ಲೇಖಕರು:ಡಾ.ಪಿ.ವಿ ಭಂಡಾರಿ (ಮನೋವೈದ್ಯರು ,ಉಡುಪಿ)

ರೋಗಿಗಳಿಗೆ ಕಡಿಮೆ ಬೆಲೆಯಲ್ಲಿ ಮಾತ್ರೆ ಸಿಗಬೇಕು ಎಂಬುದನ್ನು ನಾನು ಬಹಳ ವರ್ಷಗಳಿಂದಲೂ ಹೇಳುತ್ತಾ ಬಂದಿದ್ದೇನೆ .ಆದರೆ ಅದರ ಜೊತೆಗೆ ಆ ಮಾತ್ರೆಗಳ ಗುಣಮಟ್ಟದ ಬಗ್ಗೆ ಕೂಡ ಗಮನ ಕೊಡುವುದು ಅತಿ ಅಗತ್ಯ ..ಈಗ ನಾವು ಏನು ಈ ಜನರಿಕ್ ಮಳಿಗೆಗಳನ್ನು ನೋಡುತ್ತಿದ್ದೇವೆ ಇಲ್ಲಿ ನನ್ನ ರೋಗಿಗಳು ಅನುಭವಿಸುತ್ತಿರುವ ಕೆಲವು ಸಮಸ್ಯೆಗಳನ್ನು ಹೇಳ ಬಯಸುತ್ತೇನೆ.

೧)ಈಗ ಸಿಗುತ್ತಿರುವ ಜನರಿಕ್ ಮಾತ್ರೆಗಳನ್ನು ಕ್ವಾಲಿಟಿಯ ಬಗ್ಗೆ ಇನ್ನೂ ಸರ್ಕಾರದಿಂದ ಯಾವುದೇ ಸುತ್ತೋಲೆ ಬಂದಿಲ್ಲ .ಕೇರಳ ಸರ್ಕಾರ ಇತ್ತೀಚೆಗೆ ನಡೆಸಿದ ಒಂದು ಸಮೀಕ್ಷೆಯಲ್ಲಿ ಬ್ರ್ಯಾಂಡೆಡ್ ಮತ್ತು ಜನರಿಕ ಎರಡರಲ್ಲೂ ಮಾತ್ರೆಗಳ ಕ್ವಾಲಿಟಿ ಯಲ್ಲಿ ದೋಷಗಳು ಕಂಡು ಬಂದಿದ್ದವು . “ಪ್ರಧಾನ ಮಂತ್ರಿ ಭಾರತೀಯ ಜನ ಔಷಧಿ ಪರಿಯೋಜನಾ “ಎಂಬ ಒಂದು ಕಾರ್ಯಕ್ರಮದಡಿಯಲ್ಲಿ ತೊಂಬತ್ತ್ ಒಂಬತ್ತು ಕಂಪನಿಗಳು ಈ” ಜನರಿಕ”ಮಾತ್ರೆಗಳನ್ನು ಉತ್ಪಾದಿಸುವ ಒಂದು ಪರಾವನಿಗೆ ಪಡೆದಿರುತ್ತದೆ ಈ ಕಂಪೆನಿಗಳು ಮಾಡಿದಂತಹ ಕೆಲವು ಬ್ಯಾಚ್ಗಳನ್ನು ಈಗಾಗಲೇ ಮಾರ್ಕೆಟ್ ನಿಂದ ಹೊರ ತರಲಾಗಿದೆ .ಇದನ್ನು ಯಾಕೆ ಬರೆಯುತ್ತಿದ್ದೇನೆ ಎಂದರೆ ಹಲವಾರು ಬಾರಿ ಬ್ರ್ಯಾಂಡೆಡ್ ಮಾತ್ರೆಗಳಲ್ಲಿ ಕೂಡ ಇತರ ದೋಷಗಳನ್ನು ನೋಡಿದ್ದೇವೆ ಆದರೆ ಸರ್ಕಾರದ ಪರವಾನಿಗೆ ಪಡೆದ ಈ ಕಂಪೆನಿಗಳು ತುಂಬಾ ಕಡಿಮೆ ಲಾಭದಲ್ಲಿ ಈ ಮಾತ್ರೆಗಳನ್ನು ಉತ್ಪಾದಿಸುವುದರಿಂದ ಕ್ವಾಲಿಟಿಯ ಕಡೆಗೆ ಗಮನ ಹರಿಸದೇ ಹೋದರೆ ಜನರ ಆರೋಗ್ಯಕ್ಕೆ ಇದರಿಂದ ತೊಂದರೆ ಇಲ್ಲವೇ .