ಉಡುಪಿ: ದನ ಕಳ್ಳತನ ಮಾಡಿ, ಅಕ್ರಮವಾಗಿ ಸಾಗಿಸುವುದು ಇಸ್ಲಾಮಿನ ಬೋಧನೆಗೆ ವಿರುದ್ಧವಾಗಿದೆ ಎಂದು ಉಡುಪಿಯ ಸಂಯುಕ್ತ ಜಮಾಅತ್ ಖಾಝಿ ಅಲ್ ಹಜ್ ಪಿ ಇಬ್ರಾಹಿಂ ಮುಸ್ಲಿಯಾರ್ ಬೇಕಲ್ ಹೇಳಿದ್ದಾರೆ.

ಹಿಂದು ಧರ್ಮ ಬಾಂಧವರು ದನವನ್ನು ಪೂಜಿಸುತ್ತಾರೆ, ಮುಸ್ಲಿಮರು ಆಹಾರವಾಗಿ ಸೇವಿಸುತ್ತಾರೆ. ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ಪರಸ್ಪರ ನಂಬಿಕೆ, ಭಾವನೆಗಳಿಗೆ ನೋವಾಗದಂತೆ ವರ್ತಿಸಬೇಕೆಂದು ಕಾಝಿ ಬೇಕಲ್ ಕರೆ ನೀಡಿದ್ದಾರೆ.

ದನ ಕರುಗಳನ್ನು ಸಾಗಿಸುವಾಗ ಅದರ ಮೇಲೆ ದೌರ್ಜನ್ಯವೆಸಗಬಾರದು. ಕಳ್ಳತನ ಮಾಡಿ ತಂದ ದನಕರುಗಳನ್ನು ಮಾಂಸಕ್ಕಾಗಿ ಬಳಸುವುದು ಧರ್ಮ ನಿಷಿದ್ಧ ಕಾರ್ಯ. ಅದನ್ನು ಮಾರಟ ಮಾಡುವುದು, ಇತರರಿಗೆ ತಿನಿಸುವುದು ಘನಘೋರ ಅಪರಾಧವಾಗಿದೆ. ಇಸ್ಲಾಮ್ ಹಲಾಲ್ (ಧರ್ಮ ಸಮ್ಮತ) ಮಾಂಸವನ್ನು ಮಾತ್ರ ತಿನ್ನಲು ಪ್ರೋತ್ಸಾಹಿಸುತ್ತದೆಂದು ಹೇಳಿದ್ದಾರೆ.

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.