ಮಂಗಳೂರು : ಅತ್ತಾವರದ ಮನೆಯಲ್ಲಿ ‌ ಕೊಲೆಯಾದ ಕಾಲೇಜು ಹುಡುಗಿಯ ಕೊಲೆ ಆರೋಪಿಯನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.ಚಿಕ್ಕಮಗಳೂರು ಮೂಲದ ವಿದ್ಯಾರ್ಥಿನಿಯೊಬ್ಬಳ ಮೃತದೇಹ ನಗರದ ಪೇಯಿಂಗ್ ಗೆಸ್ಟ್ ನಲ್ಲಿ ಶುಕ್ರವಾರ ಸಂಜೆ ಪತ್ತೆಯಾಗಿದ್ದು, ಪ್ರಕರಣ ಸಂಬಂಧಿಸಿ ಆರೋಪಿಯೋರ್ವನನ್ನು ಬಂಧಿಸಿರುವುದಾಗಿ ಪೊಲೀಸರು ಮಾಹಿತಿ ನೀಡಿದ್ದಾರೆ.

ಬಂಧಿತನನ್ನು ವಿಜಯಪುರ ಜಿಲ್ಲೆಯ ಸಿಂದಗಿ ತಾಲೂಕು ನಿವಾಸಿ ಸಂದೀಪ್ ರಾಥೋಡ್ ಎಂದು ತಿಳಿದುಬಂದಿದೆ. ಶನಿವಾರ ಬೆಳಗ್ಗೆ ಆತನನ್ನು ಸಿಂದ್ಗಿಯಲ್ಲಿ ಬಂಧಿಸಿರುವುದಾಗಿ ಪೊಲೀಸರು ಮಾಹಿತಿ ನೀಡಿದ್ದಾರೆ.

ನಗರದ ಕಾಲೇಜೊಂದರ ವಿದ್ಯಾರ್ಥಿನಿಯಾಗಿರುವ ಚಿಕ್ಕಮಗಳೂರು ಜಿಲ್ಲೆಯ ತರೀಕೆರೆಯ ಮಂಜುನಾಥ ವೈ.ಎನ್. ಎಂಬವರ ಪುತ್ರಿ ಅಂಜನಾ ವಶಿಷ್ಟ (22) ಎಂಬಾಕೆಯ ಮೃತದೇಹ ಅತ್ತಾವರ ಮೆಡಿಕಲ್ ಕಾಲೇಜೊಂದರ ಬಳಿಯ ಪೇಯಿಂಗ್ ಗೆಸ್ಟ್ ನಲ್ಲಿ ಶುಕ್ರವಾರ ಸಂಜೆ ಪತ್ತೆಯಾಗಿತ್ತು.ಈಕೆಯ ಬಳಿ ಇದ್ದ ಆಧಾರ್ ಕಾರ್ಡ್‌ನ ಆಧಾರದ ಮೇಲೆ ಗುರುತು ಪತ್ತೆ ಹಚ್ಚಲಾಗಿತ್ತು.ಇದು ಕೊಲೆ ಎಂದು ಪೊಲೀಸರಿಗೆ ಅನುಮಾನ ವ್ಯಕ್ತಪಡಿಸಿದ್ದರು.ತನಿಖೆ ಮಾಡುತ್ತಿರುವಾಗ ಕೊಲೆ ಮಾಡಿದ ವ್ಯಕ್ತಿಯ ಪತ್ತೆಯಾಯಿತು. ಇಂದು ಕೊಲೆಗಾರನ ಸಿಂದಗಿಯಲ್ಲಿ ಪೊಲೀಸರು ಬಂಧಿಸಿದ್ದಾರೆ.ಸಂದೀಪ್ ರಾಥೋಡ್‌ ಅಂಜನಾಳನ್ನು ಕೊಲ್ಲಲು ಕಾರಣವೇನು ಎಂಬುದು ವಿಚಾರಣೆಯ ನಂತರ ತಿಳಿದು ಬರಲಿದೆ.ಆತನನ್ನು ಬಂಧಿಸಿ ಮಂಗಳೂರಿಗೆ ಕರೆತರುತ್ತಿದ್ದಾರೆಂದು ಪೊಲೀಸರು ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.