ಲಾರ್ಡ್ಸ್: ಲೊ ಸ್ಕೋರ್ ಮ್ಯಾಚ್ ಯಾವಾಗಲೂ ಅಪಾಯಕಾರಿ ಎಂಬ ಮಾತಿದೆ.‌ಅದರಂತೆ ಇಂದು ನಡೆದ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ನ್ಯೂಝಿಲೆಂಡ್ ಗಳಿಸಿದ್ದು ಎಂಟು ವಿಕೆಟ್ ನಷ್ಟಕ್ಕೆ 241. ಈ ಮೊತ್ತ ಟ್ವೆಂಟಿ ಟ್ವೆಂಟಿ ಝಮಾನದಲ್ಲಿ ದೊಡ್ಡದೇನು ಅಲ್ಲ ಬಿಡಿ. ಭಾರತವನ್ನು ಇಷ್ಟೇ ಕಡಿಮೆ ಮೊತ್ತ ಹೊಡೆದು ಕಟ್ಟಿ ಹಾಕಿದ್ದ ನ್ಯೂಜಿಲ್ಯಾಂಡ್ ವಿಶ್ವಕಪ್ ಫೈನಲ್ ನಲ್ಲೂ ಕಡಿಮೆ ಮೊತ್ತ ಗಳಿಸಿ, ಅದ್ಬುತವಾದ ಬೌಲಿಂಗ್ ಸಂಘಟಿಸಿ ವಿಶ್ವ ಚಾಂಪಿಯನ್ ಆಗಿ ಹೊರ ಹೊಮ್ಮುವ ಸಾಧ್ಯತೆಯಿತ್ತು. ರೋಚಕ ಪಂದ್ಯದಲ್ಲಿ ಮೊದಲು ಟೈ ಆದ ಪಂದ್ಯ ಸೂಪರ್ ಒವರ್ ನಲ್ಲಿ ಇಂಗ್ಲೆಂಡ್ ವಿಶ್ವ ಚಾಂಪಿಯನ್ ಆಗಿ ಮೂಡಿಬಂದಿತ್ತು.

ಒಂದು ಬಾರಿಯೂ ಕಪ್ ಗೆಲ್ಲದ ನ್ಯೂಜಿಲೆಂಡ್ ಮತ್ತು ಇಂಗ್ಲೆಂಡ್ ಈ ಬಾರಿ ಫೈನಲ್ ಪ್ರವೇಶಿಸಿತ್ತು. ಯಾರು ಗೆದ್ದರೂ ಚೊಚ್ಚಲ ವಿಶ್ವಕಪ್ ಅವರ ಮುಡಿಗೇರುತ್ತಿತ್ತು. ಪಂದ್ಯ ಕೂಡ ಪೈಪೋಟಿಯಿಂದ ಕೂಡಿತ್ತು.‌ಟಾಸ್ ಗೆದ್ದ ನ್ಯೂಝಿಲೆಂಡ್ ಆರಿಸಿದ್ದು ಬ್ಯಾಟಿಂಗ್ ಆರಂಭಿಕ ಆಟಗಾರ ಗುಪ್ಟಿಲ್ ವೈಫಲ್ಯದ ಹೊರತಾಗಿಯೂ ನಿಕೋಲಸ್ 55 ಮತ್ತು ವಿಲಿಯಮ್ಸನ್ 30 ಆರಂಭಿಕ ಹಂತದಲ್ಲಿ ನಿಧನಗತಿಯ ಆಟ ಆಡಿ ತಂಡವನ್ನು ಆಧರಿಸಿದರು. ಇಂಗ್ಲೆಂಡ್ ಎಸೆತಗಾರರ ಬೌಲಿಂಗ್ ದಾಳಿಯನ್ನು ಮೆಟ್ಟಿ ನಿಲ್ಲುವುದೇ ದೊಡ್ಡ ಸವಲಾಗಿದ್ದು ಸ್ಲೊ ಬಾಲ್ ಡೆಲಿವರಿಗೆ ನ್ಯೂಝಿಲೆಂಡ್ ಪರದಾಡುತ್ತಿತ್ತು.ಲೇತಮ್ 47 ಬಿಟ್ಟರೆ ಮತ್ತ್ಯಾರು ಮಧ್ಯಮ ಕ್ರಮಾಂಕದಲ್ಲಿ ಹೆಚ್ಚು ಹೊತ್ತು ಕ್ರೀಸ್ ಗೆ ಅಂಟಿ ನಿಲ್ಲಲೇ ಇಲ್ಲ. ಅಂತು ಪರದಾಡುತ್ತ 241 ಗಳಿಸಿದ್ದೇ ಗ್ರೇಟ್! ಆದರೆ ಅಲ್ಪ ಮೊತ್ತವನ್ನು ಇಂಗ್ಲೆಂಡ್ ನ ಪ್ರಚಂಡ ಫಾರ್ಮ್ ನಲ್ಲಿರುವ ದಾಂಡಿಗರು ಸುಲಭವಾಗಿ ಬೆನ್ನಟ್ಟುತ್ತಾರೆಂದು ಭಾವಿಸಲಾಗಿತ್ತು.‌ಆದರೆ ನಡೆದದ್ದೇ ಬೇರೆ‌ ಭಾರತವನ್ನು ಅಲ್ಪ ಮೊತ್ತದ ಸವಾಲು ಕೊಟ್ಟು ಕಟ್ಟಿ ಹಾಕಿದ್ದ ನ್ಯೂಜಿಲೆಂಡ್ ಮೊತ್ತೊಮ್ಮೆ ತನ್ನ ಪ್ರಚಂಡ ಬೌಲಿಂಗ್ ನ ವಿಶ್ವರೂಪ ದರ್ಶನ ಮಾಡಿಸಿತು.

