ಉಡುಪಿ:ಉಡುಪಿ ಕಾರ್ಪೊರೇಷನ್‌ ಬ್ಯಾಂಕ್ ಪ್ರಾಚೀನ ವಸ್ತು ಸಂಗ್ರಹಾಲಯಕ್ಕೆ ವರ್ಲ್ಡ್ ಬುಕ್ ಆಫ್ ರೆಕಾರ್ಡ್ಸ್‌ ಮನ್ನಣೆ ದೊರೆತಿದೆ.

ರಾಜ ಮಹಾರಾಜರ ಕಾಲದಲ್ಲಿ ಬಳಕೆಯಲ್ಲಿದ್ದ ನಾಣ್ಯಗಳು, ದೇಶ ವಿದೇಶದ ನೋಟುಗಳು, ಸ್ಮರಣೆ ನಾಣ್ಯಗಳ ಸಂಗ್ರಹದ ಒಟ್ಟು ವ್ಯವಸ್ಥೆಗೆ ಸಿಕ್ಕ ಜಾಗತಿಕ ಮಾನ್ಯತೆಯಿಂದಾಗಿ ವಸ್ತು ಸಂಗ್ರಹಾಲಯ ಮತ್ತಷ್ಟು ಎತ್ತರಕ್ಕೇರಲಿದೆ. ಮೂರು ತಿಂಗಳ ಹಿಂದೆ ಸುಪ್ರೀಂಕೋರ್ಟ್ ನ್ಯಾಯವಾದಿ ಸಂತೋಷ್ ಶುಕ್ಲಾ ವಸ್ತು ಸಂಗ್ರಹಾಲಯವನ್ನು ವೀಕ್ಷಿಸಿ, ಖುಷಿ ಪಟ್ಟಿದ್ದು ಮಾತ್ರವಲ್ಲ ಲಂಡನ್ನಿನ ವರ್ಲ್ಡ್ ಬುಕ್ ಆಫ್ ರೆಕಾರ್ಡ್ಸ್‌ಗೆ ಶಿಫಾರಸು ಮಾಡಿದ್ದಾರೆ.

ವರ್ಲ್ಡ್ ಬುಕ್ ಆಫ್ ರೆಕಾರ್ಡ್ಸ್‌ ಅಧ್ಯಕ್ಷರಾದ ಡಾ. ದಿವಾಕರ ಸುಕುವ ಹಾಗೂ ಬ್ರಿಟಿಷ್ ಸಂಸದ ವೀರೇಂದ್ರ ಶರ್ಮಾ ಸಹಿಯೊಂದಿಗೆ ಇ ಮೇಲ್ ಕಳಿಸಿದ್ದು ಮೂಲ ಪ್ರಮಾಣಪತ್ರ ಒಂದು ತಿಂಗಳಲ್ಲಿ ತಲುಪಲಿದೆ. ಕಾರ್ಪ್ ಬ್ಯಾಂಕ್ ಸ್ಥಾಪಕ ಹಾಜಿ ಅಬ್ದುಲ್ಲಾರ ಮನೆಯೇ ಕಾರ್ಪ್ ಬ್ಯಾಂಕ್ ಸ್ಥಾಪಕರ ಶಾಖೆಯಾಗಿದ್ದು 2011ರಲ್ಲಿ ಪ್ರಾಚೀನ ವಸ್ತು ಸಂಗ್ರಹಾಲಯವಾಗಿ ಪರಿವರ್ತಿಸಲಾಗಿದೆ. ನೋಟು ಮತ್ತು ನಾಣ್ಯ ಸಂಗ್ರಾಹಕ ಜಯಪ್ರಕಾಶ್ ರಾವ್ ಅವರಿಂದ ಕಾರ್ಪ್ ಬ್ಯಾಂಕ್ ಅಪೂರ್ವ ನಾಣ್ಯ ಖರೀದಿಸಿ ಇಲ್ಲಿಟ್ಟಿದೆ.

ಎಸ್. ಜಿ. ಕುರ್ಯ, vk news

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.