ಹೂಡೆ: ಕೋಸ್ಟಲ್ ಮಿರರ್; ನಾಗರಿಕರಲ್ಲಿ ಸ್ವಚ್ಚತೆಯ ಬಗ್ಗೆ ಜಾಗೃತಿ ಮೂಡಿಸಲು ಇಂದು ಸ್ವತಃ ಮಕ್ಕಳು ಹಿರಿಯರೊಂದಿಗೆ ಸ್ವಚ್ಚತಾ ಕಾರ್ಯಕ್ರಮಕ್ಕೆ ಇಳಿದರು. ಹ್ಯುಮಾನ್ ರಿಲೀಫ್ ಸೊಸೈಟಿ ಹಮ್ಮಿಕೊಂಡ ಸ್ವಚ್ಚತಾ ಕಾರ್ಯಕ್ರಮದಲ್ಲಿ ಸಾಲಿಹಾತ್ ಶಾಲೆಯ ಪುಟಾಣಿ ವಿದ್ಯಾರ್ಥಿಗಳು ಸ್ವಯಂ ಪ್ರೇರಣೆಯಿಂದ ಬೀದಿಗಿಳಿದು ಸ್ವಚ್ಚಗೊಳಿಸಿದರು. ಸಾರ್ವಜನಿಕರು ರಸ್ತೆಯ ಇಕ್ಕೆಲಗಳಲ್ಲಿ ಪ್ಯಾಂಪರ್ ಸಹಿತ ಹಲವಾರು ತ್ಯಾಜ್ಯವನ್ನು ಎಸೆದಿದ್ದರು ಇದನ್ನು ಕಂಡ ಪುಟಾಣಿಗಳು ಸ್ವತಃ ಸ್ವಚ್ಛಗೊಳಿಸಿ ನಾಗರಿಕರಲ್ಲಿ ಸ್ವಚ್ಚತೆಯ ಬಗ್ಗೆ ಅರಿವು ಮೂಡಿಸಿರುವುದು ವಿಶೇಷವಾಗಿದೆ. ಇನ್ನಾದರೂ ತ್ಯಾಜ್ಯವನ್ನು ರಸ್ತೆಯ ಇಕ್ಕೆಲಗಳಲ್ಲಿ ಎಸೆಯದೆ ಸೂಕ್ತ ವ್ಯವಸ್ಥೆಯೊಂದಿಗೆ ವಿಲೇವಾರಿ ಮಾಡಲು ಮನವಿ ಮಾಡಿದ್ದಾರೆ.

 

 

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.