ಬೆಂಗಳೂರು : ಕಾಂಗ್ರೆಸ್​ನವರಲ್ಲೇ ಒಳಗೊಳಗೆ ಅಸಮಾಧಾನವಿದೆ ಮೈತ್ರಿ ಸರ್ಕಾರ ಆದಷ್ಟೂ ಬೇಗ ಉರುಳಲಿದೆ ಎಂದು ಕೆ ಎಸ್ ಈಶ್ವರಪ್ಪ ಹೇಳಿದ್ದಾರೆ. ಅವರು ಇಂದು ಸುದ್ದಿಗಾರೊಂದಿಗೆ ಮಾತನಾಡಿ, ಕಾಂಗ್ರೆಸ್ ನಲ್ಲಿ ಎಲ್ಲರೂ ಆಕಾಂಕ್ಷಿಗಳೇ, ಮಲ್ಲಿಕಾರ್ಜುನ ಖರ್ಗೆ ಮಗನಿಗಾಗಿ, ಪರಮೇಶ್ವರ್​ ಡಿಸಿಎಂ ಸ್ಥಾನಕ್ಕೆ, ಡಿಕೆಶಿ ಸಿಎಂ ಸ್ಥಾನಕ್ಕೆ ಆಸೆಪಟ್ಟು ಸುಮ್ಮನಿದ್ದರು ಎಂದು ಹೇಳಿದರು.

ಎಲ್ಲರೂ ಕೂಡ ಈ ರೀತಿ ಬಾಯಿ ಮುಚ್ಚಿ ಕೂತಿದ್ದರು ವಿಶ್ವನಾಥ್​ ಹೇಳಿಕೆ ಬಳಿಕ ಕಾಂಗ್ರೆಸ್​ನಾಯಕರ ಒಳ ಬೇಗುದಿಗೆ ಪಕ್ಕಕ್ಕೆ ಇಟ್ಟು ಒಟ್ಟಾಗಿ ಚುನಾವಣೆ ಎದುರಿಸಲು ಮುಂದಾಗಿದ್ದಾರೆ. ಇವರ ಅಸಲಿ ಬಣ್ಣ ಫಲಿತಾಂಶದ ಬಳಿಕ ಬೆಳಕಿಗೆ ಬರಲಿದೆ ಎಂದು ಈಶ್ವರಪ್ಪ ವಾಗ್ದಾಳಿ ನಡೆಸಿದರು.

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.