ಕಳೆದ ಆರು ತಿಂಗಳಿನಿಂದ ನಾನು ಆಯ್ದ ಬಡ ರೋಗಿಗಳಿಗೆ ನಾನೇ ಹೇಳಿ ಜನರಿಕ್ ಮಾತ್ರೆಗಳನ್ನು ತೆಗೆದುಕೊಳ್ಳಲು ತಿಳಿಸುತ್ತಿದ್ದೇನೆ ..ಕಳೆದ ಆರು ತಿಂಗಳಲ್ಲಿ ಕನಿಷ್ಠ ಮೂರು ಬಾರಿ ಈ ಮಳಿಗೆಗೆ ನಾನೇ ಹೋಗಿ ಮಾತ್ರೆಗಳ ಬಗ್ಗೆ ವಿಚಾರಿಸಿಕೊಂಡು ಬಂದಿದ್ದೇನೆ ..ಹೆಚ್ಚಿನ ಸಂದರ್ಭದಲ್ಲಿ ಇಷ್ಟರವರೆಗೆ ಕ್ವಾಲಿಟಿಯ ಬಗ್ಗೆ ರೋಗಿಗಳಿಂದ ಯಾವುದೇ ತಕರಾರು ಇಲ್ಲ .

೨).ನಾನು ಗಮನಿಸಿರುವ ನ್ಯೂನತೆ ಎಂದರೆ ರೋಗಿಗಳಿಗೆ ಬೇಕಾದಷ್ಟು ಮಾತ್ರೆಗಳು ಇರುವುದಿಲ್ಲ .ನಾವು ನೂರು ಮಿಲಿ ಗ್ರಾಮ್ನ ಮಾತ್ರೆಗಳು ಬರೆದರೆ ಕೆಲವೊಮ್ಮೆ ಇವರಲ್ಲಿ ಇಪ್ಪತ್ತೈದು ಮಿಲಿಗ್ರಾಮ್ನ ಮಾತ್ರೆಗಳು ಇರುತ್ತದೆ ಅದನ್ನು ನಾಲ್ಕು ತೆಗೆದುಕೊಳ್ಳಿ ಎಂದು ಹೇಳುತ್ತಾರೆ.ನಾವು ಎರಡು ತಿಂಗಳು ಮೂರು ತಿಂಗಳು ಬರೆದರೆ ಇವರತ್ತರ ಅಷ್ಟಷ್ಟು ಸ್ಟಾಕ್ ಇವರ ಹತ್ತಿರ ಇರುವುದಿಲ್ಲ .ಇಛಿತ್ತ ಚಿತ್ತ ವಿಕಲತೆ ,ಫೀಡ್ಸ್ ಕಾಯಿಲೆ ,ಬೈ ಪೊಲಾರ್ ಕಾಯಿಲೆ ಇದರಲ್ಲಿ ರೋಗಿಯ ಸ್ಥಿತಿಯಲ್ಲಿ ಏನು ಏರುಪೇರುಗಳಿಲ್ಲದಿದ್ದರೆ ಎರಡು ಮೂರು ತಿಂಗಳು ಮಾತ್ರೆಗಳು ಬರೆಯುವುದು ವಾಡಿಕೆ.. ..ನಾವು ೨ ತಿಂಗಳು ಬರೆದು ಅವರಿಗೆ ಅದನ್ನು ತರಲು ಪುನಹ ಉಡುಪಿಗೆ ಬರಲು ಅಟೊ ಅಥವಾ ಬಸ ಚಾರ್ಜ ಎಷ್ಟು ಅಗಬಹುದು ಉಹಿಸಿ?ನಮ್ಮ ರೋಗಿಗಳ ಒಂದು ವಿಚಿತ್ರ ಸೈಕಾಲಜಿ ಅಂದರೆ ಕೊಂಡುಕೊಂಡ ಮಾತ್ರೆಗಳು ನಮಗೆ ತೊರಿಸಲೇ ಬೇಕು .ಅದಕ್ಕಾಗಿಯೇ ಅವರು ಮತ್ತೊಂದು ಸಲ ಆಸ್ಪತ್ರೆಗೆ ಬರುವುದು ಇದೇ.ಇದ್ದಕ್ಕೆ ಎಷ್ಟು ಖರ್ಚು.