ಉಡುಪಿ : ಉಡುಪಿಯ ಕಡಲತೀರ ಕಾಪು ಸಮೀಪದ ಮೂಳೂರಿನಲ್ಲಿರುವ ಪ್ರಕೃತಿ ಚಿಕಿತ್ಸಾ ರೆಸಾರ್ಟ್ ನಲ್ಲಿ ಐದು ದಿನಗಳ ಕಾಲ ಪ್ರಕೃತಿ ಚಿಕಿತ್ಸೆ ಪಡೆಯುವ ಸಲುವಾಗಿ ಮಾಜಿ ಪ್ರಧಾನಿ ಹೆಚ್ ಡಿ ದೇವೇಗೌಡ ಮತ್ತು ಧರ್ಮಪತ್ನಿ ಚೆನ್ನಮ್ಮ ಜೊತೆ ಇಂದು ಬೆಳಗ್ಗೆ ಮೂಳೂರಿಗೆ ಆಗಮಿಸಿದ್ದಾರೆ. ಇನ್ನು ಸತತ ಐದು ದಿನಗಳ ಚಿಕಿತ್ಸೆ ಪಡೆಯಲಿದ್ದು ಅದರ ಜೊತೆಗೆ ಉಡುಪಿಯ ಕಷ್ಣ ಮಠ ಮತ್ತು ಕೊಲ್ಲೂರಿನ ಮುಕಾಂಭಿಕ ದೇವಸ್ಥಾನಗಳಿಗೆ ಭೇಟಿ ನೀಡಲಿದ್ದಾರೆ.

ಬೆಂಗಳೂರಿನಿಂದ ವಿಮಾನದ ಮೂಲಕ ಮಂಗಳೂರು ವಿಮಾನ ನಿಲ್ದಾಣಕ್ಕೆ ಆಗಮಿಸಿ ನಂತರ ಕಾಪುನಿಲ್ಲಿರುವ ಪ್ರಕೃತಿ ಚಿಕಿತ್ಸಾಲಯಕ್ಕೆ ಬಂದಿದ್ದಾರೆ, ಕಳೆದ ವಾರ ಸಿಎಂ ಕುಮಾರಸ್ವಾಮಿಯವರ ಜೊತೆ ಐದು ದಿನಗಳ ಪ್ರಕೃತಿ ಚಿಕಿತ್ಸೆಯನ್ನು ಪಡೆದಿದ್ದರು.

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.