‘ಚಪಾಕ್’ ಮಾನವೀಯತೆ ಬಡಿದೆಬ್ಬಿಸುವ ಸಿನಿಮಾ!

0
171

ದೀಪಿಕಾ ಪಡುಕೋಣೆ ನಿರ್ಮಾಣದ ಮೇಘಾನ ಗುಲ್ಜಾರ್ ನಿರ್ದೇಶನದ ಚಪಾಕ್ ಸಿನಿಮಾ ಲಕ್ಷ್ಮಿ ಅಗರ್ವಾಲ್ ಎಂಬ ಯುವತಿಯು ಆ್ಯಸಿಡ್ ದಾಳಿಯಿಂದಾಗಿ ಅನುಭವಿಸಿದ ನೋವು,ಒಂದು ಕ್ಷಣದ ಆ್ಯಸಿಡ್ ದಾಳಿ ಸಂತ್ರಸ್ಥೆಯ ಬದುಕು ಕಸಿದು ಕೊಳ್ಳುವ ಪರಿ, ನಂತರದ ಹೋರಾಟ, ದಾಳಿಯ ನಂತರ ಆಕೆಯ ಮೇಲೆ ಹಾಗೂ ಕುಟುಂಬದವರೊಂದಿಗೆ ಸಮಾಜ ನಡೆದುಕೊಳ್ಳುವ ರೀತಿಯ ಬಗ್ಗೆ ಕೇಂದ್ರಿಕೃತವಾಗಿದೆ.

ಚಪಾಕ್ ಸಿನಿಮಾದಲ್ಲಿ ದೀಪಿಕಾ ಪಡುಕೋಣೆ ಮಾಲತಿಯಾಗಿ ಪ್ರಮುಖ ಪಾತ್ರ ನಿರ್ವಹಿಸಿದ್ದು ಇವರ ನಟನೆ ಅದ್ಬುತವಾಗಿ ಮೂಡಿ ಬಂದಿದ್ದು, ನೋವು, ನಗು ಎಲ್ಲವೂ ಕೂಡ ಪ್ರೇಕ್ಷಕರಾಗಿ ನಾವು ಅನುಭವಕ್ಕೆ ಬರುತ್ತದೆ.

ಈ ಸಿನಿಮಾ ದೇಹಕ್ಕಿಂತ ಮನಸ್ಸಿನ ಸೌಂದರ್ಯದ ಬಗ್ಗೆ ಮಾತನಾಡುತ್ತದೆ. ಅದರೊಂದಿಗೆ ಒರ್ವ ಆ್ಯಸಿಡಿ ದಾಳಿಗೊಳಗಾದ ಮೇಲೆ ಆಕೆಯೊಂದಿಗೆ ಸಮಾಜ ಯಾವ ರೀತಿ ವರ್ತಿಸುತ್ತದೆ.‌ಆ್ಯಸಿಡ್ ಹಾಕಿದವನ ವರ್ತನೆ, ಆತನ ಮನೆಯವರ ವರ್ತನೆ ಇದೆಲ್ಲವನ್ನು ತೋರಿಸುವ ಪ್ರಯತ್ನವನ್ನು ಸಿನಿಮಾದಲ್ಲಿ ಮಾಡಲಾಗಿದೆ.

