ಬಿಜೆಪಿಗೆ ಸದ್ಯ ಹೋಗಲ್ಲ, ಆದರೆ ಮುಂದೆ ಏನು ಬೇಕಾದ್ರು ಆಗಬಹುದು: ಜಿಟಿ ದೇವೇಗೌಡ

105

ಬೆಂಗಳೂರು: ಮಾಜಿ ಸಚಿವ ಜಿಟಿ ದೇವೇಗೌಡ ಬಿಜೆಪಿ ಸೇರಲಿದ್ದಾರೆ. ಮಗನ ಭವಿಷ್ಯಕ್ಕಾಗಿ ಅವರು ಜೆಡಿಎಸ್​ ತೊರೆಯುವ ಸಾಧ್ಯತೆಗಳು ಅಧಿಕವಿದೆ ಎಂಬ ಮಾತು ಕೇಳಿಬರುತ್ತಿತ್ತು.ಇದೇ ಹಿನ್ನೆಲೆಯಲ್ಲಿಯೇ ಅವರು ಇತ್ತೀಚಿನ ದಿನಗಳಲ್ಲಿ ಬಿಜೆಪಿ ನಾಯಕರೊಟ್ಟಿಗಿನ ಅವರ ಒಡನಾಟ ಹೆಚ್ಚಿದೆ ಎಂದು ಹೇಳಲಾಗುತ್ತಿತ್ತು. ಈ ಬಗ್ಗೆ ಖುದ್ದು ಸ್ಪಷ್ಟನೆ ನೀಡಿರುವ ಅವರು “ನಾನು ಬಿಜೆಪಿಗೆ ಹೋಗುವುದಿಲ್ಲ. ಆದರೆ ರಾಜಕೀಯದಲ್ಲಿ ಏನು ಬೇಕಾದರೂ ಆಗಬಹುದು ಎಂದು ಹೇಳಿದ್ದಾರೆ.

ಇಂದು ಮಾಧ್ಯಮದ ಜೊತೆ ಮಾತನಾಡಿದ ಅವರು, “ಚಾಮುಂಡೇಶ್ವರಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಗ್ರಾಮೀಣ ರಸ್ತೆಗಳ ಕಾಮಗಾರಿ ತಡೆ ಆಗಿದೆ. ಟೆಂಡರ್ ಆಗಿದ್ದರೂ ಕಾಮಗಾರಿ ನಡೆಯುತ್ತಿಲ್ಲ. ಹಾಗಾಗಿ ಸಿಎಂ ಭೇಟಿ ಮಾಡಿದ್ದೇನೆ ಅಷ್ಟೇ.ಹುಣಸೂರು ಕ್ಷೇತ್ರದಿಂದ ಆಗಲಿ ಮತ್ತಿನ್ಯಾವ ಕ್ಷೇತ್ರದಿಂದಲೂ ನನ್ನ ಮಗ ಚುನಾವಣೆಗೆ ಇಳಿಯುತ್ತಿಲ್ಲ.ನಾನು ಬಿಜೆಪಿಗೂ ಕೂಡ ಹೋಗುತ್ತಿಲ್ಲ. ನಮ್ಮ ಪಕ್ಷದಿಂದ ದೂರ ಉಳಿದಿದ್ದೇನೆ ಅಷ್ಟೇ. ಪಕ್ಷದಿಂದ ಸ್ವಲ್ಪ ನೋವಾಗಿದೆ.ಹಾಗೆಂದ ಮಾತ್ರಕ್ಕೆ ನನಗೆ ಮತಹಾಕಿ ಗೆಲ್ಲಿಸಿದ ಕ್ಷೇತ್ರವನ್ನು ಬಿಡಲಾರೆ. ಕ್ಷೇತ್ರದ ಅಭಿವೃದ್ಧಿ ವಿಚಾರಕ್ಕಾಗಿ ಮಾತ್ರ ನಾನು ಬಿಜೆಪಿ ನಾಯಕರನ್ನು ಭೇಟಿಯಾಗುತ್ತಿದ್ದೇನೆ” ಎಂದು ಸ್ಪಷ್ಟಪಡಿಸಿದ್ದಾರೆ.

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.