ಕರಾವಳಿ “ಈಶ್ವರ ಅಲ್ಲಾ ತೇರೋ ನಾಮ್” ನಾಳೆಯಿಂದ ಕುಂದಾಪುರದಲ್ಲಿ ಕಾರ್ಟೂನ್ ಹಬ್ಬ

“ಈಶ್ವರ ಅಲ್ಲಾ ತೇರೋ ನಾಮ್” ನಾಳೆಯಿಂದ ಕುಂದಾಪುರದಲ್ಲಿ ಕಾರ್ಟೂನ್ ಹಬ್ಬ

-

ಜಾಹೀರಾತು

ಜಾಹೀರಾತು

ಕುಂದಾಪುರ : ಖ್ಯಾತ ವ್ಯಂಗ್ಯ ಚಿತ್ರಗಾರ ಸತೀಶ್ ಆಚಾರ್ಯರವರು ನಡೆಸಿಕೊಂಡುಬರುವ ಕಾರ್ಟೂನ್ ಹಬ್ಬ ನವೆಂಬರ್ 23 ರಿಂದ 26 ರ ವರೆಗೆ ಕುಂದಾಪುರದ ಕಲಾಮಂದಿರಲ್ಲಿ ನಡೆಯುತ್ತಲಿದ್ದು ಈ ಬಾರಿ ಮಹಾತ್ಮಾ ಗಾಂಧಿಜೀ ಯವರ ಜನ್ಮ ವರ್ಷಾಚರಣೆಯ ಪ್ರಯುಕ್ತ “ಈಶ್ವರ ಅಲ್ಲಾ ತೇರೋ ನಾಮ್ “ ಎಂಬ  ಶೀರ್ಷಿಕೆಯಡಿಯಲ್ಲಿ ಮೂರು ದಿನಗಳ ಕಾರ್ಯಕ್ರಮ ನಡೆಯಲಿದ್ದು, ಕಾರ್ಯಕ್ರಮದ ಉದ್ಘಾಟನೆಯನ್ನು ನಟ, ನಿರ್ಮಾಪಕ ರಿಷಬ್ ಶೆಟ್ಟಿ ಉದ್ಘಾಟಿಸಲಿದ್ದು ಮುಖ್ಯ ಅತಿಥಿಗಳಾಗಿ ಗಾಂಧಿ ಅಧ್ಯಾಯನ ಕೇಂದ್ರ ಮಣಿಪಾಲ ಇದರ ನಿರ್ದೇಶಕರಾದ ವರದೇಶ್ ಹಿರೇಗಂಗೆ, ಮಾಜಿ ಐಪಿಎಸ್ ಅಧಿಕಾರಿ ಅಣ್ಣಾ ಮಲೈ, ಕುಪ್ಪುಸ್ವಾಮಿ, ರಾಷ್ಟ್ರ ಪ್ರಶಸ್ತಿ ವಿಜೇತ ಸಿನಿಮಾ ನಿರ್ದೇಶಕ ಯಾಕೂಬ್ ಗುಲ್ವಾಡಿ ಸೇರಿದಂತೆ ಅನೇಕ ಗಣ್ಯರು ಭಾಗವಹಿಸಲಿದ್ದಾರೆ. ಮಧ್ಯಾಹ್ನ ಮಾಯಾ ಕಾಮತ್ ಸ್ಮರಣಾರ್ಥ ಕಾರ್ಟೂನ್ ಸ್ಪರ್ಧೆ ನಡೆಯಲಿದ್ದು ಡಾ. ಪಿ.ವಿ ಭಂಡಾರಿ, ಡಾ. ಜಯಪ್ರಕಾಶ ಶೆಟ್ಟಿ, ನಾರಾಯಣ ಐತಾಳ ಸಭಾ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದು ಕ್ರಿಕೆಟ್ ತರಬೇತುದಾರ ವಿಜಯ್ ಆಳ್ವ ಅವರನ್ನು ಸನ್ಮಾನಿಸಲಾಗುತ್ತದೆ.