ಹಾಗೆ ಈಗ ಮಾಡುತ್ತಿರುವ ಈ ಮಳಿಗೆ ಪರಿಕಲ್ಪನೆ ಅಷ್ಟು ಸರಿ ಇಲ್ಲ.ಅದರ ಬದಲು ಕನಿಷ್ಠ ಮೂವತ್ತು ಶೇ ಜನರಿಕ ಮಾತ್ರೆಗಳನ್ನು ಪ್ರತಿಯೊಂದು ಮಳಿಗೆ ಇಡಬೇಕು ಅನ್ನುವುದನ್ನು ಜಾರಿ ತರಬೇಕು .ಪ್ರತಿಯೊಂದು ಡ್ರಗ್ ಶಾಪಿನಲ್ಲಿ ಜನರಿಕ್ ಮಾತ್ರೆಗಳು ಲಭ್ಯವಿದೆ ಮತ್ತು ಒಂದು ತಿಂಗಳಿಗೆ ಮಿನಿಮ ೩೦% ಮಾರಲೇ ಬೇಕು ಎಂಬ ರೂಲ್ ಬರಬೇಕು ..ಎಲ್ಲ ಖಾಸಗಿ ಆಸ್ಪತ್ರೆಗಳಲ್ಲೂ ಈ ಒಂದು ರೂಲ್ ಜಾರಿಗೆ ಬರಬೇಕು .ವೈದ್ಯರುಗಳು ಸಂಕೀರ್ಣಗಳಲ್ಲಿ ನಡೆಸುವ ಅಂಗಡಿಗಳಲ್ಲೂ ಇದು ಜಾರಿಗೆ ಬರಬೇಕು .ಆದರೆ ಇದು ಜಾರಿಗೆ ಬರುವಾಗ ಈ ಮಾತ್ರೆಗಳ ಕ್ವಾಲಿಟಿ ಬಗ್ಗೆ ಸರ್ಕಾರ ಜವಾಬ್ದಾರಿ ತೆಗೆದುಕೊಳ್ಳಬೇಕು ..ಬಡವರಿಗೆ ಕಡಿಮೆ ಬೆಲೆಯಲ್ಲಿ ಕಳಪೆ ಮಾತ್ರೆ ಎಂಬುದು ಆಗಬಾರದು .

೩)ಜನರಿಕ್ ಮಾತ್ರೆಗಳು ಅನ್ನುವಾಗ ಒಮ್ಮೊಮ್ಮೆ ಒಂದೊಂದು ಬ್ರ್ಯಾಂಡ್ನ್ನು ಜನ ಔಷಧಾಲಯ ಅಂಗಡಿಯವರು ಕೊಡುತ್ತಿದ್ದಾರೆ .ಮಾತ್ರೆಗಳ ಬಣ್ಣ ಬದಲಾದ ಕೂಡಲೇ ನಮ್ಮ ರೋಗಿಗಳು ಚಡಪಡಿಸುತ್ತಾರೆ ಮತ್ತು ಅದೇ ಮಾತ್ರೆಯೊ ಅಲ್ಲವೋ ಎಂದು ಫೋನ್ ಮಾಡಿ ಕೇಳಲು ಆರಂಭಿಸಿದ್ದಾರೆ .ವಿದೇಶಗಳಲ್ಲಿ ಜನರಿಕ್ ಮಾತ್ರೆಗಳ ಹೆಸರು ಇರುವುದಿಲ್ಲ .ಕೇವಲ ಕೇಮಿಕಲ ಹೆಸರು ಮಾತ್ರ ಇರುತ್ತದೆ ಆದರೆ ಇವತ್ತು ನಮ್ಮ ದೇಶದಲ್ಲಿ ಜನರಿಕ್ ಗಳಿಗೂ ಕೂಡ ಆ ಕಂಪೆನಿಗಳು ಹೆಸರು ಇಟ್ಟಿರುತ್ತಾರೆ ಇದರಿಂದಾಗಿ ಬೇರೆ ಬೇರೆ ಕಂಪೆನಿಯ ಮಾತ್ರೆಗಳು ಪ್ರತಿ ಬಾರಿ ಜನ ಔಷಧಿ ಮಳಿಗೆಗೆ ಬರುತ್ತಿದೆ ..ಕಂಪೆನಿ ಚೇಂಜ್ ಆಗುತ್ತದೆ ಕಲರ್ ಚೇಂಜ್ ಆಗುತ್ತದೆ ಕ್ವಾಲಿಟಿ ಕೂಡ ಚೇಂಜ್ ಆಗಬಹುದು .
