ನವದೆಹಲಿ : ಕೇಂದ್ರೀಯ ಫ್ರೌಡ ಶಿಕ್ಷಣ ಮಂಡಳಿ (ಸಿಬಿಎಸ್​ಇ) 10ನೇ ತರಗತಿ ಫಲಿತಾಂಶ ಇಂದು ಪ್ರಕಟವಾಗಿದ್ದು, ಕೇರಳ ಪ್ರಥಮ ಸ್ಥಾನವನ್ನು ಪಡೆದಿದೆ. ಡೆಹ್ರಾಡೂನ್​ ವಿದ್ಯಾರ್ಥಿ ಸಿದ್ದಾಂತ್ ಪೆಂಗೋಲಿಯಾ 500ಕ್ಕೆ 499 ಅಂಕ ಪಡೆಯುವ ಮೂಲಕ ದೇಶಕ್ಕೆ ಟಾಪರ್ ಎನಿಸಿಕೊಂಡಿದ್ದಾರೆ.

ಫೆಬ್ರವರಿ 21 ರಿಂದ ಮಾರ್ಚ್ 29ರ ವರೆಗೆ ಸುಮಾರು 4974 ಪರೀಕ್ಷಾ ಕೇಂದ್ರಗಳಲ್ಲಿ ಸಿಬಿಎಸ್​ಇ ಪರೀಕ್ಷೆಯನ್ನು ನಡೆಸಲಾಗಿತ್ತು. ದೇಶದ 19,298 ಶಾಲೆಗಳ 17,61,078 ವಿದ್ಯಾರ್ಥಿಗಳು ಪರೀಕ್ಷೆಯನ್ನು ಎದುರಿಸಿದ್ದರು. ಈ ಪೈಕಿ 16,04,428 ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದು ಶೇ.99.85 ಫಲಿತಾಂಶ ನೀಡಿರುವ ಕೇರಳ ಸಿಬಿಎಸ್​ಇ ಪರೀಕ್ಷೆಯಲ್ಲಿ ಮತ್ತೊಮ್ಮೆ ಮೊದಲ ಸ್ಥಾನ ಪಡೆಯುವ ಮೂಲಕ ತನ್ನ ಸ್ಥಾನವನ್ನು ಉಳಿಸಿಕೊಂಡಿದೆ.

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.