ಗುಜರಾತ್ : ಮಹಾತ್ಮ ಗಾಂಧಿಜೀ ಆತ್ಮಹತ್ಯೆ ಮಾಡಿಕೊಂಡಿದ್ದು ಹೇಗೆ? 9ನೇ ತರಗತಿಯ ಪ್ರಶ್ನೆ ಪತ್ರಿಕೆಯಲ್ಲಿ ಹೀಗೊಂದು ಪ್ರಶ್ನೆ!

127

ಅಹಮದಾಬಾದ್​: ಮಹಾತ್ಮ ಗಾಂಧೀಜಿ ಆತ್ಮಹತ್ಯೆ ಮಾಡಿಕೊಂಡಿದ್ದು ಹೇಗೆ? ಗುಜರಾತ್​ನ ಗಾಂಧಿನಗರ ಮೂಲದ ಸುಫಾಲಮ್​ ಶಾಲಾ ವಿಕಾಸ್​ ಸಂಕುಲ್​ ಎಂಬ ಸಂಸ್ಥೆಯ ಅಧೀನದಲ್ಲಿನ ಶಾಲೆಯಲ್ಲಿ 9ನೇ ತರಗತಿಯ ಮಕ್ಕಳ ಪ್ರಶ್ನೆ ಪತ್ರಿಕೆಯಲ್ಲಿ ಈ ಪ್ರಶ್ನೆ ಕೇಳಲಾಗಿದೆ. ಈ ಬಗ್ಗೆ ತನಿಖೆಗೆ ಆದೇಶಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಹಾಗೆಯೇ ಇನ್ನೊಂದು ಪ್ರಶ್ನೆಯೂ ಕೂಡ ಆಕ್ಷೇಪಕ್ಕೆ ಗುರಿಯಾಗಿದೆ. 12ನೇ ತರಗತಿ ವಿದ್ಯಾರ್ಥಿಗಳಿಗೆ ನಿಮ್ಮ ಪ್ರದೇಶದಲ್ಲಿ ಮದ್ಯ ಮಾರಾಟ ಹೆಚ್ಚಳ ಮತ್ತು ಅಕ್ರಮ ಮಾರಾಟಗಾರರು ಸೃಷ್ಟಿಸುತ್ತಿರುವ ಅಹಿತಕರ ಘಟನೆ ತಡೆಗಟ್ಟಲು ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಜಿಲ್ಲಾ ಪೊಲೀಸ್​​ ಅಧಿಕಾರಿಗೆ ಪತ್ರ ಬರೆಯಿರಿ ಎನ್ನುವ ಪ್ರಶ್ನೆ ಕೇಳಲಾಗಿದೆ.

ಇಂತಹ ಪ್ರಶ್ನೆಗಳು ಆಕ್ಷೇಪಾರ್ಹ. ಈ ಬಗ್ಗೆ ತನಿಖೆ ಪ್ರಾರಂಭಿಸಿದ್ದೇವೆ. ವರದಿ ಬಂದ ನಂತರ ಕ್ರಮ ಕೈಗೊಳ್ಳಲಾಗುವುದು ಎಂದು ಗಾಂಧಿನಗರ ಜಿಲ್ಲಾ ಶಿಕ್ಷಣ ಅಧಿಕಾರಿಗಳು ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.