ಮೌಂಟ್​ ಮಾಂಗನ್ಯುಯಿ : ನ್ಯೂಜಿಲೆಂಡ್​ ವಿರುದ್ಧದ ಮೂರನೇ ಏಕದಿನ ಪಂದ್ಯದಲ್ಲಿ, ಟೀಮ್ ಇಂಡಿಯಾ 7 ವಿಕೆಟ್​ಗಳಿಂದ ಭರ್ಜರಿ ಜಯ ಸಾಧಿಸಿದೆ. ಅಲ್ಲದೇ ಸರಣಿ ಗೆಲುವಿನ ಕಿರೀಟ ಮುಡಿಗೇರಿಸಿಕೊಂಡಿದೆ. ಈ ಮೂಲಕ 9 ವರ್ಷಗಳ ನಂತರ, ಕಿವೀಸ್ ನಾಡಲ್ಲಿ ಈ ಸಾಧನೆ ಮಾಡಿದೆ. ನ್ಯೂಜಿಲೆಂಡ್ ನೀಡಿದ್ದ 244 ರನ್​ಗಳ ಗುರಿ ಬೆನ್ನಟ್ಟಿದ್ದ ಕೊಹ್ಲಿ ಪಡೆ, ಇನ್ನು 7 ಓವರ್​ ಉಳಿದಿರುವಂತೆಯೇ ಗುರಿ ತಲುಪಿತು. ಅಂಬಟಿ ರಾಯುಡು, ದಿನೇಶ್ ಕಾರ್ತಿಕ್ ತಂಡವನ್ನ ಗೆಲುವಿನ ದಡ ಸೇರಿಸಿದ್ರು. ಹಿಟ್​ಮ್ಯಾನ್ ರೋಹಿತ್ ಶರ್ಮಾ, ಕ್ಯಾಪ್ಟನ್ ವಿರಾಟ್ ಕೊಹ್ಲಿ ಅರ್ಧಶತಕ ಬಾರಿಸುವುದರ ಮೂಲಕ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದರು. ಭಾರತದ ಪರ  ಬೌಲಿಂಗ್​ನಲ್ಲಿ 3 ವಿಕೆಟ್​ ಪಡೆದು ಮಿಂಚಿದ  ಮಹಮ್ಮದ್ ಶಮಿ ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.

ಟಾಸ್​ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಕಿವೀಸ್ 49 ಓವರ್​ಗಳಲ್ಲಿ 243 ರನ್​ಗಳಿಗೆ ಆಲೌಟ್ ಆದರು. ಕಳೆದೆರಡು ಪಂದ್ಯಗಳಂತೆ ಈ ಬಾರಿಯು ತಂಡದ ಆರಂಭಿಕರು, ಉತ್ತಮ ಆರಂಭ ಒದಗಿಸುವಲ್ಲಿ ವಿಫಲರಾದರು. ಇನ್​ ಫಾರ್ಮ್​ ಬ್ಯಾಟ್ಸ್​​ಮನ್, ನಾಯಕ ಕೇನ್​ ವಿಲಿಯಮ್ಸನ್ ಕೂಡ ಬೇಗನೆ ಜಾಗ ಖಾಲಿ ಮಾಡಿದರು. ಆದ್ರೆ ಮಧ್ಯಮ ಕ್ರಮಾಂಕದ ಬ್ಯಾಟ್ಸ್​​ಮನ್​ಗಳಾದ ರಾಸ್ ಟೇಲರ್, ಟಾಮ್ ಲಾಥಮ್ ಅರ್ಧಶತಕ ಸಿಡಿಸಿ ತಂಡ ಗೌರವಯುತ ಮೊತ್ತ ದಾಖಲಿಸುವಲ್ಲಿ ಪ್ರಮುಖ ಪಾತ್ರವಹಿಸಿದರು. ಸಮಯೋಚಿತ ಆಟವಾಡಿದ ಟೇಲರ್​ 93 ರನ್​ಗಳಿಸಿದ್ದಾಗ, ಮಹಮ್ಮದ್ ಶಮಿಗೆ ವಿಕೆಟ್​ ನೀಡಿ ಶತಕ ವಂಚಿರಾದರು. ಭಾರತದ ಪರ ಮಹಮ್ಮದ್ ಶಮಿ 3 ವಿಕೆಟ್ ಪಡೆದರೆ, ಭುವನೇಶ್ವರ್ ಕುಮಾರ್, ಹಾರ್ದಿಕ್ ಪಾಂಡ್ಯ, ಯಜುವೇಂದರ್ ಚಹಾಲ್ ತಲಾ 2 ವಿಕೆಟ್​ ಕಬಳಿಸಿದರು.

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.