ಪತ್ರಿಕಾ ಧರ್ಮವನ್ನು ಪಾಲಿಸೋ ಪತ್ರಿಕೆಗಳು, ಪತ್ರಿಕಾ ಧರ್ಮ ಪಾಲಿಸದ ಮಾಧ್ಯಮಗಳಿಂದ ಒತ್ತಡಕ್ಕೆ ಒಳಗಾಗುತ್ತಿರುವುದನ್ನು ಕಾಣುತ್ತಿದ್ದೇವೆ. ಮುಖ್ಯ ಸುದ್ದಿ ಯಾವುದು, ರಂಜನೆ ಇರುವ ಸುದ್ದಿಗಳು ಮಾತ್ರ ಮುಖ್ಯ ಸುದ್ದಿಗಳ ಎಂಬ ಒಂದು ರೀತಿಯ ಗೊಂದಲ ವ್ಯಕ್ತವಾಗುತ್ತಿದೆ. ಇವತ್ತಿಗೂ ಸುಳ್ಳಿನ ವಿರುದ್ದ ಅಂತರ್ಜಾಲ ಮಾಧ್ಯಮಗಳು ತಮ್ಮ ಪ್ರಭಾವ ಬೀರಿ ಸತ್ಯವನ್ನು ಪ್ರಚಾರಗೊಳಿಸುವ ಕೆಲಸವಾಗುತ್ತಿದೆ. ಉತ್ತಮ ಕೆಲಸಗಳನ್ನು ಮಾಡಲಿ, ರಂಜನೆಯಿಲ್ಲದ ಸತ್ಯ ಮತ್ತು ಜನಪರ ಸುದ್ದಿಗಳು ಮೂಡಿ ಬರಲಿಯೆಂದು ಪ್ರಜಾವಾಣಿಯ ಉಡುಪಿ ಜಿಲ್ಲಾ ಪ್ರತಿನಿಧಿ ನವೀನ್ ಕೊಸ್ಟಲ್ ಮಿರರ್ ವೆಬ್ಸೈಟ್ ನ್ನು ಉದ್ಘಾಟಿಸಿ ಮಾತನಾಡಿದರು.

ಪತ್ರಕರ್ತ ಸಂಘದ ಕಾರ್ಯದರ್ಶಿ ಮೈಕಲ್ ಸಾಸ್ತಾನ್ ಮಾತನಾಡಿ ಕೊಸ್ಟಲ್ ಮಿರರ್ ಗೆ ಶುಭ ಹಾರೈಸಿದರು. ಎ.ಪಿ.ಸಿ.ಆರ್ ಜಿಲ್ಲಾ ಸಂಚಾಲಕರಾದ ಹುಸೇನ್ ಕೋಡಿಬೆಂಗ್ರೆ ಮಾತನಾಡಿ ಕೊಸ್ಟಲ್ ಮಿರರ್ ಸತ್ಯದ ಧ್ವನಿಯಾಗುವಲ್ಲಿ ಮಹತ್ತರವಾದ ಪಾತ್ರ ವಹಿಸಲಿ ಎಂದು ಶುಭ ಹಾರೈಸಿದರು.

ಯಾಸೀನ್ ಕೋಡಿಬೆಂಗ್ರೆ ಪ್ರಸ್ತಾವಿಕವಾಗಿ ಮಾತನಾಡಿ ಸ್ವಾಗತ ಕೋರಿದರು.ಕಾರ್ಯಕ್ರಮದಲ್ಲಿ ವಾರ್ತಾಭಾರತಿ ಪತ್ರಿಕೆಯ ಜಿಲ್ಲಾ ಪ್ರತಿನಿಧಿ ನಝೀರ್ ಪೊಲ್ಯ, ಕೊಸ್ಟಲ್ ಮಿರರ್ ಶಾರೂಕ್ ತೀರ್ಥಳ್ಳಿ, ಮುಹಮ್ಮದ್ ಝಕಿ, ಅಫ್ವಾನ್ ಹೂಡೆ ಹಾಗೂ ಬಿಲಾಲ್ ಮಲ್ಪೆ ಉಪಸ್ಥಿತರಿದ್ದರು.
ಕೊಸ್ಟಲ್ ಮಿರರ್ ತಂಡದ ಪ್ರತಿನಿಧಿ ಪ್ರಶಾಂತ್ ಕಾರ್ಯಕ್ರಮ ನಿರೂಪಿಸಿದರು.

LEAVE A REPLY

Please enter your comment!
Please enter your name here