ಮಂಗಳೂರು: ಮಳೆಯಿಂದಾಗಿ ಕುಸಿದಿದ್ದ ಚಾರ್ಮಾಡಿ ಘಾಟ್ ರಸ್ತೆಯನ್ನು ದುರಸ್ತಿಯ ನಂತರ ಇದೀಗ ಲಘು ವಾಹನ ಸಂಚಾರವನ್ನು ಭಾನುವಾರದಿಂದ ಕೆಲವು ನಿಬಂಧನೆಗಳೊಂದಿಗೆ ಮುಂದಿನ ಆದೇಶದವರೆಗೆ ಮುಕ್ತಗೊಳಿಸಲು ದ.ಕ.ಜಿಲ್ಲಾಧಿಕಾರಿಯವರು ಆದೇಶ ಹೊರಡಿಸಿರುತ್ತಾರೆ.

ಕಾರು, ಜೀಪು, ಟೆಂಪೋ, ವ್ಯಾನ್, ಲಘು ಸರಕು ಸಾಗಾಟ ವಾಹನ (ಮಿನಿ ವ್ಯಾನ್) ದ್ವಿಚಕ್ರ ವಾಹನಗಳು ಹಾಗೂ ಆಂಬ್ಯುಲೆನ್ಸ್ ಗಳು ಮಾತ್ರ ಈ ರಸ್ತೆಯಲ್ಲಿ ಸಂಚರಿಸಲು ಸದ್ಯಕ್ಕೆ ಜಿಲ್ಲಾಡಳಿತ ಅನುಮತಿ ನೀಡಿದೆ..

ಮೇಲೆ ನಮೂದಿಸಿದ ಈ ಮಾದರಿಯ ವಾಹನಗಳು ಪ್ರತಿ ದಿನ ಬೆಳಗ್ಗೆ 6 ರಿಂದ ಸಂಜೆ 6ರವರೆಗೆ ಮಾತ್ರ ಈ ರಸ್ತೆಯಲ್ಲಿ ಸಂಚರಿಸಲು ಅವಕಾಶವಿದ್ದು, ಇವುಗಳ ವೇಗದ ಮಿತಿಯನ್ನು ಪ್ರತಿ ಘಂಟೆಗೆ 20 ಕಿ.ಮೀ. ಗಳಿಗೆ ನಿಗದಿಗೊಳಿಸಲಾಗಿದೆ.

ವಾಹನ ಸವಾರರು ಬಹಳ ಎಚ್ಚರಿಕೆಯಿಂದ ವಾಹನ ಚಲಾಯಿಸುವಂತೆ ವಿನಂತಿಸಲಾಗಿದೆ.

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.