೪)ವಿದೇಶಗಳಲ್ಲಿ ಜನರಿಕ್ ಯೆಂದರೆ ಎರಡೆರಡು ಬೇರೆ ಬೇರೆ ಬಗೆಯ ಮಾತ್ರೆಗಳ combination ಇರುವುದಿಲ್ಲ ಆದರೆ ಈಗ ನಮಗೆ ಜನ ಔಷಧಿಯಲ್ಲಿ ಸಿಗುತ್ತಿರುವ ಮಾತ್ರೆಗಳು ಕೆಲವೊಮ್ಮೆ branded combination ನ ಹಾಗೆ ಲಭ್ಯವಾಗಿದೆ ಇದು ಎಷ್ಟರಮಟ್ಟಿಗೆ ಔಚಿತ್ಯಪೂರ್ಣ ನನಗೆ ಅರ್ಥ ಅಗುತ್ತಿಲ್ಲ.

೫)ಒಳ್ಳೆಯ ಹೆಸರು ಮಾಡಿರುವ ಎಲ್ಲಾ ರೀತಿಯ ಕ್ವಾಲಿಟಿ ಕಂಟ್ರೋಲ್ ಅನ್ನು ಮಾಡುತ್ತಿರುವ ಮಾತ್ರೆ ಕಂಪನಿಗಳು ತಯಾರು ಮಾಡುವ ಮಾತ್ರೆಗೆ ಬೆಲೆ ಜಾಸ್ತಿ .ಹಾಗಿದ್ದರೆ ಈ ಕಂಪೆನಿಗಳು ಮತ್ತು ಅವರ ವೈದ್ಯಕೀಯ ಪ್ರತಿನಿಧಿಗಳು ಮನೆಗೆ ಹೋಗಬೇಕೆ .ಈ ಪ್ರಶ್ನೆ ಬಂದದ್ದು ಯಾವಾಗೆಂದರೆ ಬ್ಲಾಕ್ ಲೇಬೆಲ್ ಕುಡಿಯುತ್ತಿದ್ದ ರೋಗಿಯೊಬ್ಬ ಮದ್ಯವ್ಯಸನ ಚಿಕಿತ್ಸೆಗೆ ಬಂದಾಗ ನನಗೆ ದರ್ಪದಿಂದ ಹೇಳಿದ ಜನರಿಕ್ ಮಾತ್ರೆಗಳನ್ನೇ ಬರೆಯಿರಿ.ಅವನು ಹೇಳಿದ ಹಾಗೆ ಬರೆದೆ.ಎಲ್ಲದಕ್ಕಿಂತ ನೀವೆಲ್ಲ ಫೇಸ್ಬುಕ್ಕಲ್ಲಿ ಗಮನಿಸಿರಬಹುದು

ಹೆಚ್ಚಿನವರು ನನ್ನ ಅಜ್ಜನ ಮಾತ್ರೆ ಕಡಿಮೆ ಬೆಲೆಗೆ ಜನ ಔಷಧಿ ಕೇಂದ್ರದಲ್ಲಿ ಸಿಕ್ಕಿತು ಅಂತ ಫೇಸ್ಬುಕ್ಕಲ್ಲಿ ಹಾಕುತ್ತಾರೆ .ಯಾರು ಕೂಡ ತಮಗೆ ಕಾಯಿಲೆ ಬಂದಾಗ ತೆಗೆದುಕೊಳ್ಳಲು ಹೋಗುವುದಿಲ್ಲ ನೋಡಿ ಬೇಕಿದ್ದರೆ ಯಾರು ತಮ್ಮ ಆರೋಗ್ಯದ ಮೇಲೆ ರಿಸ್ಕ್ ತೆಗೆದುಕೊಳ್ಳಲು ಹೋಗುವುದಿಲ್ಲ .