ಅದರೊಂದಿಗೆ ಇಂತಹ ಕೃತ್ಯಕ್ಕೆ ಧರ್ಮದ ಲೇಬಲಿಲ್ಲ ಎಂಬ ವಿಚಾರವನ್ನು ಕೂಡ ಅತೀ ಸೂಕ್ಷ್ಮವಾಗಿ ತೋರಿಸುವ ಪ್ರಯತ್ನ ಚಿತ್ರ ತಂಡ ಮಾಡಿದ್ದು ಮಾಲತಿಯನ್ನು ಪ್ರೀತಿಸುತ್ತಿದ್ದ ಬಶೀರ್ ಖಾನ್ ಯಾನೆ ಬಬ್ಬು ಮಾಲತಿ ಮತ್ತು ರಾಜೇಶ್ ಶರ್ಮಾ ನಡುವಿನ ಪ್ರೀತಿ ಸಂಬಂಧದಿಂದ ಬೆಸೆತ್ತು ಈ ಅಮಾನುಷ ಕೃತ್ಯ ಎಸಗುತ್ತಾನೆ. ನಂತರ ಮಾಲತಿ ಮಹಿಳಾ ವಕೀಲರ ಮುಖಾಂತರ ಬಬ್ಬುಗೆ ಶಿಕ್ಷೆ ಕೊಡಿಸುವಲ್ಲಿ ಮತ್ತು ಆ್ಯಸಿಡಿ ದಾಳಿಗೆ ಶಿಕ್ಷೆ ಹೆಚ್ಚಿಸಲು ಕಾನೂನಿನಲ್ಲಿ ತಿದ್ದುಪಡಿಗಾಗಿ ಹೋರಾಟ, ಅದರೊಂದಿಗೆ ಆ್ಯಸಿಡಿ ದಾಳಿಗೊಳಗಾಗದ ಮರ್ದಿತರಿಗಾಗಿ ಕೆಲಸ ಮಾಡುವ ಎನ್.ಜಿ.ಓಯೊಂದಿಗೆ ಸೇರಿ ಅವರಿಗಾಗಿ ಕೆಲಸ ನಿರ್ವಹಿಸುವ ಪರಿ. ಅಲ್ಲಿ ವಿವಿಧ ಪ್ರಕರಣಗಳ ಪರಿಚಯ ಮೇಲ್ಜಾತಿಯವರಿಂದ ಶೋಷಿತ ಜಾತಿಯ ಹೆಣ್ಣು ಮಕ್ಕಳ ಮೇಲೆ ಆ್ಯಸಿಡ್ ಎಸೆದ ಪ್ರಕರಣ ಹೀಗೆ ಆ್ಯಸಿಡ್ ದಾಳಿಯ ಕರಾಳ ಮುಖವನ್ನು ಬಿಡಿ ಬಿಡಿಯಾಗಿ ಈ ಚಿತ್ರ ಬಿಡಿಸಿ ಇಡುವ ಪ್ರಯತ್ನ ಮಾಡುತ್ತದೆ.

ಈ ಸಿನಿಮಾದಲ್ಲಿ ಮಾಲತಿ ತನ್ನ ಮೇಲಾದ ದೌರ್ಜನ್ಯ ಇನ್ಯಾರ ಮೇಲೂ ಆಗಬಾರದೆಂದು ಆ್ಯಸಿಡ್ ಮಾರಾಟದ ಮೇಲೆ ನಿರ್ಬಂಧ ಹಾಕಲು ಕೋರ್ಟ್ ನಲ್ಲಿ ದಾವೆ ಹೂಡುವುದು, ಅವರಿಗೆ ಇಬ್ಬರು ಮಹಿಳಾ ವಕೀಲರು ಜೊತೆಯಾಗಿ ನಿಲ್ಲುವುದು, ಸತತ ಹೋರಾಟದ ನಂತರ ಅದರಲ್ಲೂ ಜಯಿಸುವುದು ಇದೆಲ್ಲವೂ ಕೂಡ ಆಕೆಯ ಹೋರಾಟದ ಬದುಕನ್ನು ಎತ್ತಿ ತೋರಿಸುತ್ತದೆ.

