ಹೊಸದಿಲ್ಲಿ: ಬಾಲಿವುಡ್‌ನ ಹಿರಿಯ ನಟಿ ವಿದ್ಯಾ ಸಿನ್ಹಾ ಮುಂಬೈಯ ಆಸ್ಪತ್ರೆಯಲ್ಲಿ ಗುರುವಾರ ನಿಧನರಾಗಿದ್ದಾರೆ.

ಬಾಲಿವುಡ್ ನ ಹಿರಿಯ ನಟಿಯಾದ ವಿದ್ಯಾ ಸಿನ್ಹಾ ರವರು ಹಲವಾರು ಹಿಂದಿ ಸಿನಿಮಾಗಳಲ್ಲಿ ನಟಿಸಿ ಜನರ ಮನ ಗೆದ್ದಿದ್ದರು.ಅವರು 18 ವರ್ಷಕ್ಕೆ ಮಾಡೆಲ್ ಆಗಿ ತಮ್ಮ ವೃತ್ತಿ ಜೀವನ ಆರಂಭಿಸಿದ್ದರು. 1974ರ ‘ರಜನಿಗಂಧ’ ಚಿತ್ರದಿಂದ ವಿದ್ಯಾ ಸಿನ್ಹಾ ಜನಪ್ರಿಯರಾಗಿದ್ದರು. ಈ ಚಿತ್ರದಲ್ಲಿ ಅವರು ಅಮೋಲ್ ಪಾಲೇಕರ್ ಜೊತೆ ನಟಿಸಿದ್ದರು.

ವಿದ್ಯಾ ಸಿನ್ಹಾ ರವರಿಗೆ 71 ವರ್ಷ ವಯಸ್ಸಾಗಿತ್ತು.ಇವರು ಶ್ವಾಸಕೋಶ ಹಾಗೂ ಹೃದಯ ಸಂಬಂಧಿ ರೋಗದ ಸಮಸ್ಯೆಯಿಂದ ಬಳಲುತ್ತಿದ್ದರು. ಉಸಿರಾಟದ ತೊಂದರೆ ಹಿನ್ನೆಲೆಯಲ್ಲಿ ಅವರನ್ನು ರವಿವಾರ ಮುಂಬೈಯ ಆಸ್ಪತ್ರೆಯಲ್ಲಿ ದಾಖಲಿಸಲಾಗಿತ್ತು.ಆದರೆ ಗುರುವಾರ ಅಪರಾಹ್ನ 1 ಗಂಟೆಗೆ ನಿಧನರಾದರು ಎಂದು ಅವರ ಕುಟುಂಬದ ಸದಸ್ಯರು ತಿಳಿಸಿದ್ದಾರೆ.

‘ಚೋಚಿ ಸಿ ಬಾತ್’, ‘ಪತಿ ಪತ್ನಿ ವೋ’ ಮೊದಲಾದ ಚಿತ್ರಗಳ ಮೂಲಕ ಅವರು ಸಿನೆಮಾ ಪ್ರಿಯರ ಮನ ಗೆದ್ದಿದ್ದರು.

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.