ಪೋರ್ಟ್ ಎಲಿಜಬೆತ್ಭಾರತ ತಂಡವು ದಕ್ಷಿಣ ಆಫ್ರಿಕಾದ ನೆಲದಲ್ಲಿ ಮೊಟ್ಟಮೊದಲ ಬಾರಿಗೆ ಏಕದಿನ ಕ್ರಿಕೆಟ್ ಸರಣಿ ಜಯದ ಸಾಧನೆ ಮಾಡಿತು.

ಮಂಗಳವಾರ ರಾತ್ರಿ ಇಲ್ಲಿ ನಡೆದ ಸರಣಿಯ ಐದನೇ ಪಂದ್ಯದಲ್ಲಿ ವಿರಾಟ್ ಕೊಹ್ಲಿ ನಾಯಕತ್ವದ ತಂಡವು 73 ರನ್‌ಗಳಿಂದ ದಕ್ಷಿಣ ಆಫ್ರಿಕಾ ತಂಡವನ್ನು ಸೋಲಿಸಿತು. ಅದರೊಂದಿಗೆ ಆರು ಪಂದ್ಯಗಳ ಸರಣಿಯಲ್ಲಿ 4–1ರಿಂದ ಮುನ್ನಡೆ ಸಾಧಿಸಿತು.

ರೋಹಿತ್ ಶರ್ಮಾ ಶತಕ ಮತ್ತು ಕುಲದೀಪ್ ಯಾದವ್ ಅವರ ಸ್ಪಿನ್ ಮೋಡಿಯಿಂದ ಈ ಐತಿಹಾಸಿಕ ಗೆಲುವು ಒಲಿಯಿತು.ದಕ್ಷಿಣ ಆಫ್ರಿಕಾದಲ್ಲಿ ರೋಹಿತ್ (115, 126ಎ, 11ಬೌಂ, 4ಸಿ) ರನ್‌ ಬರ ನೀಗಿತು. ಚೈನಾಮನ್ ಬೌಲರ್‌ ಕುಲದೀಪ್‌ (57ಕ್ಕೆ4) ಅವರ ಮೋಡಿಗೆ ದಕ್ಷಿಣ ಆಫ್ರಿಕಾ ತಂಡದ ಬ್ಯಾಟ್ಸ್‌ಮನ್‌ಗಳು ತರಗೆಲೆಗಳಂತೆ ಉದುರಿದರು. ಮೊದಲು ಬ್ಯಾಟ್‌ ಮಾಡಿದ ಭಾರತ 50 ಓವರ್‌ಗಳಲ್ಲಿ 7 ವಿಕೆಟ್‌ ಕಳೆದುಕೊಂಡು 274 ರನ್‌ ಕಲೆಹಾಕಿತು.

ಸವಾಲಿನ ಗುರಿ ಬೆನ್ನಟ್ಟಿದ ದಕ್ಷಿಣ ಆಫ್ರಿಕಾ ತಂಡ 42.2 ಓವರ್‌ಗಳಲ್ಲಿ 201 ರನ್‌ ಗಳಿಸುವಷ್ಟರಲ್ಲಿ ಎಲ್ಲಾ ವಿಕೆಟ್ ಕಳೆದುಕೊಂಡಿತು.

ಕುಲದೀಪ್‌, ಪಾಂಡ್ಯ ಮಿಂಚು52 ರನ್‌ಗಳಿಗೆ ಒಂದು ವಿಕೆಟ್ ಕಳೆದುಕೊಂಡು ಉತ್ತಮ ಲಯದೊಂದಿಗೆ ಬ್ಯಾಟ್‌ ಮಾಡುತ್ತಿದ್ದ ದಕ್ಷಿಣ ಆಫ್ರಿಕಾ ಬಳಗ ದಿಡೀರ್‌ ಕುಸಿತ ಅನುಭವಿಸಿತು. ಹಾರ್ದಿಕ್ ಪಾಂಡ್ಯ ಅವರು ಮೇಲಿನ ಕ್ರಮಾಂಕದ ಪ್ರಮುಖ ಬ್ಯಾಟ್ಸ್‌ಮನ್‌ಗಳಾದ ಜೆ.ಪಿ ಡುಮಿನಿ ಹಾಗೂ ಎ.ಬಿ ಡಿವಿಲಿಯರ್ಸ್ ಅವರ ವಿಕೆಟ್ ಪಡೆದು ಭಾರತದ ಬಲ ಹೆಚ್ಚಿಸಿದರು.ಮಧ್ಯಮ ಕ್ರಮಾಂಕದ ಬ್ಯಾಟ್ಸ್‌ಮನ್‌ಗಳು ಕುಲದೀಪ್ ಅವರ ದಾಳಿಗೆ ತತ್ತರಿಸಿದರು. ಹಾಶಿಂ ಆಮ್ಲಾ (71, 92ಎ, 5ಬೌಂ) ಅವರನ್ನು ಬಿಟ್ಟರೆ ಉಳಿದ ಬ್ಯಾಟ್ಸ್‌ಮನ್‌ಗಳು ಹೋರಾಟ ತೋರದೆ ವಿಕೆಟ್ ಒಪ್ಪಿಸಿದರು.

 

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.