ಟಯರ್ ಅಂಗಡಿಗೆ ಬೆಂಕಿ; 5-6 ಲಕ್ಷ ನಷ್ಟ

118

ಮಂಗಳೂರು: ನಿನ್ನೆ(16 ಅಕ್ಟೋಬರ್) ಸಮಯ ರಾತ್ರಿ 10 ಗಂಟೆ. ಮಂಗಳೂರಿನ ಬಂದರ್ ನಲ್ಲಿರುವ ಹಿದಾಯತ್ ಸೆಂಟರ್ ನಲ್ಲಿ ನನ್ನ ವೈಯಕ್ತಿಕ ಕೆಲಸದಲ್ಲಿ ತಲ್ಲೀನನಾಗಿದ್ದೆ. ಲೇಟಾಯಿತೆಂದು ಮನೆಗೆ ಹೋಗಲು ಅಣಿಯಾಗುತ್ತಿದ್ದಾಗ ಕಚೇರಿಯ ಹೊರಗೆ ಬೊಬ್ಬೆ ಕೇಳಿತು.

ಸ್ಥಳೀಯರೋರ್ವರು ಹಿದಾಯತ್ ಸೆಂಟರ್ ನ ಪಕ್ಕದಲ್ಲಿರುವ M.M. ಕಾಂಪ್ಲೆಕ್ಸ್ ( ಶಾಂತಿ ಪ್ರಕಾಶನ ಇರುವ ಬಿಲ್ಡಿಂಗ್) ನಲ್ಲಿ ಹಿಂದೂ ಸಹೋದರರೋರ್ವರು ನಡೆಸುತ್ತಿರುವ ನವಜೀವನ ಟ್ರೇಡರ್ಸ್ ಟಯರ್ ಅಂಗಡಿಯಿಂದ ಹೊಗೆ ಬರುವುದನ್ನು ಗಮನಿಸಿ, ಬೊಬ್ಬೆ ಹಾಕಿದರು.

ಬೊಬ್ಬೆ ಗಮನಿಸಿ, ನಾನೂ ಹೊರಗೆ ಬಂದು ನೋಡಿದೆ. ಗಡಿಬಿಡಿಯಲ್ಲಿ ಅಗ್ನಿಶಾಮಕ ಸೇವೆ ಯ ತುರ್ತು ಸಂಖ್ಯೆ ಗೆ ಕರೆ ಮಾಡಿದಾಗ ಕನೆಕ್ಟ್ ಆಗ್ತಾ ಇರ್ಲಿಲ್ಲ. ಕೂಡಲೇ Google ನ ಸಹಾಯ ಪಡೆದು ಪಾಂಡೇಶ್ವರ ಅಗ್ನಿಶಾಮಕ ಠಾಣೆಗೆ ಕರೆ ಮಾಡಿದ, 10 ನಿಮಿಷದಲ್ಲಿ ತಲುಪಿದರು. ಅಲ್ಲದೇ, ಅದಾಗಲೇ ಮೆಸ್ಕಾಂನವರಿಗೂ ಸುದ್ದಿ ತಿಳಿಸಿ ಕರೆಂಟ್ ಆಫ್ ಮಾಡಲು ಮನವಿ ಮಾಡಿದೆ.

ಸ್ಥಳೀಯ ಯುವಕರು ಸುದ್ದಿ ತಿಳಿದು ಕಬ್ಬಿಣದ ಸಲಾಕೆಗಳಿಂದ ಬೀಗ ಒಡೆದು, ಅಂಗಡಿ ತೆರೆದು ಬೆಂಕಿ ಹೆಚ್ಚಾಗದಂತೆ ನೋಡಿಕೊಂಡರು. 10-12 ಫ್ಲ್ಯಾಟ್ ಇದ್ದ ಈ ಕಾಂಪ್ಲೆಕ್ಸ್ ನಲ್ಲಿ ಒಂದು ವೇಳೆ ತಡರಾತ್ರಿ ಈ ಘಟನೆ ನಡೆದಿದ್ದರೆ ಭಾರೀ ಸಾವು ನೋವು ಸಂಭವಿಸಬಹುದಿತ್ತು.‌

