ದುಬೈ: ತುಳು ಪಾತೆರ್ಗ ತುಳು ಒರಿಪಾಗ ದುಬೈ ಇದರ 7ನೇ ವರ್ಷದ ಗೌಜಿಗಮ್ಮತ್ ತುಳುನಾಡ ಗೊಬ್ಬುಲೆದ ಲೇಸ್ ಕಾರ್ಯಕ್ರಮವು 15/3 /2019 ನೇ ಶುಕ್ರವಾರ ದುಬೈಯ ಝಬೀಲ್ ಪಾರ್ಕ್ ನಲ್ಲಿ ಅದ್ದೂರಿಯಾಗಿ ನಡೆಯಿತು . ತುಳುನಾಡಿನ ಪದ್ದತಿಯಂತೆ ಭಾಗವಹಿಸಲು ಬಂದಂತಹ ಮುಖ್ಯ ಅಥಿತಿಗಳನ್ನು ಶೋಭಿತಾ ಪ್ರೇಮ್ ಜೀತ್ ರವರು ಬೆಲ್ಲ ನೀರು ನೀಡುದರ ಮೂಲಕ ಕಾರ್ಯಕ್ರಮಕ್ಕೆ ಸ್ವಾಗತಿಸಿದರು. ದುಬೈಯ ಖ್ಯಾತ ಉದ್ಯಮಿ ಹಿರಿಯ ಸದಸ್ಯ ರಾದ ಶ್ರೀಯುತ ಪ್ರಭಾಕರ್ ಶೆಟ್ಟಿ ಯವರು ತುಳುನಾಡಿನ “ಅಪ್ಪೆ ಭಾಷೆ ” ತುಳು ಲಿಪಿಯಿಂದ “ತುಳು ಪಾತೆರ್ ಗ ತುಳು ಒರಿಪಾಗ – ಗೌಜಿ ಗಮ್ಮತ್ತ್ 2019 ” ಎಂದು ಬರೆಯುದರ ಮೂಲಕ ಕಾರ್ಯಕ್ರವನ್ನು ಉದ್ಘಾಟಿಸಿ ತುಳುನಾಡಿನ ಕ್ರೀಡೆ ಗಳಿಗೆ ಚಾಲನೆ ನೀಡಿದರು ಬಳಿಕ ಮಾತನಾಡಿದ ಪ್ರಭಾಕರ್ ಶೆಟ್ಟಿಯವರು ಅಪ್ಪೆ ಭಾಷೆ ತುಳು ಲಿಪಿಯನ್ನು ಕಲಿತು ಬೆಳಸಿ ಉಳಿಸ ಬೇಕು ಎಂದು ತಿಳಿಸಿದರು.

ಮುಖ್ಯ ಅತಿಥಿಗಳಾಗಿ ನಮ ತುಳುವೆರ್ ದುಬೈ ಇದರ ಅಜ್ಮಲ್ ದುಬೈ , ಬಾಲ ಕೃಷ್ಣ ಸಾಲ್ಯಾನ್ ದುಬೈ, ತುಳುನಾಡ ರಕ್ಷಣಾ ವೇದಿಕೆಯ ದುಬೈಯ ಅಧ್ಯಕ್ಷ ರಾದ ಅಶೋಕ್ ಬೈಲೂರ್, ಬಿಲ್ಲವಸ್ ದುಬೈ ಯ ಸತೀಶ್ ಪೂಜಾರಿ , ಕರ್ನಾಟಕ ಸಂಘ ದುಬೈದ ಅಧ್ಯಕ್ಷ ರಾದ ಆನಂದ್ ಬೈಲುರೂ, ಬಿರವೆರ್ ಕುಡ್ಲ ದುಬೈ ಯ ಸುರೇಶ್ ಪೂಜಾರಿ , ತುಳು ಚಲನಚಿತ್ರ ನಟಿ ನವ್ಯಾತ ರೈ.ಬಾಗವಹಿಸಿ ಕಾರ್ಯಕ್ರಮಕ್ಕೆ ಶುಭಕೋರಿದರು. ನಂತರ ತುಳುನಾಡಿನ ಕ್ರೀಡೆಗಳಾದ ಕಬ್ಬಡಿ , ಲಗೋರಿ , ಹಗ್ಗ ಜಗ್ಗಾಟ , ಸೈಕಲ್ ಚಕ್ರ ಓಟ, ರಸಪ್ರಶ್ನೆ ಚಿತ್ರದ ಆಟ , ಅಭಿನಯದ ಆಟ ಹೀಗೆ ಹಲವಾರು ಕ್ರೀಡೆಗಳನ್ನು ಕುಡ್ಲ, ಉಡುಪಿ, ಬಾರಕೂರು, ಕಾಸರಗೋಡು ಎಂಬ ನಾಲ್ಕು ತಂಡಗಳಾಗಿ ವಿಂಗಡಿಸಿ ನೊವೆಲ್ ಅಲ್ಮೇಡಾ ಮತ್ತು ಅಮರ್ ನಂತುರ್ ರವರು ನಿರ್ವಹಿಸಿದರು. ವಿಶೇಷವಾಗಿ ನಾಲ್ಕು ತಂಡಗಳಿಗೆ ನೀಡಿದ ವಿಷಯಗಳಾದ ಮದುವೆ, ಶಾಲೆ , ಕೃಷಿ, ಜಾತ್ರೆ ವಿಷಯದ ಬಗ್ಗೆ ತಂಡದ ಅಭಿನಯ ಎಲ್ಲರ ಮನ ಮೆಚ್ಚುಗೆ ಪಾತ್ರವಾಯಿತು ಹಾಗೂ ಮಹಿಳೆಯರಿಗೆ ಮತ್ತು ಮಕ್ಕಳಿಗೆ ಹಮ್ಮಿಕೊಳ್ಳಲಾದ ಕ್ರೀಡೆಗಳನ್ನು ಸುಪ್ರಿಯಾ ಶೆಟ್ಟಿಯವರು ನೀರ್ವಹಿಸಿದರು . ಬೆಳಗಿನಿಂದಳು ತುಂತುರು
ಮಳೆ ಇದ್ದರೂ 300 ಕ್ಕಿಂತಲೂ ಹಿಚ್ಚಿನ ತುಳುವರು ಕಾರ್ಯಕ್ರಮದಲ್ಲಿ ಅತೀ ಉತ್ಸಹದಿಂದ ಭಾಗವಹಿಸಿ ಆಟೋಟಗಳಲ್ಲಿ ಬಾಗವಹಿಸಿದ್ದು ವಿಶೇಷವಾಗಿತ್ತು.
ತದನಂತರ ದುಬಾಯಿಯ ಧಾರ್ಮಿಕ ಮುಂದಾಳು , ಸಮಾಜ ಸೇವಕಾರದ ಶ್ರೀಯುತ ಆನಂದ್ ಸಾಲಿಯಾನ್ , ಉಷಾ ಆನಂದ್ ಸಾಲಿಯಾನ್ ದಂಪತಿಯರನ್ನು ಮತ್ತು ದುಬೈಯ ಸಮಾಜ ಸೇವಕರಾದ ಶ್ರೀಯುತ ನೋವೆಲ್ ಅಲ್ಮೇಡಾರವರನ್ನು ಅಪ್ಪೆ ಭಾಷೆ ತುಳವ ತುಡರ್ ಎಂಬ ಬಿರುದನ್ನು ನೀಡಿ ಸನ್ಮಾನಿಸಲಾಯಿತು.

