ಬಂದ ಹಾಗೆ ಮಾಡುತ್ತಾರೆ.ಇದೇ ಯಾವುದಾದರೂ ಬಡವನೊಬ್ಬ ತನ್ನ ಮನೆಗೆ ಆಚೆ ಈಚೆ ಒಂದು ಫೀಟ್ ತೆಗೆದರೆ ಮನೆ ಬೀಳಿಸುತ್ತಾರೆ. ಆಸ್ಪತ್ರೆಯ ನಿಯಮ ಉಲ್ಲಂಘನೆಯ ಬಗ್ಗೆ ಮಾಧ್ಯಮಗಳು ಕೂಡ ಸುಮ್ಮನೆ ಕುಳಿತಿದೆಯೆಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.ಉಸ್ತುವಾರಿ ಸಚಿವರು ಮತ್ತು ಉಡುಪಿಯ ಶಾಸಕರು ಏನು ಹೇಳುತ್ತಾರೆ ನೋಡಬೇಕು ಎಂದು ಡಾ.ಪಿ.ವಿ ಭಂಡಾರಿ ಹೇಳಿದ್ದಾರೆ.

ಕಾಂಗ್ರೆಸ್ ಸರಕಾರವಿರುವಾಗ ಸರಕಾರಿ ಆಸ್ಪತ್ರೆಯ ಜಾಗವನ್ನು ಲೀಝ್ ನಲ್ಲಿ ಬಿ.ಆರ್ ವೆಂಚರ್ಸ್ ಗೆ ನೀಡಲಾಗಿತ್ತು. ಈ ಬಗ್ಗೆ ವ್ಯಾಪಕ ಪ್ರತಿಭಟನೆ ಕೂಡ ನಡೆದಿತ್ತು. ಈಗಿನ ಉಡುಪಿಯ ಶಾಸಕರಾದ ರಘುಪತಿ ಭಟ್ ಕೂಡ ಪ್ರತಿಭಟನೆಯಲ್ಲಿ ಭಾಗವಹಿಸಿ ವಿರೋಧ ವ್ಯಕ್ತಪಡಿಸಿದ್ದರು. ಆದರೆ ಇದೀಗ ಅವರ ಮೌನ ಜನರಲ್ಲಿ ಅವರ ಕಾಳಜಿಯನ್ನು ಪ್ರಶ್ನಿಸುವಂತೆ ಮಾಡಿದೆ.

ಈ ಬಗ್ಗೆ ಉಡುಪಿ ಜಿಲ್ಲಾ ಸತ್ರ ನ್ಯಾಯಾಲಯದಲ್ಲಿ ವ್ಯಾಜ್ಯ ನಡೆಯುತ್ತಿದ್ದು ಅಬ್ದುಲ್ಲಾ ಹಾಜಿಯವರು ದಾನವಾಗಿ ನೀಡಿದ ಜಾಗವನ್ನು ನಿಯಮ ಉಲ್ಲಂಘಿಸಿ ಖಾಸಗಿ ಸಂಸ್ಥೆಗೆ ನೀಡಲಾಗಿದೆ ಎಂಬ ಆರೋಪವಿದೆ.

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.