ನವದೆಹಲಿ: ಮೋದಿ ನೇತೃತ್ವದಲ್ಲಿ ಲೋಕಸಭಾ ಚುನಾವಣೆ ಗೆದ್ದಾಗಿದೆ. ಇನ್ನು ಅಧಿಕೃತವಾಗಿ ನಾಯಕನನ್ನಾಗಿ ಆಯ್ಕೆ ಮಾಡಬೇಕಾಗಿದೆ. ಈ ಕಾರಣಕ್ಕೆ ನಾಳೆ ಸಂಸದರೆಲ್ಲರು ದೆಹಲಿಯಲ್ಲಿ ಸಭೆ ಸೇರಲಿದ್ದಾರೆ.

ನಾಳೆ ಮೇ.25 ರಂದು ಪಾರ್ಲಿಮೆಂಟ್ ಸಭಾಂಗಣದಲ್ಲಿ ಸಂಸದರು ಸಭೆ ಸೇರಲಿದ್ದಾರೆ. ಈಗಾಗಲೇ ಮೋದಿಯನ್ನು ಪ್ರಧಾನಿ ಅಭ್ಯರ್ಥಿಯಾಗಿ ಘೋಷಿಸಲಾಗಿದ್ದು ನಾಳೆ ಔಪಚಾರಿಕ ಸಭೆ ನಡೆಯಲಿದೆ.

ಬಿಜೆಪಿ 302 ಮತ್ತು ಎನ್.ಡಿ.ಎ ಮೈತ್ರಿಕೂಟ 352 ಸ್ಥಾನಗಳನ್ನು ಜಯಿಸಿ ಭದ್ರ ಸರಕಾರ ಕಟ್ಟಲು ಮುನ್ನಡಿಯಿಟ್ಟಿದೆ.

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.