ಇಷ್ಟೆಲ್ಲಾ ಬರೆಯಲು ಕಾರಣವೆಂದರೆ ನನಗೆ ನಿಜವಾಗಲೂ ಈ ಮಾತ್ರೆಗಳ ಖರ್ಚು ಕಡಿಮೆಯಾಗಬೇಕು ಆದರೆ ಈ ಬಗ್ಗೆ ಸರಿಯಾದ ರೀತಿಯಲ್ಲಿ ಚರ್ಚೆ ನಡೆದು ರೋಗಿಗಳಿಗೆ ಉತ್ತಮ ಕ್ವಾಲಿಟಿಯ ಮಾತ್ರೆಗಳು ..ಹಾಗೆಯೇ ಹಣವ೦ತರಿಗೆ ಅವರಿಗೆ ಬೇಕಾದ ಹೆಚ್ಚಿನ ಬೆಲೆಯ ಮಾತ್ರೆಗಳು ಸಿಗುವಂತಾಗಬೇಕು ಹಾಗೆಯೇ ವೈದ್ಯಕೀಯ ವೃತ್ತಿಯಲ್ಲಿ ಕೆಲವು ಕಪ್ಪು ಕುರಿಗಳು ಮಾಡುತ್ತಿರುವ ಅನಾಚಾರಗಳು ಅಂದರೆ ಕಂಪೆನಿಗಳೊಂದಿಗೆ ಕೂಡಿಕೊಂಡು ಹೆಚ್ಚು ಬೆಲೆಯ ಮಾತ್ರೆಗಳನ್ನು ಬರೆಯುವುದು.

ವೈದ್ಯರುಗಳು ತಮ್ಮದೇ ಕಂಪನಿಗಳನ್ನು ನಡೆಸುವುದು.ಆ ಮಾತ್ರೆಗಳನ್ನು ತಮ್ಮ ಮೆಡಿಕಲ್ ನಲ್ಲಿ ಮಾತ್ರ ಸಿಗುವಂತೆ ಮಾಡುವುದು ಇಂತಹ ಅನಾಚಾರಗಳಿಗೆ ನನ್ನ ವಿರೋಧವಿದೆ.ಇದಕ್ಕೆ ಕಡಿವಾಣ ಹಾಕುವುದು ಭಾರತೀಯ ವೈದ್ಯಕೀಯ ಸಂಘ, ಭಾರತೀಯ ವೈದ್ಯಕೀಯ ಕೌನ್ಸಿಲ್ ಮತ್ತು ಸರ್ಕಾರದ ಕೆಲಸ .ಈ ಬಗ್ಗೆ ಕೂಡ ಗಮನ ನೀಡಲಿ ಮೋದಿಯನ್ನು ಹೋಗುವುದೇ ಇಲ್ಲ ಎಂದು ಹೇಳುವ ನನ್ನ ಮಿತ್ರರಿಗೆ ದಯವಿಟ್ಟು ಇದನ್ನು ಓದಿ.ಜನೌಷಧಿ ಮಳಿಗೆ ಪ್ರಾರಂಭ ಮಾಡಿರುವುದು ಮೋದಿ ಸರ್ಕಾರ ಮತ್ತು ಕರ್ನಾಟಕದ ಸಿದ್ದರಾಮಯ್ಯ ಸರ್ಕಾರ ಹಾಗೂ ಛತ್ತೀಸ್ ಗಡದ ಸರ್ಕಾರ ಇವರನ್ನು ನಾನು ಪ್ರಶಂಸಿಸುತ್ತೇನೆ.ಆದರೆ ಇದರಲ್ಲಿರುವ ನ್ಯೂನತೆಗಳನ್ನು ಕೂಡ ಬರೆದಿದ್ದೇನೆ ..ಏನೆಲ್ಲಾ ಬದಲಾಯಿಸಬಹುದು ಅನ್ನುವ ವಿಷಯ ಕೂಡ ಬರೆದಿದ್ದೇನೆ.

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.