ಯು.ಎ.ಇ: ದಿನಾಂಕ 8.3.2019 ರಂದು ಹೆಮ್ಮೆಯ UAE ಕನ್ನಡತಿಯರಾದ ಮಮತಾ ರಾಘವೇಂದ್ರ, ಮಮತಾ ಸೆಂಥಿಲ್ ಹಾಗು ಅನಿತಾ ರಾಮ್ ಅವರುಗಳ ನೇತೃತ್ವದಲ್ಲಿ ಹೆಮ್ಮೆಯ UAE ಕನ್ನಡತಿಯರು ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯನ್ನು ಸಂಭ್ರಮದಿಂದ ಆಚರಿಸಿದರು.ಮಂಕೂಲ್ ಪಾರ್ಕ್, ದುಬೈ ನಲ್ಲಿ ಬೆಳಿಗ್ಗೆ ೧೦ ಗಂಟೆ ಯಿಂದ ಸಂಜೆ ೫ ಗಂಟೆಯವರೆಗೆ ನಡೆಸಲಾದ ಈ ಕಾರ್ಯಕ್ರಮದಲ್ಲಿ ೭೫ಕ್ಕೂ ಹೆಚ್ಚಿನ ಕನ್ನಡತಿಯರು ಭಾಗವಹಿಸಿ ಕನ್ನಡದ ಇಂಪನ್ನು ಅರಬ್ಬೀ ನಾಡಲ್ಲಿ ಹರಿಸಿದರು.ಅನೇಕ ಮನೋರಂಜನೀಯ ಕಾರ್ಯಕ್ರಮಗಳು, ಮೋಜಿನ ಆಟೋಟಗಳು ಈ ಕಾರ್ಯಕ್ರಮದ ಮುಖ್ಯ ಅಂಶಗಳು.

ತಮ್ಮ ಎಲ್ಲಾ ಚಿಂತೆಗಳನ್ನು ಅದಿಗೊತ್ತಿ UAE ನಲ್ಲಿ ನೆಲಸಿರುವ ಕನ್ನಡತಿಯರು ಮಹಿಳಾ ದಿನಾಚರಣೆಯನ್ನು ಆನಂದಿಸಿದರು. ಭಾಗವಹಿಸಿದ ಎಲ್ಲ ಕನ್ನಡತಿಯರಿಗೂ ಊಟದ ಹಾಗು ಉಪಹಾರ ಪಾನೀಯ ವ್ಯವಸ್ಥೆಯನ್ನು ಮಾಡಲಾಗಿತ್ತು. ಆಟಗಳಲ್ಲಿ ಭಾಗವಹಿಸಿ ಮೊದಲ ಹಾಗು ಎರಡನೇ ಸ್ಥಾನ ಪಡೆದ ಕಿತ್ತೂರು ಚೆನ್ನಮ್ಮ ಹಾಗು ಒನಕೆ ಓಬವ್ವ ಗುಂಪಿನ ಸದಸ್ಯರಿಗೆ ಬಹುಮಾನಗಳನ್ನು ವಿತರಿಸಲಾಯಿತು.ಈ ಕಾರ್ಯಕ್ರಮಕ್ಕೆ ಎಂಬೆಸಿ ಗ್ರೂಪ್ ಆಫ್ ಕಂಪನೀಸ್ ನ ಶ್ರೀಮತಿ ಸುಧಾ ಹಾಗು ಪ್ರಖ್ಯಾತ ಯೋಗ ಗುರು ಡಾ. ಭಾಗೀರತಿ ಕನ್ನಡತಿ ಅವರುಗಳು ಆಗಮಿಸಿ ಶುಭ ಕೋರಿದರು. ಹೆಮ್ಮೆಯ UAE ಕನ್ನಡಿಗರು ತಂಡದ ಶ್ರೀ ವಿಷ್ಣು ಮೂರ್ತಿ ಅವರು ಕಾರ್ಯಕ್ರಮಕ್ಕೆ ಬಂದು ಶುಭ ಹಾರೈಸಿ ಕಾರ್ಯಕ್ರಮ ಯಶಸ್ವಿ ಯಾಗಲು ಸಹಕರಿಸಿದರು.

ಹಾಗೆಯೇ ಹೆಮ್ಮೆಯ ಕನ್ನಡಿಗರು, ದುಬೈ ತಂಡದ ಸದಸ್ಯರುಗಳಾದ ಡಾ.ಸವಿತಾ, ಪಲ್ಲವಿ , ಸೆಂಥಿಲ್, ಸುದೀಪ್ ಹಾಗು ಮಧು ಗೌಡ ಅವರುಗಳು ಬಂದು ಶುಭಾಶಯಗಳನ್ನು ಕೋರಿದರು.

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.