ಸ್ಥಳೀಯ ಯುವಕರ ಕಾರ್ಯಚರಣೆಯಿಂದ ಭಾರೀ ದೊಡ್ಡ ಅನಾಹುತ ತಪ್ಪಿತು. ಇನ್ನರ್ಧ ಗಂಟೆ ಫಯರ್ ಸರ್ವಿಸ್ ಬರಲು ತಡವಾಗಿದ್ದರೆ ದೊಡ್ಡ ಅನಾಹುತ ಸಂಭವಿಸುತ್ತಿತ್ತು…ಶಾಂತಿ ಪ್ರಕಾಶನ ಪುಸ್ತಕಗಳು ಹೊತ್ತಿ ಉರಿಯುತ್ತಿದ್ದವು.
ಶಾರ್ಟ್ ಸರ್ಕ್ಯೂಟ್ ನಿಂದಾಗಿ ಈ ಘಟನೆ ನಡೆದಿದ್ದು, ಅಂದಾಜು ಸುಮಾರು 5-6 ಲಕ್ಷ ರೂಪಾಯಿ ಮೌಲ್ಯದ ಸೊತ್ತು ನಷ್ಟ ಸಂಭವಿಸಿದೆ.
ಅಂಗಡಿಯ ಬೋರ್ಡ್ ನಲ್ಲಿದ್ದ ಮಾಲಕನ ನಂಬರಿಗೆ ಸ್ಥಳೀಯರು ಕರೆ ಮಾಡಿ, ಮಾಹಿತಿ ನೀಡಿದರು.
ಘಟನಾ ಸ್ಥಳಕ್ಕೆ ಬಂದಿದ್ದ ಮಾಲಕನ ಪತ್ನಿ ಅಂಗಡಿಯನ್ನು ಕಂಡು ಕಣ್ಣೀರಿಟ್ಟಾಗ, ಸ್ಥಳೀಯರು ಸಾಂತ್ವನದ ಮಾತು ಹೇಳಿ, ಸಮಾಧಾನ ಪಡಿಸಿದರು.
ಸರಿಯಾದ ವ್ಯಾಪಾರ ಇಲ್ಲದೇ ಪರಿತಪಿಸುತ್ತಿದ್ದ ಮಾಲಕನಿಗೆ ಈ ಘಟನೆ ಗಾಯದ ಮೇಲೆ ಬರೆ ಎಳೆದಂತಾಗಿದೆ.

ಬಳಿಕ ಸೇಫ್ ಆಗಿದ್ದ ಟಯರ್ ಗಳನ್ನು ಸ್ಥಳೀಯ ಟಯರ್ ವ್ಯಾಪಾರಸ್ಥರೋರ್ವರ ಗೋಡಾನ್ ಗೆ ಸ್ಥಳಾಂತರಿಸಲಾಯಿತು.

ಯಾವುದೇ ಪ್ರತಿಫಲಾಪೇಕ್ಷೆ ಇಲ್ಲದೆ ಸೇವೆ ಮಾಡಿದ ಬಂದರ್ ನ ಎಲ್ಲಾ ಯುವಕರ ಸೇವೆಯನ್ನು ಪ್ರಶಂಸಿಸಲಾಗಿದೆ.
ಸ್ಥಳೀಯ ಯುವಕರಾದ ಆಸೀಫ್ ಮತ್ತವರ ಸ್ನೇಹಿತರು, HRS ನ ಅಮೀರ್ ಕುದ್ರೋಳಿ, ಮುನವ್ವರ್ ಕಂದಕ್, ಖಾಸಿಮ್, ಶೌಕತ್ ಅಲಿ, ತೌಫೀಕ್ ಕುದ್ರೋಳಿ, ಮಕ್ಬೂಲ್ ಕುದ್ರೋಳಿ ಮತ್ತಿತರ ಯುವಕರು ಕಾರ್ಯಚರಣೆಯಲ್ಲಿ ಪಾಲ್ಗೊಂಡಿದ್ದರು.

ವರದಿ: ಇರ್ಷಾದ್ ವೇಣೂರು

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.