ಇತ್ತೀಚಿಗಷ್ಟೇ ಕರಾವಳಿಯಲ್ಲಿ ಡ್ರಗ್ಸ್ ವಿಚಾರವಾಗಿ ಹಲವು ತರುಣರ ಬರ್ಬರ ಹತ್ಯೆಯ ಸರಣಿಯು ಮತ್ತೆ ಮರುಕಳಿಸುತ್ತಾ ಇದೆ. ಕರಾವಳಿಯಲ್ಲಿ ಕೋಮುದ್ವೇಷ ಎಷ್ಟು ಭಯಾನಕವೋ ಡ್ರಗ್ಸ್ ಜಾಲವು ಅದಕ್ಕಿಂತಲೂ ಕಟು ಭಯಾನಕ. ಈ ಮಾರಕ ವ್ಯಸನಿಗೆ ಬಲಿಯಾಗಿ ಹಲವು ಕುಟುಂಬಗಳು ನಿರ್ಗತಿಕರಾಗಿದೆ

ಡ್ರಗ್ಸ್ ಜಾಲ ಕರಾವಳಿಯ ಪಟ್ಟಣಗಳಲ್ಲಿ ಬೆಳೆದಂತೆ ಗ್ರಾಮೀಣ ಭಾಗಗಳಲ್ಲೂ ಅತಿ ವೇಗ ಬೆಳೆಯುತಿದೆ. ವಿಶೇಷವಾಗಿ ಹದಿಹರೆಯದ ವಿಧ್ಯಾರ್ಥಿಗಳು ಡ್ರಗ್ಸ್ ವ್ಯಸನಿಗೆ ಬಲಿಯಾಗಿರುವುದು ತುಂಬಾ ಖೇದಕರ

ಮಾದಕ ದ್ರವ್ಯ ,ಡ್ರಗ್ಸ್ ಕುರಿತು ಇನ್ನು ನಿರ್ಲಕ್ಷ ವಹಿಸಿದರೆ ಭವಿಷ್ಯದಲ್ಲಿ ಅಪಾಯದ ಸಮಾಜ ನಿರ್ಮಾಣವಾಗುವುದು ಖಂಡಿತಾ. ಈ ಡ್ರಗ್ಸ್ ಜಾಲವು ಇಷ್ಟು ಸಕ್ರೀಯವಾಗಿ ಕಾರ್ಯನಿರ್ವಹಿಸಬೇಕಾದರೆ ಮತ್ತು ಮುಕ್ತವಾಗಿ ಸರಬರಾಜಾಗಬೇಕಾಗದರೆ ಪ್ರಭಾವಿತ ಶಕ್ತಿಯು ಬೆನ್ನೆಲುಬಾಗಿ ಸಹಾಯ ಹಸ್ತಮಾಡುತ್ತಿದೆ.

ಈ ನಿಟ್ಟಿನಲ್ಲಿ ಸಮಾಜಿಕ ಹೊಣಿಗಾರಿಕೆಯ ಸಲುವಾಗಿ ನಾವೆಲ್ಲರೂ ಇದರ ವಿರುಧ್ಧ ಸಾಮೂಹಿಕ ಅಭಿಯಾನ ನಡೆಸಬೇಕಾಗಿದೆ. ಪ್ರತಿ ಮೊಹಲ್ಲಾ ಹಾಗೂ ಜಮಾಅತ್ ಗಳಲ್ಲಿ ಡ್ರಗ್ಸ್ ವಿರುಧ್ಧ ಕಾರ್ಯಪ್ರವರ್ತರಾಗಬೇಕಾಗಿರುವುದು ಜಮಾಅತಿನ ಕರ್ತವ್ಯವೂ ಹೌದು. ಮಾದಕ ದ್ರವ್ಯ ಡ್ರಗ್ಸ್ ಜಾಲವನ್ನು ಬೇರು ಸಮೇತ ಕಿತ್ತೆಗೆಯಬೇಕಾಗಿದೆ.

ಈ ಅಭಿಯಾನದ ಮೂಲಕ ಮಾದಕ ದ್ರವ್ಯ ವ್ಯಸನಿಯಿಂದ ಸಮುದಾಯವನ್ನು ರಕ್ಷಿಸಬೇಕಾಗಿದೆ.

ಕೈ ಜೋಡಿಸಿ ಕಾರ್ಯಪ್ರವರ್ತರಾದರೆ ಖಂಡಿತಾ ಜಯ ಸಿಗಲಿದೆ.

ಅಲ್ಲಾಹನು ಅನುಗ್ರಹಿಸಲಿ….ಆಮೀನ್

🖋ನವಾಝ್ ತುಂಬೆ

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.