ಭಾನುವಾರ ನವೆಂಬರ್ 24 ಭಾನುವಾರ ಬೆಳಿಗ್ಗೆ ಕಾರ್ಟೂನ್ ಹಬ್ಬದ ಪ್ರತಿ ವರ್ಷದ ವಿಶೇಷ ಕಾರ್ಯಕ್ರಮ ಮಾಸ್ಟರ್ ಸ್ಟ್ರೋಕ್ಸ್ ನಡೆಯಲಿದ್ದು  ಹಿಂದೂ ಪತ್ರಿಕೆಯ ಹಿರಿಯ ವ್ಯಂಗ್ಯಚಿತ್ರಕಾರ ಸುರೇಂದ್ರ ಉದ್ಘಾಟಿಸಲಿದ್ದಾರೆ. ಪ್ರಸಿದ್ಧ ಕಲಾವಿದ ಚಂದ್ರನಾಥ ಆಚಾರ್ಯ ಮತ್ತು ಹಿರಿಯ ವ್ಯಂಗ್ಯಚಿತ್ರಕಾರರಾದ ವಿ. ಜಿ. ನರೇಂದ್ರ ಮಾಸ್ಟರ್ ವ್ಯಂಗ್ಯಚಿತ್ರಕಾರರಾಗಿ ಉಪಸ್ಥಿತರಿರುತ್ತಾರೆ. ಅಂದಿನ ಕಾರ್ಯಕ್ರಮದಲ್ಲಿ ಸ್ಟ್ರೀಟ್ ಆರ್ಟ್ ಖ್ಯಾತಿಯ ಬಾದಲ್ ನಂಜುಂಡಸ್ವಾಮಿ ಮತ್ತು ವ್ಯಂಗ್ಯಚಿತ್ರಕಾರರಾದ ದತ್ತಾತ್ರಿ ಎಂ.ಎನ್ ಹಾಗೂ ನಂಜುಂಡಸ್ವಾಮಿ ಅವರನ್ನು ಸನ್ಮಾನಿಸಲಾಗುತ್ತದೆ. ಈ ಕಾರ್ಯಕ್ರಮಕ್ಕೆ ಕುಂದಾಪುರ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಸಹಯೋಗವಿದೆ.

ಅಂದು ಸಂಜೆ 4 ಗಂಟೆಗೆ ಚಿತ್ರನಿಧಿ ಹಾಗೂ ವಿವಿಧ ವ್ಯಂಗ್ಯಚಿತ್ರ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿ-ವಿದ್ಯಾರ್ಥಿನಿಯರಿಗೆ ಬಹುಮಾನ ವಿತರಣೆ ನಡೆಯಲಿದೆ. ಕುಂದಾಪುರದ ಭಾರತೀಯ ವೈದ್ಯಕೀಯ ಸಂಘ-ಐಎಂಎ ಸಹಯೋಗದಲ್ಲಿ ನಡೆಯಲಿರುವ ಈ ಕಾರ್ಯಕ್ರಮವನ್ನು ಬ್ರಹ್ಮಾವರದ ಲಿಟ್ಲ್‌ರಾಕ್ ಇಂಡಿಯನ್ ಸ್ಕೂಲ್‌ನ ನಿರ್ದೇಶಕರಾದ ಪ್ರೊ. ಮ್ಯಾಥ್ಯೂ ಸಿ. ನೈನಾನ್ ಉದ್ಘಾಟಿಸಲಿದ್ದಾರೆ. ಮಣೀಪಾಲದ ಕೆಎಂಸಿಯ ಡಾ. ರವೀಂದ್ರ ಮುನೋಳಿ, ಡಾ. ಶ್ರಿದೇವಿ ಕಟ್ಟೆ, ಡಾ. ಪ್ರಮೀಳಾ ನಾಯಕ್ ಮುಖ್ಯ ಅತಿಥಿಗಳಾಗಿದ್ದು ಪತ್ರಕರ್ತ ಜಾನ್ ಡಿಸೋಜಾ ಅವರನ್ನು ಸನ್ಮಾನಿಸಲಾಗುತ್ತದೆ.

