ಉತ್ತರ ಪ್ರದೇಶದ ಎರಡು ಲೋಕಸಭಾ ಕ್ಷೇತ್ರಗಳಿಗೆ ನಡೆದ ಉಪಚುನಾವಣೆ: ಇಂದು ಮತ ಎಣಿಕೆ

ಲಕ್ನೋ, ಮಾರ್ಚ್ 14: ಉತ್ತರ ಪ್ರದೇಶದ ಎರಡು ಲೋಕಸಭಾ ಕ್ಷೇತ್ರಗಳಿಗೆ ನಡೆದ ಉಪಚುನಾವಣೆಯ ಫಲಿತಾಂಶ ಇಂದು(ಮಾ.14) ಹೊರಬೀಳಲಿದೆ.

ಉತ್ತರ ಪ್ರದೇಶದ ಗೋರಖ್ಪುರ ಮತ್ತು ಫುಲ್ಪುರದಲ್ಲಿ ಕ್ರಮವಾಗಿ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಮತ್ತು ಉಪಮುಖ್ಯಮಮತ್ರಿ ಕೇಶವ್ ಪ್ರಸಾದ್ ಮೌರ್ಯ ಅವರು ತಮ್ಮ ಸಂಸದ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರಿಂದ ಉಪಚುನಾವಣೆ ನಡೆದಿದೆ.

ಮಾ.11 ರಂದು ನಡೆದ ಚುನಾವಣೆಯ ಫಲಿತಾಂಶ  ಸೂಕ್ತ ಬಿಗಿ ಬಂದೋಬಸ್ತಿನೊಂದಿಗೆ ಇಂದು(ಮಾ.14) ಹೊರಬೀಳಲಿದೆ.

ಗೋರಖ್ಪುರದಿಂದ ಉಪೇಂದ್ರ ಕುಮಾರ್(ಬಿಜೆಪಿ), ಪ್ರವೀಣ್ ನಿಶದ್(ಎಸ್ಪಿ), ಸುಹೃತಾ ಚಟರ್ಹಿ ಕರೀಮ್(ಕಾಂಗ್ರೆಸ್) ಸ್ಪರ್ಧಿಸಿದ್ದು, ಫುಲ್ಪುರದಿಂದ ಕುಶಲೇಂದ್ರ ಸಿಂಗ್ ಪಟೇಲ್(ಬಿಜೆಪಿ), ನಾಗೇಂದ್ರ ಪ್ರತಾಪ್ ಸಿಂಗ್ ಪಟೇಲ್(ಎಸ್ಪಿ), ಮನೀಶ್ ಮಿಶ್ರಾ(ಕಾಂಗ್ರೆಸ್) ಸ್ಪರ್ಧಿಸಿದ್ದಾರೆ.