ಮಂಗಳೂರು: ಇಂದು ಕದ್ರಿ ಪಾರ್ಕ್ ಬಳಿ ಮಹಿಳೆಯ ಬರ್ಬರ ಹತ್ಯೆಯಾಗಿದ್ದು,ರುಂಡ, ದೇಹದ ಭಾಗಗಳು ಗೋಣಿ ಚೀಲದಲ್ಲಿ ಪತ್ತೆಯಾಗಿದೆ.ಘಟನೆ ಭಾನುವಾರ ಬೆಳಗ್ಗೆ ಬೆಳಕಿಗೆ ಬಂದಿದೆ.

ಬೈಕ್‌ನಲ್ಲಿ ಬಂದ‌ ವ್ಯಕ್ತಿಯೋರ್ವ ಕದ್ರಿ ಪಾರ್ಕ್ ಬಳಿಯ ಅಂಗಡಿಯಲ್ಲಿ ಹೆಲ್ಮೆಟ್ ಇರಿಸಿ ಹೋಗಿದ್ದು, ಅಂಗಡಿ‌ ಮಾಲಕ‌ ಪರಿಶೀಲಿಸಿದಾಗ ಸಮೀಪದದಲ್ಲಿ ಮಹಿಳೆಯ ಬೇರ್ಪಟ್ಟ ರುಂಡ ಪತ್ತೆಯಾಗಿದೆ ಮತ್ತು ಕೋಟಿ ಚೆನ್ನಯ ವೃತ್ತದ ಬಳಿ ಗೋಣಿ‌‌‌ ಚೀಲದಲ್ಲಿ‌ ತುಂಬಿಸಿದ ದೇಹದ ಇತರ ಭಾಗಗಳು‌ ಪತ್ತೆಯಾಗಿವೆ ಎಂದು ಪ್ರಕರಣ ದಾಖಲಿಸಿಕೊಂಡು‌ ತನಿಖೆ ನಡೆಸುತ್ತಿರುವ ಕದ್ರಿ ಠಾಣೆ ಪೊಲೀಸರು ತಿಳಿಸಿದ್ದಾರೆ.

ಮಂಗಳೂರಿನ ಕೆ ಪಿ ಟಿ ಬಳಿ ಗೋಣಿ ಚೀಲವೊಂದರಲ್ಲಿ ತುಂಡು ತುಂಡಾದ ಮೃತ ದೇಹ ಹಾಗೂ ಹೆಲ್ಮೆಟ್ ಒಳಗಡೆ ರುಂಡವೊಂದು ಪತ್ತೆಯಾಗಿದೆ.ಬೆಳ್ಳಂಬೆಳಗ್ಗೆ ಇದನ್ನ ಕಂಡ ಸ್ಥಳೀಯರು ಭಯಭೀತರಾಗಿ ಪೊಲೀಸರಿಗೆ ಸುದ್ದಿ ಮುಟ್ಟಿಸಿದ್ದಾರೆ.ಕೆಪಿಟಿ ಬಳಿಯ ಗೂಡಂಗಡಿ ಬಳಿ ಈ ಮೃತ ದೇಹದ ಅವಶೇಷಗಳು ಪತ್ತೆಯಾಗಿದೆ. ಕೊಲೆಯಾಗಿರುವುದು ಮಹಿಳೆಯು ಎಂದು ತಿಳಿದುಬಂದಿದೆ.ಶನಿವಾರ ತಡ ರಾತ್ರಿ ಸುಮಾರು 9.30 ರ ಹೊತ್ತಿಗೆ ಅಕ್ಟೀವಾ ಹೊಂಡಾದಲ್ಲಿ ಬಂದ ವ್ಯಕ್ತಿಯೊಬ್ಬ ಗೋಣಿ ಚೀಲವನ್ನು ಬೀಸಾಡಿ ಹೋಗುವುದನ್ನ ಸ್ಥಳಿಯರೊಬ್ಬರು ಗಮನಿಸಿದ್ದಾರೆ. ಕದ್ರಿ ಪೊಲೀಸರು ತೀವ್ರವಾಗಿ ತನಿಖೆ ನಡೆಸುತ್ತಿದ್ದಾರೆ.

ಶನಿವಾರ ತಡ ರಾತ್ರಿ ಸುಮಾರು 9.30 ರ ಹೊತ್ತಿಗೆ ಅಕ್ಟೀವಾ ಹೊಂಡಾದಲ್ಲಿ ಬಂದ ವ್ಯಕ್ತಿಯೊಬ್ಬ ಗೋಣಿ ಚೀಲವನ್ನು ಬೀಸಾಡಿ ಹೋಗುವುದನ್ನ ಸ್ಥಳಿಯರೊಬ್ಬರು ಗಮನಿಸಿದ್ದಾರೆ. ಕದ್ರಿ ಪೊಲೀಸರು ತೀವ್ರವಾಗಿ ತನಿಖೆ ನಡೆಸುತ್ತಿದ್ದಾರೆ.ಕದ್ರಿ ಪೊಲೀಸ್ ಠಾಣೆಯಲ್ಲಿ ಕೇಸು ದಾಖಲಾಗಿದೆ.

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.