ನವೆಂಬರ್ 25 ಸೋಮವಾರ ಬೆಳಿಗ್ಗೆ 10 ಗಂಟೆಗೆ ಕಾರ್ಟೂನಾಸಕ್ತ ವಿದ್ಯಾರ್ಥಿಗಳು ಮತ್ತು ಸಾರ್ವಜನಿಕರಿಗಾಗಿ ಎಡಿಟೂನ್ಸ್- ಪ್ರಾಯೋಗಿಕ ಕಾರ್ಟೂನು ಕಾರ್ಯಾಗಾರ ನಡೆಯಲಿದೆ. ಈ ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಗಳಾಗಿ ಹಿರಿಯ ಪತ್ರಕರ್ತ ಮತ್ತು ಔಟ್‌ಲುಕ್ ಪತ್ರಿಕೆಯ ಮಾಜಿ ಸಂಪಾದಕ ಕೃಷ್ಣ ಪ್ರಸಾದ್, ಹಿರಿಯ ವ್ಯಂಗ್ಯಚಿತ್ರಕಾರ ಬಿ. ಜಿ. ಗುಜ್ಜಾರಪ್ಪ, ಹಿರಿಯ ಪತ್ರಕರ್ತ ಎಸ್. ಆರ್. ರಾಮಕೃಷ್ಣ, ಸುರೇಂದ್ರ ಮತ್ತು ಸತೀಶ ಆಚಾರ್ಯ ಪಾಲ್ಗೊಳ್ಳಲಿದ್ದು ನಿಟ್ಟೆ ಇನ್ಸ್‌ಟಿಟ್ಯೂಟ್ ಆಫ್ ಕಮ್ಯೂನಿಕೇಶನ್‌ನ ಮುಖ್ಯಸ್ಥ ರವಿರಾಜ್ ಕಿಣಿ ಮುಖ್ಯ ಅತಿಥಿಯಾಗಿ ಆಗಮಿಸಲಿದ್ದಾರೆ.

ನವೆಂಬರ್ 26 ಮಂಗಳವಾರ ಸಂಜೆ ಕುಂದಾಪುರ ಕನ್ನಡದ ಹಾಸ್ಯ ದಿಗ್ಗಜರಾದ ಮನು ಹಂದಾಡಿ, ಚೇತನ್ ನೈಲಾಡಿ, ಸಂದೇಶ ಶೆಟ್ಟಿ ಮುಂತಾದವರ ಉಪಸ್ಥಿತಿಯಲ್ಲಿ ನಿಂತ್ಕ ಕಾಮಿಡಿ ಕೂತ್ಕ ನಗಾಡಿ ಎಂಬ ಕುಂದಾಪ್ರ ಕನ್ನಡ ಕಾಮಿಡಿ ಸ್ಪರ್ಧೆ ನಡೆಯಲಿದೆ.

LEAVE A REPLY

Please enter your comment!
Please enter your name here

Latest news

ವಿವಾದಾತ್ಮಕ ಪೌರತ್ವ ತಿದ್ದುಪಡಿ ಮಸೂದೆ ಮಂಡಿಸಿದ ಅಮಿತ್ ಶಾ ; ವ್ಯಾಪಕ ವಿರೋಧ

ನವದೆಹಲಿ: ವಿವಾದಾತ್ಮಕ ಪೌರತ್ವ (ತಿದ್ದುಪಡಿ) ಮಸೂದೆಯನ್ನು ಗೃಹ ಸಚಿವ ಅಮಿತ್ ಶಾ ಅವರು ಇಂದು ಸಂಸತ್ತಿನಲ್ಲಿ ಮಂಡಿಸಿದರು. ಈ ಮಸೂದೆಯು ಸಂವಿಧಾನದ 14 ನೇ ವಿಧಿಯನ್ನು...

ಸಿದ್ಧರಾಮಯ್ಯ ಪಕ್ಷದ ಶಾಸಕಾಂಗ ನಾಯಕನ ಸ್ಥಾನಕ್ಕೆ ರಾಜೀನಾಮೆ!

ಬೆಂಗಳೂರು :ಉಪಚುನಾವಣೆಯಲ್ಲಿ ಕಾಂಗ್ರೆಸ್ ಎರಡು ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿದ್ದು, ಪಕ್ಷದ ಹೀನಾಯ ಸೋಲಿನ ಹಿನ್ನೆಲೆಯಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ತಮ್ಮ ಶಾಸಕಾಂಗ ಪಕ್ಷದ ನಾಯಕನ ಸ್ಥಾನಕ್ಕೆ...