ತಂಡ 28 ರನ್ ಗಳಿಸಿದ್ದಾಗ ರಾಯ್ ಹೆನ್ರಿ ಬೌಲಿಗೆ ಲೆತಮ್ ಗೆ ಕ್ಯಾಚಿತ್ತು ಪೆವಿಲಿಯನ್ ಕಡೆ ಮುಖ ಮಾಡಿದರು. ನಂತರ ಅವರ ಬೆನ್ನು ಹಿಡಿದವರು ಪ್ರಚಂಡ ಫಾರ್ಮ್ ನಲ್ಲಿದ್ದ ರೂಟ್ 7 ಮತ್ತು ಬೈರ್ಸ್ಟೊ 36. ನಾಯಕ ಮೋರ್ಗನ್ 7 ರನ್ನಿಗೆ ವಿಕೆಟ್ ಒಪ್ಪಿಸುದರೊಂದಿಗೆ ಇಂಗ್ಲೆಂಡ್ ತಂಡ ಸಂಕಷ್ಟಕ್ಕೆ ಸಿಲುಕಿತ್ತು. ಈ ಸಂದರ್ಭದಲ್ಲಿ ತಂಡದ ಕೈ ಹಿಡಿದು ಜಯದತ್ತ ಕೊಂಡೊಯ್ಯಲು ಪ್ರಯತ್ನಿಸಿದ್ದು ಸ್ಟೋಕ್ಸ್ ಮತ್ತು ಬಟ್ಲರ್. ಆದರೆ ಬಟ್ಲರ್ 59 ರನ್ ಗೆ ಔಟಾಗುವ ಮುಖಾಂತರ ಇಂಗ್ಲೆಂಡ್ ಕಡೆಯಿದ್ದ ಪಂದ್ಯ ಮತ್ತೆ ನ್ಯೂಝಿಲೆಂಡ್ ನತ್ತ ವಾಲಿತು. ಅವರ ಹಿಂದೆ ವೋಕ್ಸ್ ಕೇವಲ ಎರಡು ರನ್ ಮಾಡಿ ಫೆರ್ಗುಸನ್ ಗೆ ವಿಕೆಟ್ ಒಪ್ಪಿಸಿದರು. ಕೊನೆಯ ಹನ್ನೆರಡು ಎಸೆತದಲ್ಲಿ ಇಂಗ್ಲೆಂಡ್ ಗೆ 24 ರನ್ ಅವಶ್ಯಕತೆಯಿತ್ತು ಈ ಸಂದರ್ಭದಲ್ಲಿ ಫ್ಲುಂಕೇಟ್ ವಿಕೆಟ್ ಒಪ್ಪಿಸಿದರು. 7 ಬಾಲಿಗೆ 15 ರನ್ ಅವಶ್ಯಕತೆಯಿದ್ದಾಗ ಅರ್ಕರ್ ಕ್ಲಿನ್ ಬೌಲ್ಡದರು. ನಂತರ ಕೊನೆಯ ಆರು ಎಸೆತದಲ್ಲಿ ಹದಿನೈದು ರನ್ ಬೌಲ್ಟ್ ಒವರ್ ನಲ್ಲಿ ಎರಡು ಸಿಕ್ಸರ್ ಸಿಡಿಸಿದ ಸ್ಟೋಕ್, ಕೊನೆಯ ಬೌಲ್ ನಲ್ಲಿ ಎರಡು ರನ್ ಅವಶ್ಯಕತೆಯಿದ್ದಾಗ ಒಂದು ರನ್ ಬಾರಿಸಿ ಪಂದ್ಯ ಟೈ ಆಯಿತು.

ಕೊನೆಗೆ ಸೂಪರ್ ಒವರ್ ಗೆ ಮೊರೆ ಹೋಗಲಾಯಿತ. ಇಂಗ್ಲೆಂಡ್ ಪರ ಸ್ಟೋಕ್ ಮತ್ತು ಬಟ್ಲರ್ ಸೇರಿ ಆರು ಎಸೆತದಲ್ಲಿ ಹದಿನೈದು ರನ್ ಪೇರಿಸಿದರು. ಇದನ್ನು ಬೆನ್ನಟ್ಟಿದ ನ್ಯೂಜಿಲೆಂಡ್ ನಿಶಾನ್ ಅವರು ಸಿಕ್ಸರ್ ಹೊಡೆಯುದರೊಂದಿಗೆ ಪಂದ್ಯವನ್ನು ಬಹುತೇಕ ಗೆಲ್ಲುವ ಹಂತದಲ್ಲಿದ್ದರು. ಆದರೆ ಕೊನೆಯ ಎಸೆತದಲ್ಲಿ ಎರಡು ರನ್ ತೆಗೆಯಲು ವಿಫಲವಾಗಿ ರನೌಟಾಗುದರ ಮುಖಾಂತರ 15 ರನ್ ಸಮಬಲವಾಗಿದ್ದರೂ ಒಂದು ವಿಕೆಟ್ ನಷ್ಟವಾದ ಕಾರಣ ಇಂಗ್ಲೆಂಡ್ ಚೊಚ್ಚಲ ವಿಶ್ವಕಪ್ ಮೂಡಿಗೇರಿಸಿಕೊಂಡಿತು.

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.