ಉಡುಪಿ: ಉತ್ತರ ಪ್ರದೇಶದ ಘಾಜಿಯಾಬಾದ್‍ನಲ್ಲಿ ಪತ್ನಿ ಮತ್ತು ಮೂವರು ಮಕ್ಕಳನ್ನು ಕೊಂದು ಪರಾರಿಯಾಗಿದ್ದ ಸಮಿತ್ ಕುಮಾರ್ (32) ವ್ಯಕ್ತಿಯನ್ನು ಮಣಿಪಾಲ ಪೊಲೀಸರು ಬಂಧಿಸಿದ್ದಾರೆ.

ಉತ್ತರ ಪ್ರದೇಶದಿಂದ ರೈಲಿನ ಮೂಲಕ ಕೆರಳಕ್ಕೆ ಹೋಗುತ್ತಿದ್ದಾಗ, ಉಡುಪಿಯ ಇಂದ್ರಾಳಿ ಬಳಿ ಇರುವ ರೈಲ್ವೇ ಸ್ಟೇಷನ್ ನಲ್ಲಿ ಇಳಿದಿದ್ದು, ಸಂಶಯಾಸ್ಪದವಾಗಿ ತಿರುಗುತ್ತಿದ್ದನ್ನು ಕಂಡ ರೈಲ್ಪೆ ಪೊಲೀಸರು ಪಣಿಪಾಲ ಪೊಲೀಸರಿಗೆ ವಿಷಯ ಮುಟ್ಟಿಸಿದ್ದಾರೆ. ವಿಷಯ ತಿಳಿದ ಮಣಿಪಾಲ ಪೊಲೀಸರು ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆಂದು ತಿಳಿದುಬಂದಿದೆ.

ಬೆಂಗಳೂರಿನ ಸಾಫ್ಟ್ ವೇರ್ ಕಂಪನಿಯೊಂದರಲ್ಲಿ ಉದ್ಯೋಗಿಯಾಗಿದ್ದ ಘಾಜಿಯಾಬಾದ್ ಇಂದಿರಾಪುರಂನ ನಿವಾಸಿ ಸಮಿತ್ ಕುಮಾರ್ (32) ಎಂಬಾತ ಮಾದಕ ವ್ಯಸನದಿಂದಾಗಿ ಕಳೆದ ಜನವರಿಯಲ್ಲಿ ಕೆಲಸ ಕಳೆದುಕೊಂಡಿದ್ದನು.  ಕೆಲಸ ಕಳೆದುಕೊಂಡು ಹಣಕಾಸಿನ ಮುಗ್ಗಟ್ಟು ಎದುರಿಸುತ್ತಿದ್ದ ಸಮಿತ್ ಕುಮಾರ್ ಭಾನುವಾರ ತನ್ನ ಪತ್ನಿ ಆಶು ಬಾಲಾ(32), ಪುತ್ರ ಪರಮೇಶ್(5), ಅವಳಿ ಮಕ್ಕಳಾದ ಆಕೃತಿ(4) ಮತ್ತು ಅರು(4)ಗೆ ಪಾನೀಯದಲ್ಲಿ ನಿದ್ದೆ ಮಾತ್ರೆ ಹಾಕಿ ಕೊಂದಿದ್ದನು. ಬಳಿಕ ತನ್ನ ಭಾಮೈದನಿಗೆ ಕರೆ ಮಾಡಿ ತನ್ನ ಹೆಂಡತಿ, ಮಕ್ಕಳನ್ನು ಕೊಂದಿದ್ದೇನೆ. ನಾನು ಸಾಯುತ್ತೇನೆ ಎಂದು ತಿಳಿಸಿದ್ದ ಎಂದು ಪೊಲೀಸರು ತಿಳಿಸಿದ್ದರು.

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.