ದುಬೈ: ಕರ್ನಾಟಕದಲ್ಲಿ ಬಿಡುಗಡೆಗೊಂಡು ಉತ್ತಮ ಪ್ರದರ್ಶನ ಕಾಣುತ್ತಿರುವ ಸಸ್ಪೆನ್ಸ್ ಥ್ರಿಲ್ಲರ್ ಕನ್ನಡ ಸಿನಿಮಾ “ಅನುಕ್ತ” ಇದೇ ಫೆಬ್ರವರಿ 14ರಿಂದ ಗಲ್ಫ್ ರಾಷ್ಟ್ರಗಳಲ್ಲಿ ಬಿಡಿಗಡೆಗೊಳ್ಳಲಿದ್ದು. ಯುಎಈ ಮಾತ್ರವಲ್ಲ ಒಮನ್, ಕತಾರ್, ಬಹರೈನ್, ಕುವೈಟ್ ನಲ್ಲೂ ಅನುಕ್ತ ಸಿನಿಮಾ ಅನಿವಾಸಿ ಕನ್ನಡ ಸಿನಿ ಪ್ರೇಮಿಗಳ ಮನಗೆಲ್ಲಲು ಏಕಕಾಲದಲ್ಲಿ ಲಗ್ಗಿಯಿಡುತ್ತಿದೆ.

ಬಿಡುಗಡೆಯಾದ ದಿನದಿಂದಲೂ ಜನರ ಪಾಸಿಟೀವ್ ರಿವೀವ್ಯ್ ನಿಂದಾಗಿ ಈಗಲೂ ಹಲವೆಡೆ ಹೌಸ್ ಪುಲ್ ಪ್ರದರ್ಶನ ಕಾಣುತ್ತಿರುವ ಅನುಕ್ತ ಚಿತ್ರದಲ್ಲಿ ಸಂಪತ್ ರಾಜ್, ಕಾರ್ತಿಕ್ ಅತ್ತಾವರ್, ಸಂಗೀತ, ಅನುಪ್ರಭಾಕರ್, ಚಿದಾನಂದ್ ರವರ ಮನೋಜ್ಞ ಅಭಿನಯ, ಅಶ್ವಥ್ ಸಾಮ್ಯೂಲ್ ರವರ ಅಚ್ಚುಕಟ್ಟಿನ ನಿರ್ದೇಶನ, ನೋಬಿನ್ ಪೌಲ್ ರವರ ಮನಸ್ಸಿಗೆ ಮುದನೀಡುವ ಸಂಗೀತ, ಎಲ್ಲಾದಕ್ಕೂ ಹೆಚ್ಚಾಗಿ ಕರಾವಳಿಯ ಭೂತ ದೈವಾರಾಧನೆಯ ಸೊಬಗನ್ನು ಥ್ರಿಲ್ಲರ್ ಮರ್ಡರ್ ಮಿಸ್ಟ್ರಿಯ ಕಥೆಯೊಂದಿಗೆ ಬೆರೆಸಿರುವ ಕಾರಣ ಅನುಕ್ತ ಒಂದು ಸಂಪೂರ್ಣ ಪ್ಯಾಕೇಜ್ ಆಗಿ ಹೊರಹೊಮ್ಮಿದ್ದು, ದುಬೈ ಉದ್ಯಮಿ ಹರೀಶ್ ಬಂಗೇರ ದೇಯಿ ಪ್ರೊಡಕ್ಷನ್ ಬ್ಯಾನರಿನಲ್ಲಿ ನಿರ್ಮಿಸಿದ ಈ ಸಿನಿಮಾ ಇದೀಗ ದುಬೈನಲ್ಲಿ ಬಿಡುಗಡೆಯಾಗುತ್ತಿದ್ದು, ರಾಜ್ಯದಲ್ಲಿ ಅನುಕ್ತ ಕಂಡ ಯಶಸ್ಸು ಮತ್ತು ಪ್ರೇಕ್ಷಕರ ಪ್ರತಿಕ್ರಿಯೆ ನೋಡಿದ ಅನಿವಾಸಿ ಕನ್ನಡಿಗರು ಈ ಸಿನಿಮಾ ನೋಡಲು ಕಾತುರರಾಗಿದ್ದು, ಬಿಡುಗಡೆಯನ್ನೇ ಎದುರುನೋಡುತ್ತಿದ್ದಾರೆ. ಈಗಾಗಲೇ ಮುಂಗಡವಾಗಿ ಟಿಕೆಟ್ ಖರೀದಿ ನಡೆಯುತ್ತಿದೆ.