ಮದ್ಯಾಹ್ನ ಊಟ ಕ್ಕೆ ತುಳುನಾಡಿನ ಖಾದ್ಯಗಳಾದ ಗಂಜಿ , ಮಾವಿನ ಕಾಯಿ ಚಟ್ನಿ, ಕಡಲೆ ಬಲ್ಯಾರ್, ನುಂಗೆಲ್ ನಂಗ್ ಕಾಯಿಸಿದು , ಹೆಸರು ಬೆಳೆ ಪಾಯಸವನ್ನು ಊರಿನಿಂದ ತರಿಸಿದ ಅಡಿಕೆಯ ಹಾಳೆಯ ಬಟ್ಟಲಿನಲ್ಲಿ ಊಟದ ವ್ಯವಸ್ಥೆ ಮಾಡಿದ್ದು ವಿಶೇಷವಾಗಿತ್ತು. ಸಂಜೆ ಅವಲಕ್ಕಿ ಮತ್ತು ಚಾಹ ದ ವ್ಯವಸ್ಥೆ ಮಡಾಲಗಿತ್ತು. ಕಾರ್ಯಕ್ರಮಕ್ಕೆ ಬಂದು ಸಹಕಾರ ನೀಡಿದ ಎಲ್ಲಾ ಮಹಾನಿಯರಿಗೆ ನೆನಪಿನ ಕಾಣಿಕೆ ನೀಡಿ ಜಯ ಗಳಿಸಿದ ತಂಡಗಳಿಗೆ ಪ್ರಶಸ್ತಿ ಪತ್ರ ಮತ್ತು ಪದಕಗಳನ್ನು ನೀಡಿ ಅಭಿನಂದಿಸಾಲಾಯಿತು.

ತಂಡದ ಸಕ್ರಿಯ ಕಾರ್ಯಕರ್ತರುಗಳದ ಸತೀಶ್ ಉಳ್ಳಾಲ್, ಸತೀಶ್ ಪೂಜಾರಿ , ಕವಿರಾಜ್ , ಮನೋಜ್ ಕುಲಾಲ್ , ಶೋಬಿತಾ ಪ್ರೇಮಜೀತ್, ಆಶ್ವಿನಿ ಸತೀಶ್ , ದೀಪಕ್ ಸನಿಲ್ , ಪ್ರೇಮಶ್ರೀ , ಭಾಸ್ಕರ್ ಅಂಚನ್, ಪುರಂದರ್ ಕುಲಾಲ್ , ಪವನ್ ಪೂಜಾರಿ , ನವೀನ್ ಸರಪಾಡಿ, ರವೀಂದ್ರ ಪೂಜಾರಿ, ಸೂರಜ್, ಪ್ರತಿಕ್ ಉಳ್ಳಾಲ, ಗುರುದತ್ತ್ ಬೆಲ್ಚಡ ಇವರುಗಳು ಉಪಸ್ಥಿತರಿದ್ದು ಕಾರ್ಯಕ್ರಮ ಯಶಸ್ವಿಯಾಗಿ ನಡೆಸಲು ಸಹಕರಿಸಿದರು .ತುಳು ಪಾತೆರ್ ಗ ತುಳು ಒರಿಪಾಗ ತಂಡದ ಪ್ರದಾನ ಕಾರ್ಯದರ್ಶಿಯವರಾದ ರೀತು ಅಂಚನ್ ಕುಲಶೇಖರ ತಂಡದ ಸಾಧನೆಯನ್ನು ವಿವರಿಸಿ ಕಾರ್ಯಕ್ರಮವನ್ನು ನಿರೂಪಿಸಿ ನಿರ್ವಹಿಸಿ ದನ್ಯವಾದ ಸಮರ್ಪಣೆ ಮಾಡಿದರು.

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.