ಮಂಗಳೂರು : ನಗರದ ಪ್ರಮುಖ ಶಾಪಿಂಗ್ ಮಾಲ್ ನಲ್ಲಿ ವ್ಯಕ್ತಿಯೊಬ್ಬರಿಗೆ ಹಲ್ಲೆ‌ ನಡೆಸುವ ವಿಡಿಯೋ ವೈರಲ್ ಆಗುತ್ತಿದ್ದಂತೆ ಒತ್ತಡದ ಮೂಲಕ ಸ್ಯಯಂ ಕೇಸು ದಾಖಲಿಸಿ ಪೋಲಿಸ್ ಇಲಾಖೆ ಹೊಡೆದಾಟ ನಡೆಸಿದ ವಿದ್ಯಾರ್ಥಿಗಳನ್ನು ಬಂಧಿಸಿದೆ, ಸಾರ್ವಜನಿಕ ಸ್ಥಳಗಳಲ್ಲಿ ಶಾಂತಿ ಭಂಗ ಉಂಟು ಮಾಡುವವರನ್ನು ಬಂಧಿಸುವುದು ಪೋಲಿಸ್ ಇಲಾಖೆ ಯ ಕರ್ತವ್ಯ ಆದರೆ, ಈ ಘಟನೆಗೆ ಕಾರಣವಾದ ಸಂವಿಧಾನ ವಿರೋಧಿ ಹೇಳಿಕೆ ಕೂಡಾ ಖಂಡನೀಯವಾಗಿದೆ, ಸಮಾಜದಲ್ಲಿ ವೈರತ್ವ ಉಂಟುಮಾಡುವ ಎಲ್ಲಾ ವ್ಯಕ್ತಿತ್ವಗಳ ಬಗ್ಗೆ ಪೋಲಿಸ್ ಇಲಾಖೆ ಸಮಾನವಾಗಿ ಶಿಸ್ತು ಕ್ರಮ ತೆಗೆದುಕೊಳ್ಳಬೇಕಾಗುತ್ತದೆ, ಒತ್ತಡಕ್ಕೆ ಮಣಿದು ಏಕಮುಖ ಬಂಧನ ನಡೆದರೆ ಘಟನೆಯ ವಾಸ್ತವಾಂಶ ಮರೆಯಾಗುತ್ತದೆ. ಮಂಗಳೂರಿನ ಹಲವು ಕಡೆ ಇಂತಹ ಘಟನೆ ಇತ್ತೀಚಿನ ದಿನಗಳಲ್ಲಿ ಹೆಚ್ಚಾಗಿ ನಡೆಯುತ್ತಿದ್ದು ಪೋಲಿಸ್ ಇಲಾಖೆ ಸಮಾನ ನೀತಿಯನ್ನು ಪಾಲಿಸಿ ಮಂಗಳೂರಿನ ಹಿರಿಮೆ ಯನ್ನು ಕಾಪಾಡುವಂತೆ ವಿದ್ಯಾರ್ಥಿ ಯುವಜನ ಸಂಘಟನೆ ಫ್ರೆಟರ್ನಿಟಿ ಮೂವ್ಮೆಂಟ್ ದಕ್ಷಿಣ ಕನ್ನಡ ಮನವಿ ಮಾಡಿದೆ.

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.