ಮೀನು ಯಾರಿಗೆ ಇಷ್ಟ ಇಲ್ಲ ಹೇಳಿ ನಮ್ಮ ಉಡುಪಿ ಮಂಗಳೂರು ನಲ್ಲಂತೂ ಮೀನು ಇಲ್ಲದಿದ್ದರೆ ಊಟನೇ ಸೇರಲ್ಲ ಅನ್ನೋ ಜನರೇ ಹೆಚ್ಚು.ಹಾಗಾಗಿ ಮೀನು ಪ್ರಿಯರಿಗೆ ಇಲ್ಲಿದೆ ನೋಡಿ ರುಚಿಕರವಾದ ಬಂಗುಡೆ ತವಾ ಫ್ರೈ ಸರಳ ರೆಸಿಪಿ.

*ಮೊದಲನೆಯದಾಗಿ ಮೀನಿನ ಮಸಾಲೆ ತಯಾರಿಸುಸುವ ವಿಧಾನ*

ರುಬ್ಬಿಕೊಂಡ ಕೆಂಪು ಮೆಣಸಿನ ಪೇಸ್ಟ್ 2 ಚಮಚ
ಅರಸಿನ 1/2 ಚಮಚ
ಹುಣಸೆ ಪೇಸ್ಟ್ 2 ಚಮಚ
ಉಪ್ಪು 1 ಚಮಚ
1 ಚಮಚ ಶುಂಠಿ-ಬೆಳ್ಳುಳ್ಳಿ ಪೇಸ್ಟ್
1/2 ಚಮಚ ಕೊತ್ತಂಬರಿ ಪುಡಿ

ಈ ಮಸಾಲೆಯನ್ನು ಬಂಗುಡೆಗೆ ಚೆನ್ನಾಗಿ ಮಿಕ್ಸ್ ಮಾಡಿ 2 ಗಂಟೆ ಇಡಬೇಕು.

ನಂತರ ಮದ್ಯ ಉರಿಯಲ್ಲಿ ತವಾ ಬಿಸಿಮಾಡಿ ಅದಕ್ಕೆ 2-3 ಚಮಚ ಎಣ್ಣೆ ಹಾಕಿ ಉರಿ ಕಡಿಮೆ ಮಾಡಿ ಮೀನು ಮೆಲ್ಲಗೆ ಇಟ್ಟು ನಿದಾನ ಫ್ರೈ ಮಾಡಬೇಕು.ನಂತರ ಮಗುಚಿ ಹಾಕಿ ಮತ್ತೊಂದು ಬದಿ ನಿದಾನ ಫ್ರೈ ಮಾಡಿದರೆ ಬಂಗುಡೆ ಫ್ರೈ ರೆಡಿ. ಮತ್ತೆ ಬಿಸಿ ಬಿಸಿ ಸವಿಯಲು ಕೊಡಿ.

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.