ಕಳೆದ ಆರು ವರ್ಷಗಳಿಂದ ಗಲ್ಫ್ ರಾಷ್ಟ್ರಗಳಲ್ಲಿ ಕನ್ನಡ ಸಿನಿಮಾಗಳನ್ನ ಬಿಡುಗಡೆಗೊಳಿಸಿ ಕನ್ನಡ ಸಿನಿಮಾ ವೀಕ್ಷಿಸುವ ಅನಿವಾಸಿ ಕನ್ನಡಿಗರ ಬೇಡಿಕೆಯನ್ನು ಯಶಸ್ವಿಯಾಗಿ ಈಡೇರಿಸುತ್ತಾ ಬಂದಿರುವ ದೀಪಕ್ ಸೋಮಶೇಖರ್ ನೇತೃತ್ವದ ‘ಓವರ್ಸೀಸ್ ಕನ್ನಡ ಮೂವೀಸ್’ ಈ ಬಾರಿ ಅನುಕ್ತ ಚಿತ್ರದ ಪ್ರೀಮಿಯರ್ ಷೋವನ್ನು ಅತ್ಯಂತ ದುಬಾರಿ ಮತ್ತು ಹಾಲಿವುಡ್ ಸಿನಿಮಾಗಳಿಗೆ ಹೆಸರಾದ ‘ದುಬೈ ಸಿಟಿ ವಾಕ್’ ನಲ್ಲಿರುವ ಥಿಯೇಟರ್ ‘ರಾಕ್ಸಿ ಸಿನಿಮಾ’ ನಲ್ಲಿ ನಡೆಸುತ್ತಿದ್ದು. ಈ ಥಿಯೇಟರ್ ನಲ್ಲಿ ಬಿಡುಗಡೆ ಗೊಳ್ಳಲಿರುವ ಪ್ರಥಮ ಸಿನಿಮಾ ಎಂಬ ಹೆಗ್ಗಳಿಕೆಗೆ ಅನುಕ್ತ ಚಿತ್ರ ಪಾತ್ರವಾಗಿದೆ.

ರಾಕ್ಸಿ ಸಿನಿಮಾದಲ್ಲಿ ನಡೆಯುತ್ತಿರುವ ಪ್ರೀಮಿಯರ್ ಷೋ ಕುರಿತು ಮಾತನಾಡಿದ ‘ಓವರ್ಸೀಸ್ ಕನ್ನಡ ಮೂವೀಸ್’ ನ ದೀಪಕ್ ಸೋಮಶೇಖರ್, ‘ನಾವು ಕಳೆದ ಆರುವರೆ ವರ್ಷಗಳಿಂದ ಕನ್ನಡ ಸಿನಿಮಾ ಗಲ್ಫ್ ರಾಷ್ಟ್ರಗಳಲ್ಲಿ ಹಂಚಿಕೆ ಮಾಡುವ ಕೆಲಸ ಮಾಡುತ್ತಿದ್ದು, ಗಲ್ಫ್ ಅನಿವಾಸಿ ಕನ್ನಡಿಗರಿಂದ ಉತ್ತಮ ಬೆಂಬಲ ದಿನೇ ದಿನೇ ನಮಗೆ ದೊರಕುತ್ತಿದೆ. ಇದೀಗ ‘ರಾಕ್ಸಿ ಸಿನಿಮಾ’ದಲ್ಲಿ ಕನ್ನಡ ಚಿತ್ರವೊಂದು ಪ್ರಥಮಬಾರಿಗೆ ಬಿಡುಗಡೆಯಾಗುತ್ತಿರುವುದು ನಮಗೆ ಹೆಮ್ಮೆಯ ವಿಚಾರ, ಕನ್ನಡ ಸಿನಿಮಾದ ಮಟ್ಟಿಗೆ ಇದೊಂದು ಹೊಸ ಮೈಲಿಗಲ್ಲು. ‘ಅನುಕ್ತ’ ಚಿತ್ರ ಯಾರೂ ಮಿಸ್ ಮಾಡಲೇಬಾರದಂತಹ ಉತ್ತಮ ಚಿತ್ರ, ಹೆಚ್ಚಿನ ಸಂಖ್ಯೆಯಲ್ಲಿ ಕನ್ನಡಿಗರು ಬಂದು ಸಿನಿಮಾ ನೋಡಬೇಕು, ಥಿಯೇಟರ್ ಮತ್ತು ಟೈಮಿಂಗ್ ಬಗ್ಗೆ ಹೆಚ್ಚಿನ ಮಾಹಿತಿಗಾಗಿ +00971504788956 ಗೆ ವಾಟ್ಸಪ್ ಮೂಲಕ ಸಂಪರ್ಕಿಸಿ’ ಎಂದು ಹೇಳಿದರು.

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.