ಹೂಡೆಯ ಸಾಲಿಹಾತ್ ಶಾಲೆ: ಉಡುಪಿ ಅಂತರ್ ಶಾಲಾ ಮಟ್ಟದ ವಿಜ್ಞಾನ ಮೇಳ

ತೋನ್ಸೆ - ಹೂಡೆಯ ಸಾಲಿಹಾತ್ ಶಾಲಾ ಕ್ರೀಡಾಂಗಣದಲ್ಲಿ ಇತ್ತೀಚೆಗೆ ಎ.ಜೆ.ಅಕಾಡಮಿ ರಾಯಚೂರು ಹಾಗೂ ಸಾಲಿಹಾತ್ ಶಿಕ್ಷಣ ಸಂಸ್ಥೆ ಇವರುಗಳ ಜಂಟಿ ಆಶ್ರಯದಲ್ಲಿ ಉಡುಪಿ ಅಂತರ್ ಶಾಲಾ...

ಕೊನೆಗೂ ಗೆದ್ದ ರಿಜ್ವಾನ್ ಅರ್ಷದ್; ರೋಶನ್ ಬೇಗ್’ಗೆ ಮುಖಭಂಗ

ಬೆಂಗಳೂರು: ಈ ಬಾರಿ ಶಿವಾಜಿ ನಗರದ ಉಪ ಚುನಾವಣೆ ಬಹಳಷ್ಟು ಕುತೂಹಲ ಹುಟ್ಟಿಸಿತ್ತು. ರೋಶನ್ ಬೇಗ್ ರಿಜ್ವಾನ್ ಅರ್ಷದ್ ಅವರನ್ನು ಸೋಲಿಸುವ ಪಣ ತೊಟ್ಟಿದ್ದರು. ಇದೀಗ...
- Advertisement -

ಕಾಂಗ್ರೆಸ್ ನಾಯಕರೇ ಪಕ್ಷವನ್ನು ಕೆಳಗುರುಳಿಸಿದ್ದಾರೆ – ಜನಾರ್ದನ ಪೂಜಾರಿ

ಮಂಗಳೂರು: ಬಿಜೆಪಿಯ ಗೆಲುವಿನ ಬಗ್ಗೆ ಮೊದಲೇ ಗ್ರಹಿಸಿದ್ದೇನೆ ಎಂದು ಹಿರಿಯ ಕಾಂಗ್ರೆಸ್ ಮುಖಂಡ ಜನಾರ್ಧನ್ ಪೂಜಾರಿ ಸೋಮವಾರ ಪತ್ರಿಕಾಗೋಷ್ಟಿಯಲ್ಲಿ ಹೇಳಿದ್ದಾರೆ. ಕರ್ನಾಟಕ ಉಪಚುನಾವಣೆ ಫಲಿತಾಂಶಗಳ ಕುರಿತು ಪತ್ರಿಕಾಗೋಷ್ಠಿಗಳನ್ನುದ್ದೇಶಿಸಿ...

ಅನರ್ಹರಿಗೆ ಜನ ಮತ; ಬಿಜೆಪಿ ಸರಕಾರ ಭದ್ರ

ಬೆಂಗಳೂರು: ಹದಿನೈದು ಕ್ಷೇತ್ರಗಳಿಗೆ ನಡೆದ ಉಪ ಚುನಾವಣೆಯಲ್ಲಿ ಬಿಜೆಪಿ ಭರ್ಜರಿ ನಿರ್ವಹಣೆ ನೀಡಿದ್ದು ಹನ್ನೆರಡು ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿದೆ. ಕಾಂಗ್ರೆಸ್ ಕೇವಲ ಎರಡು ಕ್ಷೇತ್ರಗಳಲ್ಲಿ ಗೆಲುವು...

Must read

ಆರಾಧನ ಸ್ಥಳ (ವಿಶೇಷ ಕಾಯಿದೆ) – 1991 ಯ ಸುತ್ತ ಮುತ್ತ.

ಲೇಖಕರು: ಯಾಸೀನ್ ಕೋಡಿಬೆಂಗ್ರೆ (ಕಾನೂನು ಪದವೀಧರ ಮತ್ತು ರಾಜಕೀಯ ಶಾಸ್ತ್ರ, ಸ್ನಾತ್ತಕೋತರ...
- Advertisement -

You might also likeRELATED
Recommended to you