ಕನಕಪುರ:ಇಡಿ ಪ್ರಕರಣದಲ್ಲಿ ಮಾಜಿ ಸಚಿವ ಡಿಕೆ ಶಿವಕುಮಾರ್ ಅವರನ್ನು ಬಂಧಿಸಿದ ಹಿನ್ನಲೆ ಒಕ್ಕಲಿಗರಿಂದ ಬ್ರಹತ್ ಪ್ರತಿಭಟನೆ ಇಂದು ಹಮ್ಮಿಕೊಳ್ಳಲಾಗಿದೆ.

ಬೆಂಗಳೂರಿನಲ್ಲಿ ಒಕ್ಕಲಿಗರ ಬೃಹತ್ ಮೆರವಣಿಗೆಯಲ್ಲಿ ಭಾಗವಹಿಸುವವರಿಗೆ ದಾರಿಯುದ್ದಕ್ಕೂ ಬಿರಿಯಾನಿ ವ್ಯವಸ್ಥೆ ಮಾಡಲಾಗಿದೆ. ಹೊರ ಜಿಲ್ಲೆಗಳಿಂದ ಸುಮಾರು ನಾಲ್ಕು ಸಾವಿರಕ್ಕೂ ಅಧಿಕ ಮಂದಿ ಈ ಪ್ರತಿಭಟನೆಯಲ್ಲಿ ಭಾಗಿಯಾಗಲಿದ್ದು, ಬೆಂಗಳೂರಿನಲ್ಲಿ ಜನ ಸಂಚಾರ ಅಸ್ತವ್ಯಸ್ತಗೊಳ್ಳುವ ಸಾಧ್ಯತೆಗಳಿವೆ. ಹೀಗಿರುವಾಗ ಈ ಬೃಹತ್ ಮೆರವಣಿಗೆಯಲ್ಲಿ ಪಾಲ್ಗೊಳ್ಳುವ ಪ್ರತಿಭಟನಾಕಾರರಿಗೆ ಬಾಡೂಟದ ವ್ಯವಸ್ಥೆ ಮಾಡಲಾಗಿದೆ. ಇದರೊಂದಿಗೆ ಬಿಜೆಪಿಯ ವಿರುದ್ಧ ಭರ್ಜರಿ ಪ್ರತಿಭಟನೆ ದಾಖಲಿಸಲಾಗಿದೆ.

ಒಕ್ಕಲಿಗರ ಪ್ರತಿಭಟನೆ ನೋಡಿ ಬೆಚ್ಚಿ ಬಿದ್ದಿರುವ ರಾಜ್ಯ ಬಿಜೆಪಿ ಡಿಕೆಶಿ ಬಂಧನ ಮಾಡಿ ಸರಿಯಾಗಿ ಸಿಲುಕಿಗೊಂಡಂತಾಗಿದೆ. ಬಿಜೆಪಿ ಕೇಂದ್ರದಲ್ಲಿ ಎರಡನೇ ಬಾರಿ ಅಧಿಕಾರಕ್ಕೆ ಬಂದ ನಂತರ ಇದೀಗ ದ್ವೇಷ ರಾಜಕೀಯ ನಡೆಸುತ್ತಿದೆ ಎಂಬ ಆರೋಪವಿದೆ. ಅಮಿತ್ ಶಾ ಮಗನ ಆಸ್ತಿಯ ಬಗ್ಗೆ ಯಾಕೆ ತನಿಖೆಯಿಲ್ಲವೆಂಬ ಕೂಗು ವ್ಯಾಪಕಗೊಂಡಿದೆ.

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.