ಸಿನಿಮಾದಲ್ಲಿ ಎನ್.ಜಿ.ಓ ಒಂದರ ಪ್ರಮುಖ ಹೋರಾಟಗಾರರಾಗಿ ನಟ ವಿಕ್ರಂತ್ ಮೆಸ್ಸೆಯವರು ‘ಅಮೋಲ್’ ಪಾತ್ರದಲ್ಲಿ ನಟಿಸಿದ್ದಾರೆ. ಇವರ ಪಾತ್ರ ಕೂಡ ಸಿನಿಮಾದಲ್ಲಿ ಮುಖ್ಯ ಭೂಮಿಕೆ ನಿರ್ವಹಿಸಿದ್ದು ಆ್ಯಸಿಡ್ ದಾಳಿಕ್ಕೊಳಗಾದ ಯುವತಿಯರಿಗೆ ಹೊಸ ಬದುಕು ಕಲ್ಪಿಸುವ ಅವರಿಗೆ ಚಿಕಿತ್ಸೆ ನೀಡುವ ಕೆಲಸದಲ್ಲಿ ತಲ್ಲೀನರಾಗುವ ಸನ್ನಿವೇಶವಿದೆ. ಕೆಲಸವಿಲ್ಲದ ಮಾಲತಿಗೆ ಎನ್.ಜಿ.ಓ ನಲ್ಲಿ ಕೆಲಸ ನೀಡುವುದು ನಂತರ ಅಮೊಲ್ ಮತ್ತು ಮಾಲತಿ ನಡುವೆ ಪ್ರೇಮಾಂಕುರವಾಗುವುದು ಎಲ್ಲವೂ ಕೂಡ ಅದ್ಬುತವಾಗಿ ಮೂಡಿ ಬಂದಿದೆ. ಸಿನಿಮಾದ‌ ಮೊದಲರ್ಧಕ್ಕಿಂತ ಇಂಟರ್ವಲ್ ನಂತರ ಭಾಗ ಇನ್ನಷ್ಟು ಪ್ರೇಕ್ಷಕರನ್ನು ಹಿಡಿದಿಟ್ಟುಕೊಳ್ಳುತ್ತದೆ. ಅಮೋಲ್ ಪಾತ್ರಧಾರಿ ಹೇಳುವ ‘ಆ್ಯಸಿಡ್ ಮೊದಲು ತಲೆಯಲ್ಲಿ ತುಂಬುತ್ತದೆ, ನಂತರ ಕೈಗೆ ಬರುತ್ತದೆ’ ಎಂಬ ಡೈಲಾಗ್ ವಾಸ್ತವವನ್ನು ಸಮೀಕರಿಸುತ್ತಿತ್ತು.

ಸಾಮಾಜಿಕ ಜಾಲಾತಾಣದಲ್ಲಿ ಚರ್ಚೆಯಾಗುವಂತೆ ಈ ಸಿನಿಮಾದಲ್ಲಿ ಯಾವುದೇ ಧರ್ಮವನ್ನು ಹೀಯಾಳಿಸುವ ಕೆಲಸವಾಗಿಲ್ಲ. ಬದಲಾಗಿ ಆ್ಯಸಿಡ್ ದಾಳಿಯಂತಹ ಕೃತ್ಯಕ್ಕೆ ಧರ್ಮವಿಲ್ಲವೆಂಬುವುದನ್ನು ಸ್ಪಷ್ಟವಾಗಿ ತೋರಿಸಲಾಗಿದೆ. ಈ ಸಿನಿಮಾದಲ್ಲಿ ಬರುವ ಇತರ ಪಾತ್ರಗಳಲ್ಲಿ ಅದು ಸ್ಪಷ್ಟವಾಗುತ್ತದೆ. ಈ ಸಿನಿಮಾವನ್ನು ನೋಡಿದಾಗ ಆ್ಯಸಿಡ್ ದಾಳಿಗೊಳಗಾದ ಸಂತ್ರಸ್ಥ ಯುವತಿಯರ ಪರ ಪ್ರೇಕ್ಷರ ಮನಸ್ಸು ಮಿಡಿಯುವುದು ಗ್ಯಾರಂಟಿ.

LEAVE A REPLY

Please enter your comment!
Please enter your name here