ಬರ್ಮಿಂಗ್​​ಹ್ಯಾಂ: ಇಂಗ್ಲೆಂಡ್​ನ ಕ್ರಿಸ್​ ವೋಕ್ಸ್​​​ ಹಾಗೂ ಆದಿಲ್​ ರಶೀದ್​ ಅವರ ಶಿಸ್ತುಬದ್ಧ ಬೌಲಿಂಗ್​​ ದಾಳಿಗೆ ನಲುಗಿದ ಆಸ್ಟ್ರೇಲಿಯಾ ಐಸಿಸಿ ವಿಶ್ವಕಪ್​ನ ಎರಡನೇ ಸೆಮಿಫೈನಲ್​ನಲ್ಲಿ ಆಂಗ್ಲ ಪಡೆಗೆ 224 ರನ್​ಗಳ ಗುರಿ ನೀಡಿತು.

ಇಲ್ಲಿನ ಎಜ್​ಬಾಸ್ಟನ್ ಕ್ರೀಡಾಂಗಣದಲ್ಲಿ ಟಾಸ್​ ಗೆದ್ದು ಬ್ಯಾಟಿಂಗ್​ ಮಾಡಿದ ಆಸೀಸ್​ ಪಡೆ 49 ಓವರ್​ಗಳಲ್ಲಿ ಆಲೌಟ್​ ಆಗುವ ಮೂಲಕ 223 ರನ್​​ ಗಳಿಸಿದೆ.

ಆರಂಭಿಕರಾದ ಡೇವಿಡ್​​ ವಾರ್ನರ್​​​ (9) ಹಾಗೂ ನಾಯಕ ಆ್ಯರೋನ್​ ಫಿಂಚ್​​ (0) ಶೀಘ್ರ ಔಟಾದರೆ, ಸ್ಫೋಟಕ ಬ್ಯಾಟ್ಸ್ಮನ್​​ ಸ್ಟೀವ್​​ ಸ್ಮಿತ್​ ತಮ್ಮ ಬಿರುಸಿನ ಬ್ಯಾಟಿಂಗ್​ನಿಂದ 85 ರನ್​ ಗಳಿಸುವ ಮೂಲಕ ತಂಡವನ್ನು 200ರ ಗಡಿ ದಾಟಿಸಿದರು. ಅವರಿಗೆ ವಿಕೆಟ್​ ಕೀಪರ್​​ ಆಲೆಕ್ಸ್​ ಕ್ಯಾರಿ (46) ಸಾಥ್​ ನೀಡುವಲ್ಲಿ ಸಫಲರಾದರು. ಆದರೆ, ಉಳಿದ ಬ್ಯಾಟ್ಸ್​​ಮನ್​ಗಳು ತೀರಾ ಕಳಪೆ ಆಟದೊಂದಿಗೆ ಶೀಘ್ರ ವಿಕೆಟ್​ ಕಳೆದುಕೊಂಡು ಪೆವಿಲಿಯನ್​ ಪೆಡೆರ್​​ ನಡೆಸಿದರು.

ಇಂಗ್ಲೆಂಡ್​ ಪರ ಬೌಲಿಂಗ್​ ಮಾಡಿದ ಕ್ರಿಸ್​ ವೋಕ್ಸ್​​​​ ಹಾಗೂ ಆದಿಲ್​ ರಶೀದ್​​​​​ ತಲಾ 3 ವಿಕೆಟ್​ ಪಡೆದರೆ, ಜೋಫ್ರಾ ಆರ್ಚರ್​​​​ 2 ಹಾಗೂ ಮಾರ್ಕ್​ ವುಡ್​​​​​ ಒಂದು ವಿಕೆಟ್​ ಕಬಳಿಸಿ ಪಾರಮ್ಯ ಮೆರೆದರು.

ಈ ಗುರಿಯನ್ನು ಬೆನ್ನಟ್ಟಿದ ಇಂಗ್ಲೆಂಡ್ ಆಸ್ಟ್ರೇಲಿಯಾ ದಾಳಿಯನ್ನು ಪುಡಿಗಟ್ಟಿ ಕೇವಲ 32.1 ಒವರ್ ನಲ್ಲಿ 223 ರನ್ ಬಾರಿಸಿ ಗುರಿ ಮುಟ್ಟಿತು. ಇಂಗ್ಲೆಂಡ್ ಪರ ಸ್ಪೋಟಕ ಬ್ಯಾಟಿಂಗ್ ಮಾಡಿದ ಜೇಸನ್ವರಾಯ್ 65 ಎಸೆತದಲ್ಲಿ 85 ರನ್ ಬಾರಿಸಿದರು.ಬ್ರೈಸ್ಟೊ ಇವರಿಗೆ 34 ರನ್ ಬಾರಿಸಿ ಉತ್ತಮ ಸಾಥ್ ನೀಡಿದರು.

ನಂತರ ಇವರಿಬ್ಬರು ಔಟಾದ ನಂತರ ಅಜೇಯ ಆಟವಾಡಿದ ರೂಟ್ 49 ಮತ್ತು ಮೋರ್ಗನ್ 45 ತಂಡವನ್ನು ಫೈನಲ್ಸ್ ಗೆ ತಲುಪಿದರು.

ಇದರೊಂದಿಗೆ ಒಮ್ಮೆಯೂ ವಿಶ್ವಕಪ್‌ ಗೆಲ್ಲದ ಎರಡು ತಂಡಗಳು ಫೈನಲ್‌ ನಲ್ಲಿ ಎದುರುಗೊಳ್ಳಲಿದೆ. ಇಂಗ್ಲೆಂಡ್ ಮತ್ತು ನ್ಯೂಜಿಲೆಂಡ್ ರವಿವಾರ ಎದುರುಗೊಳ್ಳಲಿದ್ದು ಯಾರು ಗೆದ್ದರೂ ಚೊಚ್ಚಲ ವಿಶ್ವಕಪ್ ಗೆದ್ದು ಹಿರಿಮೆ ಹೆಚ್ಚಿಸಿಕೊಳ್ಳಲಿದ್ದಾರೆ.

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.